Karnataka Times
Trending Stories, Viral News, Gossips & Everything in Kannada

KSRTC ಯ ಉಚಿತ ಬಸ್ ಹತ್ತುವ ಮಹಿಳೆಯರಿಗೆ ಬೆಳ್ಳಂಬೆಳಿಗ್ಗೆ ಕಹಿಸುದ್ದಿ!

advertisement

ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿಗೆ ಬಂದ ಕಾರಣ ದಿಂದ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಹಿಂದೆಲ್ಲ ಟಿಕೆಟ್ ಮೊತ್ತ ಕೊಡಲು ಹಣಕಾಸಿನ ಸಮಸ್ಯೆ ಇದ್ದು ಅನೇಕ ಕಡೆ ಹೋಗುವ ಆಸೆ ಮನಸ್ಸು ಇದ್ದರೂ ಹಣ ಇಲ್ಲ ಎಂಬ ಕಾರಣಕ್ಕೆ ಎಲ್ಲ ಆಸೆ ಅದುಮಿಟ್ಟು ಜೀವನ ಸಾಗಿಸುವ ಮಹಿಳೆಯರು ರಾಜ್ಯದ ಕಾಂಗ್ರೆಸ್ ಸರಕಾರ ಶಕ್ತಿ ಯೋಜನೆಯಿಂದಾಗಿ ರಾಜ್ಯಾದ್ಯಂತ ಸರಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಈ ಸೇವೆ ಉಚಿತ ಇದ್ದ ಕಾರಣಕ್ಕೆ ಸರಕಾರದ ನಾಲ್ಕು ನಿಗಮದಲ್ಲಿ ಈಗ ಮಹಿಳೆಯರದ್ದೇ ಕಾರು ಬಾರು ಎನ್ನಬಹುದು.

WhatsApp Join Now
Telegram Join Now

ಮಹಿಳಾ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದ್ದ ಕಾರಣ ಸರಕಾರಿ ಬಸ್ ಅಂತೂ ಈಗ ಫುಲ್ ರಶ್ ಆಗಿ ಬಿಟ್ಟಿದೆ. ಹಾಗಾಗಿ ಸರಕಾರದ ಬಸ್ ನಲ್ಲಿ ಪ್ರಯಾಣ ಮಾಡುವ ವಯೋವೃದ್ಧರಿಗೆ ಹಾಗೂ ಪುರುಷರಿಗೆ ಈ ಬಗ್ಗೆ ಅಸಮಧಾನ ಕೂಡ ವ್ಯಕ್ತವಾಗಿದೆ. ಹಣ ಕೊಟ್ಟು ಟಿಕೇಟ್ ಕೊಂಡರು ಕೂಡ ನಿಂತು ಪ್ರಯಾಣ ಮಾಡಬೇಕು ಎಂದು ಶಕ್ತಿ ಯೋಜನೆಗೆ ದೂರುತ್ತಿದ್ದ ಬೆನ್ನಲ್ಲೆ ರಾಜ್ಯದಲ್ಲಿ ಮುಖ್ಯ ಮಂತ್ರಿ ಸಿಎಂ ಸಿದ್ದರಾಮಯ್ಯ ಅವರು 50 % ಪುರುಷರಿಗೆ ಹಾಗೂ 50% ಮಹಿಳೆಯರಿಗೆ ಬಸ್ ನಲ್ಲಿ ರಿಯಾಯಿತಿ ಇದೆ ಎಂದು ಘೋಷಣೆ ಮಾಡಿದ್ದಾರೆ.

