Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮಿ 11ನೇ ಕಂತಿನ ಹಣ ನಾಳೆ ಈ‌ ಜಿಲ್ಲೆಗಳಿಗೆ ಬಿಡುಗಡೆ

advertisement

ಇಂದು ಮಹಿಳಾ ಪರವಾದ ಯೋಜನೆಗಳನ್ನು ಸರಕಾರ ಹೆಚ್ಚು ಹಮ್ಮಿ ಕೊಳ್ಳುತ್ತಿದೆ. ಹೌದು ಮಹಿಳೆಯರನ್ನು ಆರ್ಥಿಕ ವಾಗಿ ಸಬಲ ಮಾಡಬೇಕು,ಅವರನ್ನು ಕೂಡ ಪುರುಷ ರಂತೆ ಸಮಾನ‌ ರೀತಿಯಲ್ಲಿ ನೋಡ ಬೇಕೆಂದು ಸರಕಾರವು ಹೆಚ್ಚು ಮಹಿಳಾ ಅಭಿವೃದ್ಧಿ ಪರ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ. ಅದರಲ್ಲೂ ಈ ಭಾರಿ ರಾಜ್ಯ ಸರಕಾರವು ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ ಯೋಜನೆ ಜಾರಿಗೆ ತಂದಿದ್ದು ಮಹಿಳೆಯರಿಗೆ ಈ ಯೋಜನೆ ಮೂಲಕ ಹೆಚ್ಚು ಉಪಯೋಗವಾಗುತ್ತಿದೆ.

WhatsApp Join Now
Telegram Join Now

ಖಾತೆಗೆ ಜಮೆ:

ಕಳೆದ ವರ್ಷ ಆಗಷ್ಟ್‌ನಿಂದ ಮಹಿಳೆಯರಿಗಾಗಿ ಈ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಜಾರಿಯಾಗಿದೆ. ಈವರೆಗೂ 10 ತಿಂಗಳು ಪೂರ್ಣಗೊಂಡಿದೆ. ಪ್ರತಿ ತಿಂಗಳು ತಲಾ 2 ಸಾವಿರ ರೂಪಾಯಿಯಂತೆ ಹಣ ಮಹಿಳೆಯರ ಖಾತೆಗೆ ಹಣ ಜಮೆಯಾಗುತ್ತಿದೆ. ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿರುವ ಮಹಿಳೆ ಮಾತ್ರ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಯಾಗುತ್ತಾರೆ.

ಹತ್ತನೇ ಕಂತಿನ‌ಹಣ ಜಮೆ:

 

Image Source: Deccan Herald

 

advertisement

ಈಗಾಗಲೇ ಹತ್ತು ಕಂತಿನ ವರೆಗೆ ಗೃಹಲಕ್ಷ್ಮಿ ಹಣ (Gruha Lakshmi Money) ಬಿಡುಗಡೆ ಗೊಂಡಿದ್ದು ಕೆಲವು ಮಹಿಳೆಯರಿಗೆ ಈ ಹಣ ಖಾತೆಗೆ ಜಮೆ ಯಾಗಿಲ್ಲ.‌ ಇದಕ್ಕೆ ತಾಂತ್ರಿಕ ದೋಷದಿಂದ, ಸರ್ವರ್ ಸಮಸ್ಯೆಗಳಿಂದ, ಕೆವೈಸಿ ಆಗದಿರುವ ಕಾರಣಗಳಿಂದಾಗಿ ಗೃಹಲಕ್ಷ್ಮೀಯ ಹಣದಿಂದ ವಂಚಿತರಾಗಿದ್ದಾರೆ. ನಿಮ್ಮ ದಾಖಲೆ ಸರಿ ಪಡಿಸಿ ಕೊಂಡಲ್ಲಿ ಎಲ್ಲಾ ಕಂತಿನ ಹಣ ಒಟ್ಟಿಗೆ ಜಮೆ ಯಾಗಲಿದೆ.

11 ನೇ ಕಂತಿನ ಹಣ ಜಮೆ:

 

Image Source: Udayavani

 

ಗೃಹಲಕ್ಷ್ಮಿ ಹನ್ನೊಂದನೆಯ ಕಂತಿನ ಹಣ (Gruha Lakshmi Money) ನಾಳೆ ಸರಕಾರದಿಂದ ಬಿಡುಗಡೆ ಯಾಗಲಿದ್ದು ಮೊದಲು ಉಡುಪಿ, ಚಿಕ್ಕಮಗಳೂರು,ಹಾಸನ, ದಕ್ಷಿಣ ಕನ್ನಡ,ಚಿತ್ರದುರ್ಗ, ತುಮಕೂರು, ಚಾಮರಾಜನಗರ, ಬೆಂಗಳೂರು ಗ್ರಾಮಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಇಷ್ಟು ಜಿಲ್ಲೆಗಳಿಗೆ ಮೊದಲು ಗೃಹಲಕ್ಷ್ಮಿ ಹಣ ಬಿಡುಗಡೆ ಯಾಗಲಿದೆ.

ಈ ಕೆಲಸ ಕಡ್ಡಾಯ:

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಮಾಡಿಸುವುದು ಕಡ್ಡಾಯವಾಗಿದ್ದು ರೇಷನ್ ಅಪ್ಡೇಟ್, ಬ್ಯಾಂಕ್ ಖಾತೆಯಲ್ಲಿರುವ ಹೆಸರು ಮತ್ತು ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮ್ಯಾಚ್ ಆಗಲಿದೆಯಾ? ಏನಾದರೂ ತಪ್ಪಿದ್ದಲ್ಲಿ ಅದನ್ನು ಸರಿಪಡಿಸಿಕೊಳ್ಳಬೇಕು, ಮತ್ತು ಬ್ಯಾಂಕ್ ಖಾತೆ ನಿಷ್ಕ್ರಿಯ ಆದಲ್ಲಿ ಸರಿ ಪಡಿಸಬೇಕು.

advertisement

Leave A Reply

Your email address will not be published.