Karnataka Times
Trending Stories, Viral News, Gossips & Everything in Kannada

KSRTC: ಎಲೆಕ್ಷನ್ ರಿಸಲ್ಟ್ ಬಂದ ಕೆಲವೇ ದಿನಗಳಲ್ಲಿ KSRTC ಯಿಂದ ಹೊಸ ನಿರ್ಧಾರ!

advertisement

ಕರ್ನಾಟಕ ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು 5 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಮಹಿಳಾ ಪರವಾದ ಯೋಜನೆ ಶಕ್ತಿ ಯೋಜನೆ ಕೂಡ ಒಂದಾಗಿದೆ.ಈ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ನೀಡುತ್ತದೆ.ಈಗಾಗಲೇ ಆಧಾರ್ ಕಾರ್ಡ್ ತೋರಿಸುವ ಮೂಲಕ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC), ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (KKRTC), ಉತ್ತರ ಪಶ್ಚಿಮ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಸ್ ನಲ್ಲಿ ಪ್ರಯಾಣಿಕರ ಸಂಖ್ಯೆ ಗಗನಕ್ಕೇರಿದೆ.

WhatsApp Join Now
Telegram Join Now

ಬಸ್ ದರ ಹೆಚ್ಚಳ:

 

Image Source: The Hindu

 

ಲೋಕಸಭಾ ಚುನಾವಣೆಯ ಫಲಿತಾಂಶ ‌ಕೂಡ ಬಂದಿದ್ದು ಇದೀಗ ವರ್ಷ ವಿವಿಧ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಈಗಾಗಲೇ ವಿದ್ಯುತ್ ದರ, ಪೆಟ್ರೋಲ್, ಡಿಸೇಲ್, ಮೊಬೈಲ್ ರಿಚಾರ್ಜ್ ದರ ಇತ್ಯಾದಿ ಹೆಚ್ಚಳ ಸಾಧ್ಯತೆ ಎನ್ನಲಾಗಿದ್ದು‌ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ ಪ್ರಯಾಣ ದರ ಹೆಚ್ಚಳದ ಕುರಿತು ಕೂಡ ಚರ್ಚೆ ಆರಂಭವಾಗಿದೆ. ಶೇ.10ರಿಂದ 15ರಷ್ಟು ಪ್ರಯಾಣ ದರ ಹೆಚ್ಚಳಕ್ಕೆ ಶೀಘ್ರವೇ ಸರ್ಕಾರಕ್ಕೆ ಬೇಡಿಕೆ ಸಲ್ಲಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಯಾಕಾಗಿ ಹೆಚ್ಚಳ:

ಈಗಾಗಲೇ ಡೀಸೆಲ್ ದರ (Diesel Price) ಹೆಚ್ಚಳವಾಗಿದೆ. ಸಿಬ್ಬಂದಿ ವೇತನ ಸೇರಿದಂತೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಖರ್ಚು ಕೂಡ ಅಧಿಕ ವಾಗುತ್ತಿದೆ.ಕಳೆದ 5 ವರ್ಷಗಳಲ್ಲಿ ನಿಗಮಗಳ ಸಾಲ ಮತ್ತು ಹೊಣೆಗಾರಿಕೆ 4 ಸಾವಿರ ಕೋಟಿ ರು.ಗೂ ಹೆಚ್ಚಿಗೆ ಯಾಗಿದೆ. ಸಾರಿಗೆ ಬಸ್‌ ಪ್ರಯಾಣ ದರ ಏರಿಕೆ ಮಾಡಲು ಚರ್ಚೆಗಳು ಶುರು ವಾಗಿದ್ದು, ನಿಗಮಗಳಿಂದ ಪ್ರಸ್ತಾವನೆ ಬಂದರೆ ಪರಿಶೀಲನೆ ನಡೆಸಲು ರಾಜ್ಯ ಸರ್ಕಾರವೂ ಚಿಂತನೆ ಕೂಡ ನಡೆಸಿದೆ.

