Karnataka Times
Trending Stories, Viral News, Gossips & Everything in Kannada

HDFC: ದೇಶಾದ್ಯಂತ ಹೊಸ HDFC ಬ್ಯಾಂಕ್ ನಲ್ಲಿ ಖಾತೆ ಇದ್ದವರಿಗೆ 5 ಹೊಸ ರೂಲ್ಸ್

advertisement

ಭಾರತದ ಪ್ರೈವೇಟ್ ಸೆಕ್ಟರ್ ನಲ್ಲಿ ಅತ್ಯಂತ ದೊಡ್ಡ ಮಟ್ಟದ ಗ್ರಾಹಕರನ್ನು ಹೊಂದಿರುವಂತಹ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಆಗಸ್ಟ್ ಒಂದನೇ ತಾರೀಖಿನಿಂದ ಜಾರಿಗೆ ಬರುವ ರೀತಿಯಲ್ಲಿ ಹೊಸ ನಿಯಮಗಳನ್ನು ಬದಲಾವಣೆ ಮಾಡಿದ್ದು ವಿಶೇಷವಾಗಿ ಇದು ಕ್ರೆಡಿಟ್ ಕಾರ್ಡ್ (Credit Card) ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ ಅಂತ ಹೇಳಬಹುದಾಗಿದೆ. ಹಾಗಿದ್ರೆ ಬನ್ನಿ ಆ ಬದಲಾವಣೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

HDFC Credit Card Changes:

 

Image Source: Gujarat Headlines

 

  • ಇನ್ಮುಂದೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳಾಗಿರುವಂತಹ Cred, CheQ ಗಳಂತಹ ಅಪ್ಲಿಕೇಶನ್ ಗಳಲ್ಲಿ ನೀವು ಮಾಡುವಂತಹ ಪೇಮೆಂಟ್ ಗಳ ಮೇಲೆ ಒಂದು ಪ್ರತಿಶತ ಹೆಚ್ಚುವರಿ ಚಾರ್ಜ್ ಅನ್ನು ವಿಧಿಸಲಾಗುತ್ತದೆ. ಇನ್ನು ಶುಲ್ಕ ಎನ್ನುವುದು ತಿಂಗಳಿಗೆ 3000 ವರೆಗೂ ಕೂಡ ಹೋಗಬಹುದಾಗಿದೆ ಅನ್ನೋದನ್ನ ತಿಳಿದುಕೊಳ್ಳಿ.
  • ಇನ್ನು ಇಂಧನದ ಪೇಮೆಂಟ್ ಗಾಗಿ ನೀವು ಮಾಡುವಂತಹ ಟ್ರಾನ್ಸಾಕ್ಷನ್ ಮೇಲೆ ಕೂಡ 15000 ವರೆಗೆ ಯಾವುದೇ ಶುಲ್ಕ ಇರುವುದಿಲ್ಲ ಆದರೆ 15000 ನಂತರ ಮ್ಯಾಕ್ಸಿಮಮ್ 3000 ರೂಪಾಯಿಗಳವರೆಗೆ ಒಂದು ಪ್ರತಿಶತ ಶುಲ್ಕವನ್ನು ವಿಧಿಸಲಾಗುತ್ತದೆ.
  • 50,000ಗಳ ಒಳಗೆ ಇರುವಂತಹ ಯುಟಿಲಿಟಿ ಟ್ರಾನ್ಸಾಕ್ಷನ್ ಮೇಲೆ ಯಾವುದೇ ರೀತಿಯ ಚಾರ್ಜಿಂಗ್ ವಿಧಿಸಲಾಗುವುದಿಲ್ಲ ಆದರೆ 50,000ಗಳ ಮೇಲಿನ ಟ್ರಾನ್ಸಾಕ್ಷನ್ ಗೆ 1 ಪ್ರತಿಶತ ಚಾರ್ಜ್ ವಿಧಿಸಲಾಗುತ್ತದೆ. ಇದರ ಲಿಮಿಟ್ ಕೂಡ ಮ್ಯಾಕ್ಸಿಮಮ್ 3000 ಆಗಿರುತ್ತೆ.
  • ಇಂಟರ್ನ್ಯಾಷನಲ್ ಕರೆನ್ಸಿಯ ಟ್ರಾನ್ಸಾಕ್ಷನ್ ನಲ್ಲಿ 3.5% ಚಾರ್ಜ್ ಅನ್ನು ವಿಧಿಸಲಾಗುತ್ತದೆ.

advertisement

ಸ್ಕೂಲ್ ಚಾರ್ಜಸ್:

 

Image Source: Card Insider

 

ಇಲ್ಲಿ ಕೂಡ ನೇರವಾಗಿ ಮಾಡುವಂತ ಪೇಮೆಂಟ್ ಮೇಲೆ ಯಾವುದೇ ರೀತಿಯ ಚಾರ್ಜಸ್ ಗಳು ಇರೋದಿಲ್ಲ ಆದರೆ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳ ಮೂಲಕ ನೀವು ಪೇಮೆಂಟ್ ಮಾಡಿದರೆ 3000 ರೂಪಾಯಿಗಳ ಲಿಮಿಟ್ ಮೀರಿದಂತೆ ಒಂದು ಪ್ರತಿಶತ ಶುಲ್ಕವನ್ನು ಈ ಟ್ರಾನ್ಸ್ಲೇಷನ್ ಮೇಲೆ ಕೂಡ ವಿಧಿಸಲಾಗುತ್ತದೆ.

ಇನ್ನೊಂದು ವೇಳೆ ನೀವು ಲೇಟ್ ಆಗಿ ಪೇಮೆಂಟ್ ಮಾಡಿದರೆ ಆ ಸಂದರ್ಭದಲ್ಲಿ ನಿಮ್ಮ ಬಾಕಿ ಮೊತ್ತದ ಲೆಕ್ಕಾಚಾರವನ್ನು ಗಮನದಲ್ಲಿಟ್ಟುಕೊಂಡು ನೂರರಿಂದ 1300 ರೂಪಾಯಿಗಳನ್ನು ಚಾರ್ಜಸ್ ರೂಪದಲ್ಲಿ ವಿಧಿಸಲಾಗುತ್ತದೆ. EMI ಪ್ರೊಸೆಸಿಂಗ್ ಫೀಸ್ ಬಗ್ಗೆ ಮಾತನಾಡೋದಾದ್ರೆ 299 ರೂಪಾಯಿಗಳವರೆಗೆ ಚಾರ್ಜಸ್ ಅನ್ನು ವಿಧಿಸಲಾಗುತ್ತದೆ. ಇದನ್ನು ನೀವು ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ (HDFC Credit Card) ಮೂಲಕ ಖರೀದಿ ಮಾಡಿದ್ರೆ ಮಾತ್ರ. ಇನ್ನು ಈ ಚಾರ್ಜಸ್ ಮೇಲೆ ಹೆಚ್ಚುವರಿ ಜಿಎಸ್‌ಟಿ ಶುಲ್ಕವನ್ನು ಕೂಡ ನೀವು ಕಟ್ಟಬೇಕಾಗುತ್ತೆ. ಎಲ್ಲಾ ನಿಯಮಗಳನ್ನು ಹೆಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಆಗಸ್ಟ್ 1ರಿಂದ ಜಾರಿಗೆ ತರುವಂತೆ ನಿಯಮಗಳನ್ನು ಸಿದ್ಧಪಡಿಸಿಕೊಂಡಿದೆ.

advertisement

Leave A Reply

Your email address will not be published.