Karnataka Times
Trending Stories, Viral News, Gossips & Everything in Kannada

Family Law: ತಂದೆಯ ಈ ಆಸ್ತಿಗಳಲ್ಲಿ ಮಗ ಸೊಸೆ ಇಬ್ಬರಿಗೂ ಹಕ್ಕಿಲ್ಲ! ಬೆಳ್ಳಂಬೆಳಿಗ್ಗೆ ತೀರ್ಪು ಬದಲಿಸದ ಕೋರ್ಟ್

advertisement

Family Law in India: ಅನೇಕರಿಗೆ ತಮ್ಮ ಪೂರ್ವಜರು ಉಳಿಸಿಕೊಂಡು ಬಂದಿದ್ದ ಅಥವಾ ಮಾಡಿದ್ದಂತಹ ಆಸ್ತಿ ವರದಾನವಾಗಿ ಒಲಿದು ಬಂದಿರುತ್ತದೆ ಆದರೆ ಯಾರಿಗೂ ಕೂಡ ಆಸ್ತಿ ಹಾಗೂ ಅದರ ಕಾನೂನಿನ ಕ್ರಮಗಳ ಕುರಿತು ಸರಿಯಾದ ಮಾಹಿತಿ ತಿಳಿದಿರುವುದೇ ಇಲ್ಲ. ಹೀಗಿರುವಾಗ ಸುಪ್ರೀಂ ಕೋರ್ಟ್(Supreme Court) ನ ಆದೇಶದ ಪ್ರಕಾರ ತಂದೆಯ ಹೆಸರಿನಲ್ಲಿರುವಂತಹ ಈ ಆಸ್ತಿಯ ಮೇಲೆ ಮಗ ಅಥವಾ ಸೊಸೆ ಯಾವುದೇ ರೀತಿಯ ಹಕ್ಕನ್ನು ಹೊಂದಿರುವುದಿಲ್ಲ. ಹೀಗೆ ನಿಮ್ಮ ತಂದೆಯ ಆಸ್ತಿ(Father’s Property) ಈ ಪಟ್ಟಿಗೆ ಸೇರ್ಪಡೆಯಾಗಿದ್ದರೆ ನೀವು ಯಾವುದೇ ಕಾನೂನಿನ ಕ್ರಮವನ್ನು ಕೈ ತೆಗೆದುಕೊಂಡರು ಅದನ್ನು ಪಡೆಯಲು ಸಾಧ್ಯವಾಗುವುದಿಲ್ಲ.

WhatsApp Join Now
Telegram Join Now

ತಂದೆಯ ಈ ಆಸ್ತಿಯ ಮೇಲೆ ಮಗ ಅಥವಾ ಸೊಸೆಗೆ ಯಾವುದೇ ಹಕ್ಕಿಲ್ಲ

ವಾಸ್ತವವಾಗಿ ಹಿಂದು ಕೌಟುಂಬಿಕ ಕಾನೂನು(Hindu Family law) ಬಹಳ ಸಂಕೀರ್ಣವಾಗಿರುವುದರಿಂದ ಸಾಮಾನ್ಯ ಜನರು ಅದರ ಆಳದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವುದಿಲ್ಲ, ಹೀಗಿರುವಾಗ ಕೌಟುಂಬಿಕ ಕಾನೂನಿನ ಪ್ರಕಾರ, ಆಸ್ತಿಗಳಲ್ಲಿ ಸ್ವಾದಿನವಾಗಿ ಪಡೆದುಕೊಂಡಿರುವ ಆಸ್ತಿ ಹಾಗೂ ಪೂರ್ವಜರಿಂದ ಪಡೆದುಕೊಂಡಿರುವ ಆಸ್ತಿ ಎಂಬ ಎರಡು ವಿಧಗಳಿವೆ. ತಂದೆಯು ಸ್ವಾಧೀನವಾಗಿ ಪಡೆದುಕೊಂಡಿರುವಂತಹ ಆಸ್ತಿಯ ಮೇಲೆ ಮಗನಿಗಾಗಲಿ ಅಥವಾ ಸೊಸೆಗಾಗಲಿ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಆದರೆ ಪೂರ್ವಜರಿಂದ ಬಂದಂತಹ ಆಸ್ತಿಯನ್ನು ಮಗ ಪಡೆಯಲು ಅರ್ಹನಾಗಿರುತ್ತಾನೆ.

