ಇನ್ನು ಮುಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಣಕಾಸಿನ ವ್ಯವಹಾರ ಮಾಡುವುದು ಮಾತ್ರವಲ್ಲದೆ ಎಸ್ಬಿಐ ಎಟಿಎಂ ಫ್ರಾಂಚೈಸಿ ತೆಗೆದುಕೊಂಡು ಕೈ ತುಂಬಾ ಸಂಪಾದನೆ ಮಾಡಬಹುದು. ಎಸ್ ಬಿ ಐ ಎಟಿಎಂ ಮಷೀನ್ಗಳನ್ನು (SBI ATM Machine) ಇತರ ಕಂಪನಿಗಳಿಗೆ ಗುತ್ತಿಗೆ ಕೊಟ್ಟು ಇನ್ಸ್ಟಾಲ್ ಮಾಡಿಸುತ್ತದೆ ಅಂತಹ ಕಂಪನಿಗಳು ಎಟಿಎಂ ಇನ್ಸ್ಟಾಲೇಶನ್ ಫ್ರಾಂಚೈಸಿಯನ್ನು ಪಡೆದುಕೊಳ್ಳುತ್ತವೆ ಬಳಿಕ ಅವರಿಂದ ನೀವು ATM ಇನ್ಸ್ಟಾಲೇಷನ್ ಮಾಡಿಸಿಕೊಂಡು 60 ರಿಂದ 70,000 ವರೆಗೂ ಆದಾಯ ಗಳಿಸಬಹುದು. ಇದರ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ಫ್ರಾನ್ಚೈಸಿ ಪಡೆದುಕೊಳ್ಳುವುದು ಹೇಗೆ?
ಎಸ್ ಬಿ ಐ ಎಟಿಎಂ ಫ್ರಾಂಚೈಸಿ (SBI ATM Franchise) ಪಡೆದುಕೊಳ್ಳಲು ಪ್ರೈವೇಟ್ ಕಂಪನಿಗಳಿಗೆ ಅರ್ಜಿ ಸಲ್ಲಿಸಿ ಎಟಿಎಂ ಮಷೀನ್ ಇನ್ಸ್ಟಾಲೇಶನ್ ಮಾಡಿಕೊಳ್ಳಬಹುದು. ಅರ್ಹ ವ್ಯಕ್ತಿಗೆ ಕಂಪನಿಗಳು ತಾವು ತಿಳಿಸುವ ಜಾಗದಲ್ಲಿ ಎಟಿಎಂ ಮಷೀನ್ ಇನ್ಸ್ಟಾಲ್ ಮಾಡಲು ಅನುಮತಿ ನೀಡುತ್ತಾರೆ. ಅಥವಾ ನೀವು ಇನ್ಸ್ಟಾಲ್ ಮಾಡಲು ಬಯಸುವ ಸ್ಥಳದ ಬಗ್ಗೆ ಮಾಹಿತಿ ಮತ್ತು ದಾಖಲೆಗಳನ್ನು ಖಾಸಗಿ ಕಂಪನಿಗಳಿಗೆ ನೀಡಬೇಕಾಗುತ್ತದೆ.
ಅರ್ಹತೆಗಳು!
ಎಟಿಎಂ ಮಷೀನ್ (SBI ATM Machine) ಇನ್ಸ್ಟಾಲೇಶನ್ ಮಾಡಲು ಕನಿಷ್ಠ 50ರಿಂದ 60 ಚದರ್ ಅಡಿ ಸ್ಥಳ ಬೇಕು. ಕಾಂಕ್ರೀಟ್ ರೂಫ್, ಶಟರ್ ಡೋರ್ ಹಾಗೂ ಇತರ ಸುರಕ್ಷಿತ ಮಾನದಂಡಗಳು ಕಡ್ಡಾಯವಾಗಿವೆ. ಅದೇ ರೀತಿ ಕನಿಷ್ಠ ಒಂದು ಕಿಲೋ ವ್ಯಾಟ್ ವಿದ್ಯುತ್ ಸಂಪರ್ಕ ಎಟಿಎಂ ಕೇಂದ್ರಕ್ಕೆ 24 ಗಂಟೆಗಳೂ ಇರಲೇಬೇಕು. ಇನ್ನೊಂದು ಎಟಿಎಂ ಕೇಂದ್ರದಿಂದ ಕನಿಷ್ಠ ನೂರು ಮೀಟರ್ ದೂರದಲ್ಲಿ ನೀವು ಸ್ಥಾಪಿಸುವ ಹೊಸ ಎಟಿಎಂ ಸೆಂಟರ್ ಇರಬೇಕು. ಫ್ರಾಂಚೈಸಿ ಪಡೆದುಕೊಂಡ ನಂತರ ಪ್ರತಿದಿನ 300 ಟ್ರಾನ್ಸ್ಯಾಕ್ಷನ್ ಆಗಬೇಕು. ಇನ್ಸ್ತಲೇಶನ್ಗೆ ಏನ್ ಓ ಸಿ ಪಡೆದುಕೊಂಡಿರುವುದು ಕಡ್ಡಾಯ.
ಅರ್ಜಿ ಸಲ್ಲಿಸುವುದು ಹೇಗೆ?
ಇಂಡಿಯಾ ಒನ್ ಎಟಿಎಂ, ಟಾಟಾ ಇಂಡಿ ಕ್ಯಾಶ್, ಮೂತೂಟ್ ಎಟಿಎಂ ಮೊದಲಾದವು ಎಟಿಎಂ ಇನ್ಸ್ಟಾಲೇಶನ್ ಗುತ್ತಿಗೆ ಪಡೆದುಕೊಂಡಿರುವ ಕಂಪನಿಗಳು. ಈ ಕಂಪನಿಗಳಿಗೆ ನೇರವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಎಟಿಎಂ ಮಷೀನ್ ಇನ್ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಸೆಕ್ಯೂರಿಟಿ ಡೆಪಾಸಿಟ್ ಎರಡು ಲಕ್ಷ ರೂಪಾಯಿಗಳನ್ನು ನೀಡಬೇಕು. ಹಾಗೂ ಮೂರು ಲಕ್ಷ ರೂಪಾಯಿಗಳ ವರ್ಕಿಂಗ್ ಕ್ಯಾಪಿಟಲ್ ಮೊತ್ತವನ್ನು ಕೊಡಬೇಕು. ಅಂದರೆ ನೀವು 5 ಲಕ್ಷಗಳ ಬಂಡವಾಳದಲ್ಲಿ ಎಟಿಎಂ ಇನ್ಸ್ಟಾಲೇಶನ್ ಮಾಡಿಸಿಕೊಂಡರೆ ಪ್ರತಿ ತಿಂಗಳು 60 ರಿಂದ 70,000ಗಳನ್ನು ಸುಲಭವಾಗಿ ಗಳಿಸಬಹುದಾಗಿದೆ.