Karnataka Times
Trending Stories, Viral News, Gossips & Everything in Kannada

Gruha lakshmi Yojana: ಗೃಹಜ್ಯೋತಿ, ಗೃಹಲಕ್ಹ್ಮಿ ಲಾಭ ಪಡೆಯುತ್ತಿರುವ ಜನರಿಗೆ ದೊಡ್ಡ ಕಹಿಸುದ್ದಿ! ಬೇಸರದ ನಿರ್ಧಾರವಿದು

advertisement

Gruhalakshmi Yojana Updates: ಸ್ನೇಹಿತರೆ, ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪ್ರಚಾರದ ಸಮಯದಲ್ಲಿ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದರೆ ಜನರಿಗೆ ಉಚಿತವಾಗಿ ಐದು ಗ್ಯಾರಂಟಿಗಳನ್ನು ನೀಡುವ ಭರವಸೆಯನ್ನು ನೀಡಿದರು. ಅದರಂತೆ ಬಹುಮತಗಳಿಂದ ಕಾಂಗ್ರೆಸ್ ಗೆದ್ದು ಕರ್ನಾಟಕದ ಅಧಿಕಾರವನ್ನು ಸ್ವೀಕರಿಸಿ ಸಿದ್ದರಾಮಯ್ಯನವರು ಸಿಎಂ ಕುರ್ಚಿಯನ್ನೇರಿದ ನಂತರ ಶಕ್ತಿ ಯೋಜನೆ(Shakti Yojana), ಗೃಹಲಕ್ಷ್ಮಿ ಯೋಜನೆ, ಯುವನಿಧಿ ಯೋಜನೆ(Yuva Nidhi Yojana) ಹೀಗೆ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೊಳಿಸಿದರು. ಇದರಿಂದ ಲಕ್ಷಾಂತರ ಜನರು ಅನುಕೂಲವನ್ನು ಪಡೆದುಕೊಳ್ಳುತ್ತಿರುವುದರಲ್ಲಿ ಯಾವುದೇ ಅನುಮಾನವಿಲ್ಲ.

WhatsApp Join Now
Telegram Join Now

ಕರ್ನಾಟಕದ ನಾಗರಿಕರಿಗೆ ತಟ್ಟಲಿದೆ ಬೆಲೆ ಏರಿಕೆಯ ಕಾವು!

ಆದರೆ ಮುಂದಿನ ದಿನಮಾನಗಳಲ್ಲಿ ಈ ಎಲ್ಲಾ ಯೋಜನೆಯನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗಲು ಸರ್ಕಾರದ ಬುಕ್ಕಸದಲ್ಲಿ ಹಣವಿಲ್ಲ, ಗ್ಯಾರೆಂಟಿ ಯೋಜನೆಗಳಿಗೆ ಹಣ ಒದಗಿಸಲು ಸರ್ಕಾರ ಹರಸಾಹಾಸ ನಡೆಸುತ್ತಿದೆ. ಇದರಿಂದಾಗಿ ಕಾಂಗ್ರೆಸ್ ಸರ್ಕಾರ(Congress government) ಆದಾಯದ ಮೂಲಗಳನ್ನು ಹುಡುಕಿಕೊಳ್ಳಲು ಯೋಜನೆ ಹೂಡಿದ್ದು ಈ ಕಾರಣದಿಂದ ಈಗಾಗಲೇ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸಲ್(petrol and diesel) ಬೆಲೆಯನ್ನು ಹೆಚ್ಚು ಮಾಡಿದ್ದಾರೆ, ಕಳೆದ ಕೆಲವು ದಿನಗಳ ಹಿಂದೆ ಹಾಲಿನ ಬೆಲೆಯನ್ನು ಏರಿಕೆ ಮಾಡಲಾಯಿತು. ತರಕಾರಿ ಮತ್ತು ಕಾಳು ಕಡ್ಡಿಯ ಬೆಲೆಗಳನ್ನು ಹೆಚ್ಚಿಸಿ ಜನಸಾಮಾನ್ಯರ ಮೇಲಿನ ಹೊರೆಯನ್ನು ದುಪಟ್ಟು ಮಾಡಲು ಮುಂದಾಗಿದ್ದಾರೆ.

price hike karnataka

ದಿಡೀರ್ ₹2 ಏರಿಕೆಯಾದ ಹಾಲಿನ ದರ

ರಾಜ್ಯದಲ್ಲಿ ಇದ್ದಕ್ಕಿದ್ದ ಹಾಗೆ ಹಾಲಿನ ದರವು ಏರಿಕೆಯಾಗಿದ್ದು, ಪ್ಯಾಕೆಟ್ ನಲ್ಲಿ ಬರುವಂತಹ ಹಾಲಿನ ಮೇಲೆ ₹2 ಸರ್ಕಾರ ಹೆಚ್ಚು ಮಾಡಿದೆ. ಸಂದರ್ಶಕರು ಸಿಎಂ ಸಿದ್ದರಾಮಯ್ಯನವರನ್ನು ಪ್ರಶ್ನೆ ಮಾಡಿದಾಗ ಹಾಲಿನ ಬೆಲೆಯನ್ನು ಏರಿಕೆ ಮಾಡಿಲ್ಲ ಬದಲಿಗೆ ನಮ್ಮ ಕರ್ನಾಟಕದ ಹೈನುಗಾರಿಕೆಯಲ್ಲಿ ಹಾಲಿನ ಉತ್ಪಾದನೆಯು ಹೆಚ್ಚಾಗಿರುವ ಕಾರಣ ಪ್ಯಾಕೆಟ್ ಒಳಗೆ 50ml ಹಾಲನ್ನು ಹೆಚ್ಚಿಸಿದ್ದೇವೆ. ಅದರ ಬೆಲೆಯಾನುಸಾರ ಎರಡು ರೂಪಾಯಿಯನ್ನು ಹೆಚ್ಚಾಗಿ ಮಾಡಿದ್ದೇವೆ ಎಂದಿದ್ದಾರೆ.