advertisement

ಹೆಚ್ಚಳ ಮಾಡುತ್ತಿದೆ:

ಪ್ರತಿ ವರ್ಷ ಅಥವಾ ಎರಡು ವರ್ಷಕ್ಕೊಮ್ಮೆ ಬಸ್‌ ಪ್ರಯಾಣ ದರ ಹೆಚ್ಚಳ ಮಾಡಬೇಕಾಗಿದ್ದು, 2020ರಲ್ಲಿ ದರವನ್ನು ಶೇ.12ರಷ್ಟು ಹೆಚ್ಚಿಸಲಾಗಿತ್ತು.ಡೀಸೆಲ್ ದರವೂ ಹೆಚ್ಚಾಗ್ತಿರೋದ್ರಿಂದ ಆರ್ಥಿಕ ಹೊರೆ ಮತ್ತಷ್ಟು ಹೆಚ್ಚಾಗ್ತಿದೆ. ಹಾಗಾಗಿ ಸಾರಿಗೆ ನಿಗಮದ ಆರ್ಥಿಕ ಅಭಿವೃದ್ಧಿ ಗಾಗಿ ಹೆಚ್ಚಳ ಮಾಡಲಾಗುತ್ತದೆ.

ಶಕ್ತಿ ಯೋಜನೆ ಪರಿಣಾಮ:

 

Image Source: ABP News

 

ಶಕ್ತಿ ಯೋಜನೆ (Shakti Yojana) ಜಾರಿಗೆ ಬಂದ ನಂತರ ಬಸ್‌ಗಳಲ್ಲಿ ಪ್ರಯಾಣ ಮಾಡುವ ಸಂಖ್ಯೆಕೂಡ ಹೆಚ್ಚಾಗಿದೆ. ಮಹಿಳೆಯರ ಉಚಿತ ಪ್ರಯಾಣದ ಟಿಕೆಟ್‌ ಮೌಲ್ಯವು 2021 ಕೋಟಿ ರೂ. ಆಗಿದೆ. ಶಕ್ತಿ ಯೋಜನೆ ಜಾರಿ ನಂತರದಿಂದ ನಾಲ್ಕೂ ಸಾರಿಗೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿದೆ. ಆದರೆ, ಅದು ನಿಗಮಗಳ ನಷ್ಟ ತಗ್ಗಿಸುವುದು ಅಥವಾ ನಿಗಮಗಳ ವೆಚ್ಚವನ್ನು ಸರಿದೂಗಿಸುವಂತಿಲ್ಲ ಎನ್ನಲಾಗಿದೆ.

ಹಾಗಾಗಿ ಆದಾಯಕ್ಕಿಂತ ಖರ್ಚು ಹೆಚ್ಚಾದ ಪರಿಣಾಮದಿಂದಾಗಿ ನಿಗಮಗಳ ಸಾಲ ಮತ್ತು ಹೊಣೆಗಾರಿಕೆ ಹೆಚ್ಚಿಗೆಯಾಗಿದೆ.ಇಂದು ಪ್ರಯಾಣಿಕರ ಬೇಡಿಕೆಗನುಗುಣವಾಗಿ ಹೊಸ ಬಸ್‌ಗಳನ್ನು ಸೇರ್ಪಡೆ‌ಕೂಡ ಮಾಡಲಾಗುತ್ತಿದೆ. ಆದರೆ ಆದಾಯದಲ್ಲಿ ಹೆಚ್ಚಳವಾಗಿಲ್ಲ. ಹೀಗಾಗಿಯೇ ಇದೀಗ ಬಸ್ ಪ್ರಯಾಣ ದರ ಹೆಚ್ಚಳಕ್ಕೆ ನಿರ್ಧಾರ ಮಾಡಲಾಗಿದೆ.

advertisement

Leave A Reply

Your email address will not be published.