Karnataka Times
Trending Stories, Viral News, Gossips & Everything in Kannada

70 ವರ್ಷ ಮೇಲ್ಪಟ್ಟವರಿಗೆ ಗುಡ್ ನ್ಯೂಸ್! ಕರ್ನಾಟಕದ ಗ್ಯಾರಂಟಿಗೆ ಕೇಂದ್ರದ ಹೊಸ ಯೋಜನೆ

advertisement

ಹಿರಿಯ ನಾಗರಿಕರ ವಿಚಾರದಲ್ಲಿ ಕೇಂದ್ರ ಸರ್ಕಾರ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಉತ್ತಮವಾಗಿರುವಂತಹ ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸ ಮಾಡಿದೆ. ಅದರಲ್ಲಿ ವಿಶೇಷವಾಗಿ ಹಿರಿಯ ನಾಗರಿಕರಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರೋಗ್ಯ ಸಮಸ್ಯೆಗಳು ಎದುರಾದಾಗ ಅದನ್ನು ಗುಣಪಡಿಸುವ ಕಾರಣಕ್ಕಾಗಿ ಆಸ್ಪತ್ರೆಗೆ ಆಗಾಗ ಹೋಗಿ ಬರುವಂತಹ ಕೆಲಸವನ್ನು ಮಾಡಬೇಕಾಗುತ್ತದೆ. ಆದರೆ ಇನ್ಮುಂದೆ 70ಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಯಾವುದೇ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

WhatsApp Join Now
Telegram Join Now

ರಾಷ್ಟ್ರದ ರಾಷ್ಟ್ರಪತಿ ಆಗಿರುವಂತಹ ದ್ರೌಪದಿ ಮುರ್ಮು ರವರು ಇನ್ಮುಂದೆ 70 ವಯಸ್ಸಿನ ಮೇಲೆ ಇರುವಂತಹ ಹಿರಿಯ ನಾಗರಿಕರಿಗೆ ಆಯುಷ್ಮಾನ್ ಭಾರತ್ ವಿಮಾ ಯೋಜನೆ (Ayushman Bharat Yojana) ಅಡಿಯಲ್ಲಿ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎನ್ನುವಂತಹ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

 

Image Source: GST Suvidha Kendra

 

ಈಗಾಗಲೇ ಈ ಯೋಜನೆ ಅಡಿಯಲ್ಲಿ 55 ಕೋಟಿಗೂ ಹೆಚ್ಚಿನ ಫಲಾನುಭವಿಗಳಿಗೆ ಉಚಿತ ಆರೋಗ್ಯ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎನ್ನುವಂತಹ ಮಾತನ್ನು ಕೂಡ ಈ ಸಂದರ್ಭದಲ್ಲಿ ರಾಷ್ಟ್ರಪತಿ ಆಡಿದ್ದಾರೆ. ಇದೇ ಯೋಜನೆ ಅಡಿಯಲ್ಲಿ 25,000 ಜನ ಔಷಧಿ ಕೇಂದ್ರವನ್ನ ತೆರೆಯುವಂತಹ ಪ್ರಕ್ರಿಯೆಗೆ ಕೂಡ ವೇಗವನ್ನು ನೀಡಲಾಗಿದೆ ಎಂಬುದಾಗಿ ಹೇಳಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ 70 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಕೂಡ ಇದೇ ಯೋಜನೆ ಅಡಿಯಲ್ಲಿ ಇನ್ಮುಂದೆ ಉಚಿತ ಚಿಕಿತ್ಸೆಯನ್ನು ಪಡೆದುಕೊಳ್ಳಲಿದ್ದಾರೆ ಅನ್ನುವಂತಹ ಮಾತನ್ನು ಆಡಿದ್ದಾರೆ.

advertisement

ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಯೋಜನೆ (PM Ayushman Bharat Yojana) ಈಗಾಗಲೇ 12 ಕೋಟಿ ಗಿಂತ ಹೆಚ್ಚಿನ ಕುಟುಂಬಗಳಿಗೆ 5 ಲಕ್ಷಗಳ ವರೆಗೆ ವಾರ್ಷಿಕ ಉಚಿತ ಚಿಕಿತ್ಸೆಯನ್ನು ನೀಡುವಂತಹ ಕೆಲಸವನ್ನು ಮಾಡಿಕೊಂಡು ಬರುತ್ತಿದ್ದು ವೈದ್ಯಕೀಯ ಲೋಕದಲ್ಲಿ ಹಿಂದುಳಿದ ವರ್ಗದವರಿಗೂ ಕೂಡ ಯಾವುದೇ ರೀತಿಯ ಕೊರತೆ ಉಂಟಾಗಬಾರದು ಎನ್ನುವಂತಹ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯನ್ನು ಕಾರ್ಯನಿರ್ವಹಿಸುತ್ತಿರೋದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ.

 

Image Source: PNB MetLife

 

ಆಯುಷ್ಮಾನ್ ಯೋಜನೆ (Ayushman Bharat Yojana) ಇರುವಂತಹ ಆಸ್ಪತ್ರೆಗಳಲ್ಲಿ ನೀವು ಚಿಕಿತ್ಸೆಯನ್ನು ಪಡೆದುಕೊಂಡರೆ ಈ ಯೋಜನೆಯ ಲಾಭವನ್ನು ಸಂಪೂರ್ಣವಾಗಿ ಪಡೆದುಕೊಳ್ಳಬಹುದಾದಂತಹ ಅವಕಾಶವನ್ನು ಹೊಂದಿರುತ್ತೀರಿ. 5 ಲಕ್ಷ ರೂಪಾಯಿಗಳ ವರೆಗೂ ಕೂಡ ನಿಮ್ಮ ಆಸ್ಪತ್ರೆಯ ಖರ್ಚಿನ ಮೇಲೆ ನೀವು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದ್ದು ಆರ್ಥಿಕವಾಗಿ ಹಿಂದುಳಿದಿರುವಂತಹ ಕುಟುಂಬಗಳಿಗೆ ಇದು ವರದಾನವೇ ಸರಿ ಎಂದು ಹೇಳಬಹುದಾಗಿದೆ.

ಇನ್ನು ಈ ಯೋಜನೆ ಅಡಿಯಲ್ಲಿ ಬರುವಂತಹ ಆಸ್ಪತ್ರೆಗಳನ್ನು ಪಟ್ಟಿ ಮಾಡುವುದಕ್ಕೆ ಕೂಡ ಪ್ರಾಧಿಕಾರ ಈಗಾಗಲೇ ರಾಜ್ಯದ ಇಲಾಖೆಗಳಿಗೆ ಸೂಚಿಸಿದ್ದು ಮುಂದಿನ ದಿನಗಳಲ್ಲಿ ಈ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ. ಆರ್ಥಿಕವಾಗಿ ಹಿಂದುಳಿದಿರುವ ಮತ್ತು ಹಿರಿಯ ವಯಸ್ಕ ನಾಗರೀಕರಿಗೆ ಖಂಡಿತವಾಗಿ ಈ ಯೋಜನೆ ಸಾಕಷ್ಟು ವಿಧದಲ್ಲಿ ಲಾಭದಾಯಕವಾಗಿದೆ.

advertisement

Leave A Reply

Your email address will not be published.