Karnataka Times
Trending Stories, Viral News, Gossips & Everything in Kannada

RTO New Rules: HSRP ಗೂ ಮೊದಲು ಇಂತಹ ಬೈಕುಗಳಿಗೆ ದಂಡ! ಕೋರ್ಟ್ ಆದೇಶದಂತೆ ಇನ್ನೊಂದು ನಿಯಮ

advertisement

HSRP ನಂಬರ್ ಪ್ಲೇಟ್ ಅನ್ನು ಪ್ರತಿಯೊಬ್ಬರೂ ಕೂಡ ಅಳವಡಿಸಿಕೊಳ್ಳಬೇಕು ಎನ್ನುವಂತಹ ಸರ್ಕಾರದ ಆಜ್ಞೆ ಈಗಾಗಲೇ ಜಾರಿಯಲ್ಲಿ ಇರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸೆಪ್ಟೆಂಬರ್ ತಿಂಗಳವರೆಗೂ ಕೂಡ HSRP Number Plate ಅಳವಡಿಸಿಕೊಳ್ಳುವುದಕ್ಕೆ ಸಮಯಾವಕಾಶವನ್ನು ನೀಡಲಾಗಿದ್ದು ಇದಾದ ನಂತರ ನೀವು ಒಂದು ವೇಳೆ ಅಳವಡಿಸಿಕೊಳ್ಳದೆ ಹೋದರೆ 500 ರೂಪಾಯಿಗಳಿಂದ ಸಾವಿರ ರುಪಾಯಿಗಳ ದಂಡವನ್ನು ವಿಧಿಸಲಾಗುತ್ತದೆ ಎನ್ನುವುದಾಗಿ ಸಾರಿಗೆ ಇಲಾಖೆಯಿಂದ ತಿಳಿದು ಬಂದಿದೆ. ಹೀಗಾಗಿ ಈ ವಿಚಾರದ ಮೇಲೆ ನೀವು ನಿರ್ಲಕ್ಷ್ಯ ವಹಿಸುವುದು ಅಷ್ಟೊಂದು ಸೂಕ್ತವಲ್ಲ ಎನ್ನುವುದನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದೆ.

WhatsApp Join Now
Telegram Join Now

ನಂಬರ್ ಪ್ಲೇಟ್ ಮಾತ್ರ ಅಲ್ಲ ಈ ರೀತಿಯ ಕೆಲಸ ಮಾಡಿದರೆ ಕೂಡ ಬೀಳುತ್ತೆ ಭರ್ಜರಿ ಫೈನ್:

 

Image Source: Business League

 

ಸಾರಿಗೆ ಇಲಾಖೆ ನಮಗೆಲ್ಲರಿಗೂ ತಿಳಿದಿರುವ ಹಾಗೆ ವಾಹನಗಳ ಬಗ್ಗೆ ಕೆಲವೊಂದು ಕಟ್ಟುನಿಟ್ಟಿನ ನಿಯಮಗಳನ್ನ ಹಾಗೂ ಕ್ರಮಗಳನ್ನು ಜಾರಿಗೆ ತಂದಿದ್ದು ಅದನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡುವುದು ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವ ಜನತೆಯಲ್ಲಿ ಹೆಚ್ಚುತ್ತಿರುವಂತಹ ಶೋಕಿಯ ಪ್ರವೃತ್ತಿ ಅದನ್ನ ನಿರ್ವಹಿಸದೆ ಇರೋ ರೀತಿಯಲ್ಲಿ ಮಾಡಿದೆ ಅಂತ ಹೇಳಬಹುದಾಗಿದೆ.

advertisement

ವಿಶೇಷವಾಗಿ ನಾವು ಹೇಳೋಕೆ ಹೊರಟಿರೋದು ವಾಹನಗಳನ್ನು ಮಾಡಿಫಿಕೇಶನ್ (Modification) ಮಾಡುವಂತಹ ದುರಂದರರಿಗೆ. ಆರ್ ಸಿ ಪ್ರಕಾರ ವಾಹನದಲ್ಲಿ ಏನೆಲ್ಲಾ ಇರಬೇಕು ಅದು ಇದ್ದರೆ ಮಾತ್ರ ಅದನ್ನು ಕಾನೂನು ಪ್ರಕಾರ ಎಂಬುದಾಗಿ ಕರೆಯಲಾಗುತ್ತದೆ. ಅದನ್ನು ಹೊರತುಪಡಿಸಿ ವಾಹನದಲ್ಲಿ ಯಾವುದೇ ರೀತಿಯ ಬೇರೆ ಹೆಚ್ಚಿನ ಎಕ್ಸ್ಟ್ರಾ ಫಿಟ್ಟಿಂಗ್ (Extra Fitting) ಮಾಡೋದು ಕಾನೂನು ಬಾಹಿರ ಎಂಬುದಾಗಿ ಪರಿಗಣಿಸಲಾಗುತ್ತದೆ.