advertisement

ಗ್ಯಾರೆಂಟಿ ಯೋಜನೆಗಳಿಂದ ಬಡ ಕುಟುಂಬಗಳಿಗೆ ಬರೆ

ಸಿಎಂ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರವು ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಜನಕ್ಕೆ ಒದಗಿಸಿ ಕೊಡುವ ಮೂಲಕ 56 ಸಾವಿರ ಕೋಟಿ ರೂಗಳ ಹೊರೆ ಹೊಂದಿಧ್ದು, ಇದನ್ನು ಸರಿದೂಗಿಸುವ ಮೂಲ ಹುಡುಕಿಕೊಂಡಿರುವ ಸರ್ಕಾರವು ಬಡ ಹಾಗೂ ಮಾಧ್ಯಮ ವರ್ಗದ ಗ್ರಾಹಕರ ಮೇಲೆ ಇದರ ಹೊರೆಯನ್ನು ಏರಿಸುತ್ತಿದ್ದಾರೆ. ಈ ಕಾರಣದಿಂದ ಇನ್ಮುಂದೆ ನಾವು ಕುಡಿಯುವಂತಹ ನೀರಿನ ದರವು(water price) ಕೂಡ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ತಿಳಿದು ಬಂದಿದೆ.

price hike karnataka
Image Source: Deccan Herald

ಹಾಲಿನಂತೆ ಹೆಚ್ಚಾಗಲಿದೆ ನೀರಿನ ಬೆಲೆ

ಈ ಕುರಿತು ಮಾಧ್ಯಮದವರು ಸರ್ಕಾರವನ್ನು ಪ್ರಶ್ನೆ ಮಾಡಿದಾಗ ಇದಕ್ಕೆ ಅಧಿಕಾರಿಗಳು ಸಮಜಾಯಿಶಿ ನೀಡಿದ್ದು, ಬೆಂಗಳೂರಿನಲ್ಲಿ ಕಳೆದ 14 ವರ್ಷಗಳಿಂದ ನೀರಿನ ಸಮಸ್ಯೆ ಇದೆ ಆದರೂ ಕೂಡ ಸರ್ಕಾರ ಯಾವುದೇ ರೀತಿಯ ದರವನ್ನು ಏರಿಸಿಲ್ಲ. ಆದರೀಗ ನೀರಿನ ದರವನ್ನು ಹೆಚ್ಚಳ ಮಾಡುವ ಅನಿವಾರ್ಯವಿದೆ. ಹೀಗಾಗಿ ಒಂದೆರಡು ರುಪಾಯಿಗಳ ಏರಿಕೆ ಮಾಡಲು ನಾವು ತೀರ್ಮಾನಿಸಿದ್ದೇವೆ ಎಂಬ ಉತ್ತರವನ್ನು ಡಿಕೆಶಿಯು ಕುಮಾರ್ ತಿಳಿಸಿದ್ದಾರೆ. ಇನ್ನು ಗೃಹಲಕ್ಷ್ಮಿ ಹಾಗು ಅನ್ನಭಾಗ್ಯ ಹಣ ಕೂಡ ಎರಡು ತಿಂಗಳಿಂದ ಬಂದಿಲ್ಲ ಹೀಗಾಗಿ ಇದು ಮತ್ತಷ್ಟು ತಡವಾಗಬಹುದು ಎನ್ನಲಾಗುತ್ತಿದೆ.

ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರಿಸಲು ದರ ಹೆಚ್ಚಳ!

ಗ್ಯಾರೆಂಟಿ ಯೋಜನೆಗಳನ್ನು ಯಶಸ್ವಿಯಾಗಿ ಮುಂದುವರೆಸಿಕೊಂಡು ಹೋಗುವ ಸಲುವಾಗಿ ಸರ್ಕಾರ ಜನರ ಮೇಲೆ ಅದರ ಸಂಪೂರ್ಣ ಹೊರೆಯನ್ನು ಹಾಕಲು ತೀರ್ಮಾನಿಸಿದ್ದು, ಈ ಕುಡಿಯುವ ನೀರಿನ ಬೆಲೆಯನ್ನು ಹೆಚ್ಚು ಮಾಡಲು ಮುಂದಾಗಿದ್ದಾರೆ. ಈಗಾಗಲೇ ಬೆಂಗಳೂರಿನ ಜಲ ಮಂಡಳಿ ದರ ಪರಿಷ್ಕರಣೆಯ ಪ್ರಸ್ತಾವನೆಗೆ ಸರ್ಕಾರ ಮುಂದಾಗಿದ್ದು, ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಹಾಲಿನಂತೆ ನೀರಿನ ಬೆಲೆ ಕೂಡ ಏರಿಕೆಯಾಗುವುದು ಗ್ಯಾರಂಟಿ.

advertisement

Leave A Reply

Your email address will not be published.