Karnataka Times
Trending Stories, Viral News, Gossips & Everything in Kannada

IAS Question: ರಾಜಧಾನಿ ಇಲ್ಲದ ಭಾರತದ ಆ ರಾಜ್ಯ ಯಾವುದು? IAS ಪ್ರಶ್ನೆ

advertisement

ಸ್ನೇಹಿತರೆ ಒಂದು ವೇಳೆ ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಳ್ಳುತ್ತಿದ್ದಾರೆ ಖಂಡಿತವಾಗಿ ನೀವು ನಿಮ್ಮ ಪಠ್ಯಪುಸ್ತಕದಲ್ಲಿ ಇರುವುದಕ್ಕಿಂತ ಹೆಚ್ಚಿನದನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯವಾಗಿರುತ್ತದೆ ಅನ್ನೋದನ್ನ ನೀವು ಪ್ರಮುಖವಾಗಿ ಅರ್ಥಮಾಡಿಕೊಳ್ಳಬೇಕಾಗಿರುತ್ತದೆ. ಅದೇ ರೀತಿಯಲ್ಲಿ ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧವಾಗುವುದಕ್ಕೆ ಪೂರಕವಾಗುವ ರೀತಿಯಲ್ಲಿ ಇವತ್ತಿನ ಲೇಖನದಲ್ಲಿ ಕ್ವಿಜ್ ಪ್ರಶ್ನೆಗಳನ್ನು (Quiz Questions) ನಾವು ನಿಮಗೆ ಕೇಳೋದಕ್ಕೆ ಹೊರಟಿದ್ದೇವೆ. ಅದಕ್ಕೆ ಸರಿಯಾದ ರೀತಿಯಲ್ಲಿ ಪ್ರಶ್ನೆಯನ್ನು ಅರ್ಥ ಮಾಡಿಕೊಂಡು ಉತ್ತರ ನೀಡುವಂತಹ ಪ್ರಯತ್ನವನ್ನು ನೀವು ಮಾಡಬಹುದಾಗಿದೆ. ಮೊದಲಿಗೆ ಒಂದೊಂದಾಗಿ ಪ್ರಶ್ನೆಗಳನ್ನು ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿದ್ದು ಬನ್ನಿ ಮೊದಲಿಗೆ ಪ್ರಶ್ನೆಯನ್ನು ತಿಳಿದುಕೊಳ್ಳೋಣ.

WhatsApp Join Now
Telegram Join Now

Questions: 

  1. ಮೊದಲನೇ ಪ್ರಶ್ನೆ ಖಾಲ್ಸಾ ಕಾನ್ಸೆಪ್ಟ್ ಅನ್ನು ಕೊಟ್ಟವರು ಯಾರು?
  2. ಎರಡನೇ ಪ್ರಶ್ನೆ ಮೊಘಲರ ದೊರೆಯಾಗಿರುವಂತಹ ಅಕ್ಬರ್ ಕೊನೆದಾಗಿ ಯಾವ ಗುರುಗಳಿಂದ ಪ್ರಭಾವಿತನಾಗಿದ್ದ?
  3. ಮೂರನೇ ಪ್ರಶ್ನೆ ಭಾರತದ ಉಕ್ಕಿನ ಮನುಷ್ಯ ಎಂಬುದಾಗಿ ಯಾರನ್ನು ಪರಿಗಣಿಸಲಾಗುತ್ತದೆ?
  4. ನಾಲ್ಕನೇ ಪ್ರಶ್ನೆ ಭಾರತದ ಸಂವಿಧಾನ ಸಭೆಯ ಆರಂಭಿಕ ಅಧ್ಯಕ್ಷರು ಯಾರು ಎಂಬುದಾಗಿ ತಿಳಿಸಿ?
  5. 5ನೇ ಪ್ರಶ್ನೆ ಅಹಮದ್ ನಗರ್ ಫೋರ್ಟ್ ಜೈಲ್ನಲ್ಲಿ ಜವಾಹರ್ಲಾಲ್ ನೆಹರು ಯಾವ ಪುಸ್ತಕವನ್ನು ಬರೆದಿದ್ದರು?
  6. 6ನೇ ಹಾಗೂ ಕೊನೆಯ ಪ್ರಶ್ನೆ ಭಾರತದ ಯಾವ ರಾಜ್ಯಕ್ಕೆ ರಾಜಧಾನಿ ಇಲ್ಲ?

ಇಲ್ಲಿ ನಾವು ನಿಮಗೆ ಒಟ್ಟಾರೆಯಾಗಿ ಆರು ಪ್ರಶ್ನೆಗಳನ್ನು ಕೇಳಿದ್ದೇವೆ. ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ಬೇರೆ ಬೇರೆ ಪ್ರಮುಖ ವಿಚಾರಗಳ ಬಗ್ಗೆ ಇಲ್ಲಿ ಪ್ರಶ್ನೆಯನ್ನು ಕೇಳಲಾಗಿದೆ. ಒಂದು ವೇಳೆ ನಿಮ್ಮ ಸಾಮಾನ್ಯ ಜ್ಞಾನವನ್ನ ಹೆಚ್ಚಿಸಿಕೊಳ್ಳಬೇಕು ಎನ್ನುವಂತಹ ನಿರೀಕ್ಷೆಯಿದ್ರೆ ಹಾಗೂ ನಿಮ್ಮ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಳ್ಳಬೇಕು ಎನ್ನುವಂತಹ ಇಚ್ಛೆ ಇದ್ರೆ ಖಂಡಿತವಾಗಿ ಇಂತಹ ಪ್ರಶ್ನೆಗಳಿಗೆ ನೀವು ಉತ್ತರ ನೀಡುವ ಮೂಲಕ ಅತ್ಯುತ್ತಮವಾದ ತಯಾರಿಯನ್ನು ನಡೆಸಿಕೊಳ್ಳಬಹುದಾಗಿದೆ.