ksrtc hike

advertisement

ಕಹಿ ಸುದ್ದಿ
ಬಸ್ ಉಚಿತ ಎನ್ನುವ ಕಾರಣಕ್ಕೆ ದೇಗುಲ, ಪ್ರವಾಸದ ಸ್ಥಳ, ದೂರದ ನೆಂಟರ ಮನೆ ಎಂದು ಪ್ರಯಾಣ ಮಾಡುವವರಿಗೆ ಇದೀಗ ಸರಕಾರದ ಕಹಿಸುದ್ದಿ ಆಘಾತ ತಂದಿದೆ ಎನ್ನಬಹುದು. ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಸೇವೆ ಇರಲಿದೆ ಆದರೆ ಅವರು ತಾವು ಪ್ರಯಾಣ ಮಾಡುವಾಗಲೇ ಭಾರದ ಲಗೇಜ್ ಕ್ಯಾರಿ ಮಾಡಿದರೆ ಅದಕ್ಕೆ ಕಡ್ಡಾಯವಾಗಿ ಟಿಕೆಟ್ ಮೊತ್ತ ಕಟ್ಟಲೇ ಬೇಕು ಎಂಬ ನಿಯಮ ಇದೆ. ಇದೀಗ ಲಗೇಜ್ ಮೇಲಿನ ಟಿಕೆಟ್ ಶುಲ್ಕ ಏರಿಕೆ ಆಗಲಿದೆ ಎಂಬ ಆಘಾತಕಾರಿ ಮಾಹಿತಿ ಹೊರ ಬಂದಿದೆ.

ಬೆಲೆ ಏರಿಕೆ
ನೀವು ಸರಕಾರಿ ಬಸ್ ನಲ್ಲಿ ಲಗೇಜ್ ಕೊಂಡು ಹೋಗುವಾಗ ಅದಕ್ಕೆ ಪ್ರತ್ಯೇಕ ಟಿಕೆಟ್ ಪಡೆಯಬೇಕು. ಲಗೇಜ್ ಅನ್ನು ಒಂದು ಯುನಿಟ್ ಗೆ 75 ಪೈಸೆಯಂತೆ 10 kg ತೂಕ ಇದ್ದ ಒಂದು ಲಗೇಜ್ ಇದ್ದರೆ ಅದಕ್ಕೆ 5 ರೂಪಾಯಿ ಕನಿಷ್ಟ ಮೊತ್ತ ವಿಧಿಸಲಾಗುತ್ತದೆ. ಅದೇ ರೀತಿ ಇನ್ನು ಮುಂದೆ ಒಂದು ಯುನಿಟ್ ಗೆ 1.50 ರೂಪಾಯಿಯಂತೆ ಬೆಲೆ ಏರಿಕೆ ಮಾಡಲು ಸರಕಾರ ಮುಂದಾಗಿದೆ ಎಂದು ಮಾಹಿತಿ ಮೂಲಗಳು ತಿಳಿಸಿವೆ. ಈ ಪ್ರಕಾರ 10 kg ತೂಕದ ಲಗೇಜ್ ಇನ್ನು ಮುಂದೆ 15 ರೂಪಾಯಿ ತನಕ ಕನಿಷ್ಟ ಟಿಕೆಟ್ ಬೆಲೆ ಇರುವ ಸಾಧ್ಯತೆ ಇದೆ.ksrtc hike

ಲಗೇಜ್ ಗೆ ಟಿಕೇಟ್ ಪಡೆಯದೆ ಪ್ರಯಾಣ ಮಾಡಿದರೆ ಅಂತವರು ದುಪ್ಪಟ್ಟು ಟಿಕೆಟ್ ದರ ನಂತರ ಕೊಡಲೇ ಬೇಕಾಗಲಿದೆ. ಇದರ ಜೊತೆಗೆ ಲಗೇಜ್ ಕೊಂಡು ಪ್ರಯಾಣ ಮಾಡುವವರು ಲಗೇಜ್ ಅನ್ನು ಪಕ್ಕದ ಸೀಟ್ ನಲ್ಲಿ ಇಡುವುದು, ಇಂಜಿನ್ ಪಕ್ಕ, ಡ್ರೈವರ್ ಪಕ್ಕ ಇಡುವಂತಿಲ್ಲ. ಸಹ ಪ್ರಯಾಣಿಕರಿಗೆ ತೊಂದರೆ ಮಾಡುವಂತಿಲ್ಲ. ಬಸ್ ಮೇಲ್ಭಾಗದಲ್ಲಿ ಅಥವಾ ಡಿಕ್ಕಿಯಲ್ಲಿ ಭಾರದ ಲಗೇಜ್ ಕೊಂಡು ಹೋಗಲು ಸೂಚನೆ ನೀಡಲಾಗಿದೆ.

advertisement

Leave A Reply

Your email address will not be published.