 

Image Source: The Financial Express

 

ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ರಾಯಲ್ ಎನ್ಫೀಲ್ಡ್ (Royal Enfield) ಬೈಕ್ ಅನ್ನು ಖರೀದಿ ಮಾಡುವಂತಹ ಯೋಚನೆ ಮಾಡುತ್ತಾರೆ. ಆದರೆ ಅದಕ್ಕಿಂತಲೂ ಕೆಟ್ಟ ಪ್ರವೃತ್ತಿ ಏನಂದರೆ ಅದರಲ್ಲಿರುವಂತಹ ಸೈಲೆನ್ಸರ್ (Silencer) ಅನ್ನು ಬದಲಿಸಿ ಹೆಚ್ಚು ಕರ್ಕಶ ಶಬ್ದವನ್ನು ಮಾಡುವಂತಹ ಸೈಲೆನ್ಸರ್ ಅನ್ನು ಅಳವಡಿಸುತ್ತಾರೆ ಹಾಗೂ ಅದರಲ್ಲಿ ಊರು ತುಂಬಾ ತಿರ್ಗಾಡುತ್ತಾರೆ. ಇದರಿಂದಾಗಿ ಎಷ್ಟು ಶಬ್ದ ಮಾಲಿನ್ಯ ಆಗುತ್ತದೆ ಅನ್ನುವಂತಹ ಅರಿವು ಅವರಲ್ಲಿ ಇದ್ದರೂ ಕೂಡ ಕೇವಲ ತಮ್ಮ ಶೋಕಿಗಾಗಿ ಇದನ್ನ ಮಾಡುತ್ತಾರೆ. ಆದರೆ ಇನ್ಮುಂದೆ ಹೀಗೆ ಮಾಡೋ ಹಾಗಿಲ್ಲ ಅನ್ನೋದನ್ನ ದಯವಿಟ್ಟು ತಿಳಿದುಕೊಳ್ಳಿ.

ಯಾಕಂದ್ರೆ ಜುಲೈ ಒಂದರಿಂದ ಪ್ರಾರಂಭವಾಗಿ ಸಾರಿಗೆ ಇಲಾಖೆಯ ಪ್ರತಿಯೊಂದು ನಿಯಮಗಳನ್ನು ಕೂಡ ಕಟ್ಟುನಿಟ್ಟಿನ ರೂಪದಲ್ಲಿ ಪ್ರತಿಯೊಬ್ಬರು ಪಾಲಿಸಲೇಬೇಕು ಎನ್ನುವಂತಹ ಆದೇಶವನ್ನು ಹೊರಡಿಸಲಾಗಿದ್ದು ಇನ್ನೊಂದು ವೇಳೆ ನೀವು ಈ ರೀತಿಯ ಸೈಲೆನ್ಸರ್ ಜೊತೆಗೆ ನಿಮ್ಮ ವಾಹನದ ಜೊತೆಗೆ ಸಿಕ್ಕಿಬಿದ್ರೆ 500 ರೂಪಾಯಿಗಳವರೆಗೆ ದಂಡವನ್ನು ನೀವು ಕಟ್ಟಬೇಕಾಗುತ್ತದೆ ಹಾಗೂ ಇದು ಕೇವಲ ಮೊದಲ ಬಾರಿ ತಪ್ಪು ಮಾಡಿದ್ದಲ್ಲಿ ಮಾತ್ರ ಆದರೆ ಮತ್ತೆ ನೀವು ಇದೇ ರೀತಿ ಸಿಕ್ಕಿಬಿದ್ರೆ ಹೆಚ್ಚಿನ ಹಣವನ್ನು ದಂಡ ರೂಪದಲ್ಲಿ ಕಟ್ಟಬೇಕಾಗುತ್ತದೆ ಹಾಗೂ ಕೆಲವೊಮ್ಮೆ ಸೈಲೆನ್ಸರ್ ಅನ್ನು ಟ್ರಾಫಿಕ್ ಪೊಲೀಸರು ಜಫ್ತು ಮಾಡಿರುವಂತಹ ಉದಾಹರಣೆಗಳು ಕೂಡ ಸಾಕಷ್ಟು. ಹೀಗಾಗಿ ಇನ್ಮುಂದೆ ಈ ವಿಚಾರದ ಬಗ್ಗೆ ಸ್ವಲ್ಪ ಮಟ್ಟಿಗೆ ಹೆಚ್ಚಿನ ನಿಗಾ ವಹಿಸಿ.

advertisement

Leave A Reply

Your email address will not be published.