advertisement

ಹಾಗಿದ್ರೆ ಬನ್ನಿ ಒಂದೊಂದಾಗಿ ಈ ಪ್ರಶ್ನೆಗಳಿಗೆ ಉತ್ತರ ನೀಡುವ ಕೆಲಸವನ್ನು ಮಾಡಿ. ಅದಾದ ನಂತರ ಈ ಕೆಳಗೆ ನಾವು ಹೇಳಲಿರುವಂತಹ ಉತ್ತರಕ್ಕೆ ಆ ಉತ್ತರವನ್ನು ತಾಳೆ ಹಾಕಿ ನೋಡಿ ಹಾಗೂ ಎಷ್ಟು ಸರಿ ಉತ್ತರವನ್ನು ನೀಡಿದ್ದೀರಿ ಎಂಬುದನ್ನ ತಿಳಿದುಕೊಳ್ಳಿ. ಬನ್ನಿ ಹಾಗಿದ್ರೆ ಉತ್ತರವನ್ನು ಒಂದೊಂದಾಗಿ ತಿಳಿದುಕೊಳ್ಳೋಣ.

Answers: 

  1. ಮೊದಲ ಪ್ರಶ್ನೆಗೆ ಉತ್ತರ ಖಾಲ್ಸ ಕಾನ್ಸೆಪ್ಟ್ ಅನ್ನು ಗುರು ಗೋವಿಂದ್ ಸಿಂಗ್ ನೀಡಿದ್ರು.
  2. ಎರಡನೇ ಪ್ರಶ್ನೆಗೆ ಉತ್ತರ ಮೊಘಲ್ ದೊರೆ ಅಕ್ಬರ್ ಸಿಕ್ಸ್ ಜನಾಂಗದ ಗುರು ಆಗಿರುವಂತಹ ರಾಮದಾಸ್ ರವರ ವಿಚಾರಧಾರೆಗಳಿಂದ ಸಾಕಷ್ಟು ಪ್ರಭಾವಿತನಾಗಿದ್ದ.
  3. ಮೂರನೇ ಪ್ರಶ್ನೆಗೆ ಉತ್ತರ ಭಾರತದ ಉಕ್ಕಿನ ಮನುಷ್ಯ ಎಂಬುದಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ರವರನ್ನು ಕರೆಯಲಾಗುತ್ತದೆ.
  4. ನಾಲ್ಕನೇ ಪ್ರಶ್ನೆಗೆ ಉತ್ತರ ಸಂವಿಧಾನ ಸಭೆಯ ಮೊದಲ ಅಧ್ಯಕ್ಷರು ಎಂಬುದಾಗಿ ರಾಜೇಂದ್ರ ಪ್ರಸಾದ್ ರವರನ್ನು ಕರೆಯಲಾಗುತ್ತದೆ.
  5. ಐದನೇ ಪ್ರಶ್ನೆಗೆ ಉತ್ತರ ಭಾರತದ ಮೊದಲ ಪ್ರಧಾನ ಮಂತ್ರಿ ಆಗಿರುವಂತಹ ಜವಾಹರ್ಲಾಲ್ ನೆಹರು ಅಹಮದ್ ನಗರ ಫೋರ್ಟ್ ಜೈಲ್ನಲ್ಲಿ ದ ಡಿಸ್ಕವರಿ ಆಫ್ ಇಂಡಿಯಾ ಎಂಬ ಪುಸ್ತಕವನ್ನು ಬರೆದಿದ್ದರು.
  6. ಕೊನೇ ಹಾಗೂ 6ನೇ ಪ್ರಶ್ನೆಗೆ ಉತ್ತರ ಭಾರತದಲ್ಲಿ ರಾಜಧಾನಿ ಇಲ್ಲದೆ ಇರುವಂತಹ ರಾಜ್ಯ ಅಂದ್ರೆ ಅದು ಆಂಧ್ರ ಪ್ರದೇಶ (Andhra Pradesh) ಆಗಿದೆ.

ಈ ಮೊದಲು ಹೈದರಾಬಾದ್ ಎನ್ನುವುದು ತೆಲಂಗಾಣ ಹಾಗೂ ಆಂಧ್ರಪ್ರದೇಶ ಎರಡಕ್ಕೂ ಕೂಡ ಕಾಮನ್ ರಾಜಧಾನಿಯಾಗಿತ್ತು ಆದರೆ ಈಗ ಅದನ್ನು ಕೇವಲ ತೆಲಂಗಾಣದ ರಾಜಧಾನಿಯನ್ನಾಗಿ ಪರಿಗಣಿಸಲಾಗಿದೆ. ಮುಂದಿನ ದಿನಗಳಲ್ಲಿ ಆಂಧ್ರಪ್ರದೇಶ ರಾಜ್ಯದ ರಾಜಧಾನಿಯನ್ನಾಗಿ ವಿಶಾಖಪಟ್ಟಣ ಅಥವಾ ಅಮರಾವತಿ ಅನ್ನು ಆಯ್ಕೆ ಮಾಡುವಂತಹ ಸಾಧ್ಯತೆ ಹೆಚ್ಚಾಗಿದೆ.

advertisement

Leave A Reply

Your email address will not be published.