Karnataka Times
Trending Stories, Viral News, Gossips & Everything in Kannada

Mukesh Ambani: ಮಿಡಲ್ ಕ್ಲಾಸ್ ಕುಟುಂಬಗಳಿಗೆ ಸಿಹಿಸುದ್ದಿ ಕೊಟ್ಟ ಅಂಬಾನಿ! ಟಿವಿ, AC, ಫ್ರಿಡ್ಜ್ ವಿಷಯವಾಗಿ ಹೊಸ ನಿರ್ಧಾರ

advertisement

ನಮ್ಮ ಭಾರತ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು ಅಂತ ಚಿಕ್ಕ ಮಕ್ಕಳಿಗೂ ಕೂಡ ತಿಳಿದಿದೆ. ಹೌದು ನಾವ್ ಮಾತಾಡ್ತಿರೋದು ರಿಲಯನ್ಸ್ ಸಾಮ್ರಾಜ್ಯದ ಒಡೆಯ ಆಗಿರುವಂತಹ ಮುಖೇಶ್ ಅಂಬಾನಿ(Mukesh Ambani) ಅವರ ಬಗ್ಗೆ. ಹೌದು ಮುಕೇಶ್ ಅಂಬಾನಿ ಅವರು ಅತ್ಯಂತ ಕಡಿಮೆ ಬೆಲೆಗೆ ಫ್ರಿಡ್ಜ್ ಟಿವಿ ಎಸಿ ಗಳನ್ನು ಮಾರಾಟ ಮಾಡುವುದಕ್ಕೆ ಹೊರಟಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

Reliance ನ ಹೊಸ ಯೋಜನೆ

ಎನರ್ಜಿ ಕ್ಷೇತ್ರದಿಂದ ಹಿಡಿದು ಟೆಲಿಕಾಂ ಇಂಡಸ್ಟ್ರಿಯವರಿಗೆ ಫ್ಯಾಷನ್ ಕ್ಷೇತ್ರದಿಂದ ಹಿಡಿದು ಪೆಟ್ರೋಲಿಯಂ ವರೆಗೂ ಕೂಡ ರಿಲಯನ್ಸ್ ಸಾಮ್ರಾಜ್ಯ ಎಲ್ಲಾ ಕಡೆ ಹರಡಿಕೊಂಡಿದ್ದು ಭಾರತ ದೇಶದ ಅತ್ಯಂತ ಶ್ರೀಮಂತ ಕಂಪನಿಯಾಗಿದೆ. ಗ್ರಹಪಯೋಗಿ ಉಪಕರಣಗಳನ್ನು ಇಟ್ಟುಕೊಂಡು ರಿಲಯನ್ಸ್ ಸಂಸ್ಥೆ ಈಗ ದೊಡ್ಡ ಮಟ್ಟದ ಪ್ಲಾನಿಂಗ್ ಅನ್ನು ನಡೆಸಿಕೊಳ್ಳುತ್ತಿದೆ. ಹೌದು ಗೆಳೆಯರೇ ಹೋಂ ಅಪ್ಲೈಯನ್ಸ್ ವಿಭಾಗದಲ್ಲಿ ರಿಲಯನ್ಸ್ ಸಂಸ್ಥೆ ಎಂಟ್ರಿ ನೀಡೋದಕ್ಕೆ ಹೊರಟಿದ್ದು ಇದೇ ಕಾರಣಕ್ಕಾಗಿ ಇದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ಹೋಂ ಅಪ್ಲೈನ್ಸ್ ಕ್ಷೇತ್ರದಲ್ಲಿ ಎಂಟ್ರಿ ನೀಡೋದಕ್ಕೆ ಸಜ್ಜಾಗಿದೆ ರಿಲಯನ್ಸ್!