FAMILY COURT
Image Source: UNIR Ecuador

advertisement

ಮದುವೆಯ ನಂತರ ತಂದೆ ಆಸ್ತಿಯಲ್ಲಿ ಮಗನಿಗೆ ಎಷ್ಟು ಪಾಲು?

ಹೈಕೋರ್ಟ್ ಇತ್ತೀಚಿಗಷ್ಟೇ ಪ್ರಕಟಿಸಿರುವ ವರದಿಯೊಂದರ ಪ್ರಕಾರ, ಮಗನು ವಿವಾಹಿತನಾಗಿರಲಿ ಅಥವಾ ಅವಿವಾಹಿತನಾಗಿರಲಿ(Married or Unmarried Son) ತಂದೆ ತನ್ನ ಸ್ವಂತ ದುಡ್ಡಿನಿಂದ ಸಂಪಾದಿಸಿರುವ ಆಸ್ತಿಯಲ್ಲಿ ಅಥವಾ ಅವರ ಮನೆಯಲ್ಲಿ ವಾಸಿಸಲು ಯಾವುದೇ ರೀತಿಯ ಕಾನೂನು ಬದ್ಧ ಹಕ್ಕು ಇರುವುದಿಲ್ಲ. ತಂದೆಯು ತನ್ನತನ ಸ್ವಂತ ಇಚ್ಛೆಯಿಂದ ಅದನ್ನು ತನ್ನ ಮಕ್ಕಳಿಗಾದರೂ ನೀಡಬಹುದು ಅಥವಾ ಬೇರೆ ಯಾರಿಗಾದರೂ ಸಂಪೂರ್ಣ ಆಸ್ತಿಯ ಹಕ್ಕನ್ನು ಬರೆಯಬಹುದು. ತಂದೆಯು ತನ್ನ ಜೀವನಮಾನದಲ್ಲಿ ಆ ಎಲ್ಲಾ ಆಸ್ತಿಯನ್ನು ದುಡಿದು ಸಂಪಾದಿಸಿರುವ ಕಾರಣ ಆಸ್ತಿಯ ಮೇಲೆ ತಂದೆಗೆ ಹೆಚ್ಚು ಪ್ರಾಬಲ್ಯ ಹಾಗೂ ಶಕ್ತಿ(More Dominance And Power)ಇರುತ್ತದೆ ಹೀಗಾಗಿ ಮಗನು ತಂದೆ ಆಸ್ತಿಯನ್ನು ಪಡೆದುಕೊಳ್ಳಲು ಯಾವುದೇ ಕಾನೂನು ಬದ್ಧ ಹೋರಾಟ ಮಾಡಿದರು ಅದು ವ್ಯರ್ಥವಾಗುತ್ತದೆ. ಆದರೆ ಪೂರ್ವಜರ ಆಸ್ತಿಯಲ್ಲಿ ಮಗ ಸಮಪಾಲು ಪಡೆದುಕೊಳ್ಳುತ್ತಾನೆ.

ತಂದೆಯಂತೆ ಪೂರ್ವಜರ ಆಸ್ತಿಯಲ್ಲಿ ಮಗನಿಗೂ ಸಮಾನ ಹಕ್ಕು

ತಂದೆಯ ಹೆಸರಿನಲ್ಲಿರುವಂತಹ ಆಸ್ತಿಯು ಪೂರ್ವಜರಿಂದ ಬಂದಿದ್ದಾಗಿದ್ದರೆ ಅದರಲ್ಲಿ ಮಗನಿಗೆ ಸಮಾನ ಹಕ್ಕಿರಲಿದೆ. ತಂದೆ ಆಸ್ತಿ ವಿಭಾಜನೆ ಮಾಡಿದ ಬಳಿಕ ಅಥವಾ ಅಕಾಲಿಕವಾಗಿ ತಂದೆ ಮರ-ಣ ಹೊಂದಿದ ಬಳಿಕ ಅದರ ಎಲ್ಲಾ ಜವಾಬ್ದಾರಿಯನ್ನು ಮಗ ಪಡೆದುಕೊಳ್ಳುತ್ತಾನೆ. ಹಿಂದೂ ಕೌಟುಂಬಿಕ ಕಾನೂನಿನ ಪ್ರಕಾರ ಇಂತಹ ಆಸ್ತಿಯನ್ನು ಸಹ ಕುಟುಂಬದ ಆಸ್ತಿ ಎಂದು ಪರಿಗಣಿಸಲಾಗುತ್ತದೆ.FAMILY COURT

advertisement

Leave A Reply

Your email address will not be published.