Karnataka Times
Trending Stories, Viral News, Gossips & Everything in Kannada

Loan: ಕೇಂದ್ರದ ಈ ಯೋಜನೆಯಡಿ ಮಹಿಳೆಯರಿಗೆ 5 ಲಕ್ಷ ರೂ.ವರೆಗೆ ಬಡ್ಡಿರಹಿತ ಸಾಲ

advertisement

ಇಂದು ಮಹಿಳೆಯರ ಅಭಿವೃದ್ಧಿ ಗಾಗಿ ಸರಕಾರ ಹಲವು ರೀತಿಯ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದ್ದು ಮಹಿಳೆಯರ ಏಳಿಗೆಗಾಗಿ ಹೊಸ ಹೊಸ ಅಭಿವೃದ್ಧಿ ಪರ ಚಟುವಟಿಕೆ ಗಳನ್ನು ಹಮ್ಮಿಕೊಳ್ಳುತ್ತಿದೆ.ಅದೇ ರೀತಿ ರಾಜ್ಯ ಸರಕಾರವು ಗ್ಯಾರಂಟಿ ಯೋಜನೆಗಳ ಮೂಲಕ ಶಕ್ತಿ ಯೋಜನೆ (Shakti Yojana) ಮತ್ತು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯನ್ನು ಕೂಡ ಜಾರಿ ಮಾಡಿದೆ. ಅದೇ ರೀತಿ ಕೇಂದ್ರ ಸರಕಾರ ಕೂಡ ಮಹಿಳೆಯರ ಅಭಿವೃದ್ಧಿ ಗಾಗಿ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಸ್ವ ಉದ್ಯಮ ಮಾಡಲು ಪ್ರೋತ್ಸಾಹ:

ಇಂದು ಮಹಿಳೆಯರು ಕೂಡ ಶಿಕ್ಷಣ ವಂತರಾಗಿದ್ದು ವಿವಿಧ ಕ್ಷೇತ್ರದಲ್ಲಿ ತೊಡಗಿ ಕೊಂಡಿದ್ದಾರೆ. ಅದೇ ರೀತಿ ಮಹಿಳೆಯರನ್ನು ಉದ್ಯಮಶೀಲತೆ ಕ್ಷೇತ್ರದಲ್ಲಿ ತೊಡಗಿ ಕೊಳ್ಳುವಂತೆ ಮಾಡಲು ಅವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಹೊಸ ದಾದ‌ ಯೋಜನೆಯನ್ನು ರೂಪಿಸಿದ್ದು ಇದರ ಅಡಿಯಲ್ಲಿ ಬಡ್ಡಿ ರಹಿತ ಸಾಲವನ್ನು ಪಡೆಯಬಹುದಾಗಿದೆ

ಲಕ್ ಪತಿ ದೀದಿ ಯೋಜನೆ:

 

Image Source: Saam Tv

 

advertisement

ಕೇಂದ್ರ ಸರಕಾರವು ಲಕ್ ಪತಿ ದೀದಿ ಯೋಜನೆ (Lakhpati Didi Yojana) ಯನ್ನು ಆರಂಭ ಮಾಡಿದ್ದು ಈ‌ಯೋಜನೆ ಯಡಿ 5 ಲಕ್ಷ ರೂಪಾಯಿಗಳವರೆಗೆ ಸಾಲ (Loan) ಸೌಲಭ್ಯ ಪಡೆಯಬಹುದು. ಮಹಿಳೆಯರು ಸ್ವ ಉದ್ಯಮ ದಲ್ಲಿ ತೊಡಗಿ ಕೊಳ್ಳಲು ಕೌಶಲ್ಯ ಅಭಿವೃದ್ಧಿ ತರಬೇತಿ ಯನ್ನು ಕೂಡ ಇಲ್ಲಿ ನೀಡಲಾಗುತ್ತದೆ. ಹಾಗಾಗಿ ಆಸಕ್ತಿ ಇದ್ದವರು ಅರ್ಜಿ ಹಾಕಬಹುದಾಗಿದೆ.

ಈ ದಾಖಲೆಗಳು ಕಡ್ಡಾಯ:

  • Aadhaar card
  • PAN card
  • Address proof
  • Income certificate
  • mobile no
  • Bank account details
  • Photo etc

ಅರ್ಹತೆ ಏನು?

  • ಸ್ವಸಹಾಯ ಸಂಘಕ್ಕೆ ಸೇರುವ ಮೂಲಕ ಈ ಯೋಜನೆಯನ್ನು ಪಡೆಯಬಹುದು. ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರದ ಮೂಲಕವೂ ಈ ಯೋಜನೆಯ ಬಗ್ಗೆ ಮಾಹಿತಿ ಪಡೆದು ಅರ್ಜಿ ಹಾಕಬಹುದು.
  • ಅರ್ಜಿ ಹಾಕಲು 18ರಿಂದ 50 ವರ್ಷದ ಒಳಗಿನ ಮಹಿಳೆಯರು ಮಾತ್ರ ಅರ್ಹರು.
  • ಸ್ವಂತ ಉದ್ಯಮವನ್ನು ಪ್ರಾರಂಭಿಸುವಂತಹ ಮಹಿಳೆಯರು ಮಾತ್ರ ಅರ್ಜಿ ಹಾಕಬಹುದು.
  • ಸ್ವಸಹಾಯ ಸಂಘಗಳಲ್ಲಿ ಈ ಮಹಿಳೆಯರು ಈಗಾಗಲೇ ಸದಸ್ಯರಾಗಿರಬೇಕು.

advertisement

Leave A Reply

Your email address will not be published.