advertisement

ರಿಲಯನ್ಸ್ ಸಂಸ್ಥೆ ಈಗಾಗಲೇ ಅಕ್ಕಿ ಬೇಳೆಗಳಂತಹ ವಸ್ತುಗಳನ್ನು ಕೂಡ ತನ್ನ ಬ್ರಾಂಡ್ ನೇಮ್ ಅಡಿಯಲ್ಲಿ ಲಾಂಚ್ ಮಾಡಿದೆ. ಈಗ ಎಸಿ ಹಾಗೂ ಟಿವಿ ಗಳಂತಹ ಹೋಂ ಅಪ್ಲೈಯನ್ ಎಲೆಕ್ಟ್ರಿಕಲ್ ವಸ್ತುಗಳ ಕ್ಷೇತ್ರಗಳಲ್ಲಿ ಕೂಡ ತನ್ನ ಕಾಲನ್ನು ಇಡುವುದಕ್ಕೆ ಸಿದ್ಧವಾಗಿ ನಿಂತಿದೆ. ರಿಲಯನ್ಸ್ ಸಂಸ್ಥೆ ಎಲೆಕ್ಟ್ರಾನಿಕ್ಸ್ ಹಾಗೂ ಹೋಂ ಅಪ್ಲೈಯನ್ಸ್ ಕ್ಷೇತ್ರದಲ್ಲಿ ಭಾರತ ದೇಶದಲ್ಲಿ ಸೇರಿದಂತೆ ಎಲ್ಲಾ ಕಡೆಗಳಲ್ಲಿ ವಿದೇಶಿ ಕಂಪನಿಗಳ ವಿರುದ್ಧ ತನ್ನ ವರ್ಚಸ್ಸನ್ನು ಹೆಚ್ಚಿಸುವಂತಹ ಯೋಜನೆಯಲ್ಲಿ ತೊಡಗಿಕೊಂಡಿದೆ ಎಂಬುದಾಗಿ ತಿಳಿದು ಬಂದಿದೆ. ಭಾರತದ ಮಾರುಕಟ್ಟೆಯಲ್ಲಿ ಇರುವಂತಹ ವಿದೇಶಿ ಕಂಪನಿಗಳ ಒತ್ತಡವನ್ನು ಕಡಿಮೆ ಮಾಡುವ ಕಾರಣಕ್ಕಾಗಿ ಕೂಡ ಮುಕೇಶ್ ಅಂಬಾನಿ (Mukesh Ambani) ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರಂತೆ.

Image Source: HT Tech

ಕಡಿಮೆ ಬೆಲೆಯಲ್ಲಿ ದೊರಕಲಿದೆ ರಿಲಯನ್ಸ್ ಸಂಸ್ಥೆಯ ಪ್ರಾಡಕ್ಟ್ಗಳು

ರಿಲಯನ್ಸ್ ಸಂಸ್ಥೆಯ ವಸ್ತುಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ಎಲ್ಲರಿಗೆ ದೊರಕುವ ಕಾರಣದಿಂದಾಗಿಯೇ ಇವುಗಳು ಹೆಚ್ಚಿನ ನೆಟ್ವರ್ಕ್ ಗಳನ್ನು ಹೊಂದಿವೆ. ಮಾರುಕಟ್ಟೆಯಲ್ಲಿ ಕೇವಲ ರಿಟೇಲ್ ಶಾಪ್ ನಲ್ಲಿ ಮಾತ್ರವಲ್ಲದೆ ಡಿಜಿಟಲ್ ಶಾಪ್ ಗಳಲ್ಲಿ ಕೂಡ ರಿಲೆಯನ್ಸ್ ವಸ್ತುಗಳನ್ನು ನೀವು ಕಾಣಬಹುದಾಗಿದೆ. ಬೇರೆ ಎಲೆಕ್ಟ್ರಾನಿಕ್ಸ್ ಹಾಗೂ ಹೋಂ ಅಪ್ಲೈನ್ಸ್ ಗಳಿಗೆ ಹೋಲಿಸಿದರೆ ರಿಲಯನ್ಸ್ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ವಸ್ತುಗಳು ಮುಂದಿನ ದಿನಗಳಲ್ಲಿ ಲಾಂಚ್ ಆದ ನಂತರ ವಿದೇಶಿ ಕಂಪನಿಗಳಿಗೆ ಹೋಲಿಸಿದರೆ ಭಾರತದಲ್ಲಿ ಕಡಿಮೆ ಬೆಲೆಗೆ ಮಾರಾಟ ಆಗುವುದರಿಂದಾಗಿ ಇದು ಬೇರೆ ದೇಶದ ಬ್ರಾಂಡ್ ಗಳಿಗೆ ತೊಂದರೆ ಆಗಬಹುದು ಹಾಗೂ ಮೇಡ್ ಇನ್ ಇಂಡಿಯಾ ಉದ್ದೇಶಕ್ಕೆ ಪೂರಕವಾಗುವ ರೀತಿಯಲ್ಲಿ ಇದು ಭಾರತದಲ್ಲಿ ಕಾಣಿಸಿಕೊಳ್ಳಬಹುದೇ ಎಂಬುದಾಗಿ ಎಲ್ಲರೂ ಅಂದಾಜಿಸಿದ್ದಾರೆ. ಭಾರತದ ಮಾರುಕಟ್ಟೆಯನ್ನು ಆವರಿಸಿಕೊಂಡಿರುವಂತಹ ವಿದೇಶಿ ಬ್ರ್ಯಾಂಡ್ಗಳನ್ನು ತೊಡೆದು ಹಾಕುವುದಕ್ಕೆ Reliance ಸಂಸ್ಥೆ ಸಿದ್ಧವಾಗಿ ನಿಂತಿದೆ.

advertisement

Leave A Reply

Your email address will not be published.