Karnataka Times
Trending Stories, Viral News, Gossips & Everything in Kannada

CM Siddaramaiah: ಆಸ್ಪತ್ರೆ ಬಿಲ್ ಕಟ್ಟುತ್ತಿರುವ ಎಲ್ಲರಿಗೂ ಹೊಸ ಗ್ಯಾರಂಟಿ! ಬೆಳ್ಳಂಬೆಳಿಗ್ಗೆ ಸಿಎಂ ಘೋಷಣೆ

advertisement

Yashaswini card hospitals: ರಾಜ್ಯದಲ್ಲಿ ಸರ್ಕಾರ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಳೆದ ಬಾರಿಯ ವಿಧಾನಸಭಾ ಚುನಾವಣೆಯನ್ನು ಗೆದ್ದ ನಂತರ ಸಾಕಷ್ಟು ಉಚಿತ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಸಾಮಾನ್ಯ ವರ್ಗದ ಜನರಿಗೆ ಸಾಕಷ್ಟು ಲಾಭವನ್ನು ನೀಡಿದೆ ಎಂದು ಹೇಳಬಹುದಾಗಿದೆ. ಸರ್ಕಾರಕ್ಕೆ ಇದರಿಂದ ಸಾಕಷ್ಟು ಹೊರೆ ಆಗ್ತಾ ಇದ್ದರೂ ಕೂಡ ಜನಸಾಮಾನ್ಯರಿಗೆ ಈ ಯೋಜನೆಗಳನ್ನ ನಾವು ಮುಂದುವರಿಸಿಕೊಂಡು ಹೋಗುತ್ತೇವೆ ಎನ್ನುವುದಾಗಿ ಸರ್ಕಾರ ಈ ಬಾರಿ ಲೋಕಸಭಾ ಚುನಾವಣೆ ಸೋತ ಮೇಲೆ ಕೂಡ ಹೇಳಿಕೊಂಡಿರುವುದನ್ನು ನಾವು ಇಲ್ಲಿ ಗಮನಿಸಬೇಕಾಗಿರುತ್ತದೆ ಹಾಗೂ ಈ ಯೋಜನೆ ಇನ್ನಷ್ಟು ದಿನಗಳ ಕಾಲ ಮುಂದುವರಿಯಲಿದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.

WhatsApp Join Now
Telegram Join Now

ಇದರ ಬೆನ್ನಲ್ಲೇ ಈಗ ಮತ್ತೊಂದು ಗ್ಯಾರಂಟಿ ಯೋಜನೆಯ ಘೋಷಣೆ ಕೂಡ ರಾಜ್ಯ ಸರ್ಕಾರದಿಂದ ನಡೆದಿದೆ ಎಂದು ಹೇಳಬಹುದು. 2003 ರಲ್ಲಿ ಪ್ರಾರಂಭ ಮಾಡಲಾಗಿರುವಂತಹ ಯಶಸ್ವಿ ಯೋಜನೆಯ ಅಡಿಯಲ್ಲಿ ಈ ಸಂದರ್ಭದಲ್ಲಿ 200 ಕ್ಕೆ ಹೆಚ್ಚಿನ ಚಿಕಿತ್ಸಾ ದರವನ್ನು ಪರಿಷ್ಕರಣೆ ಮಾಡುವಂತಹ ನಿರ್ಧಾರಕ್ಕೆ ರಾಜ್ಯ ಸರ್ಕಾರ ಬಂದಿದೆ ಎನ್ನುವಂತಹ ಮಾಹಿತಿ ಸಿಕ್ಕಿದೆ. ಯಶಸ್ವಿನಿ ಕಾರ್ಡ್ ಹೊಂದಿರುವಂತಹ ಫಲಾನುಭವಿಗಳಿಗೆ ಇದರ ಲಾಭ ಸಿಗಲಿದೆ ಎಂದು ಹೇಳಬಹುದಾಗಿದೆ.

advertisement

2018ರಲ್ಲಿ ಸ್ಥಗಿತಗೊಂಡಿದಂತಹ ಈ ಯೋಜನೆಯನ್ನು ಮತ್ತೆ 2023 ರಲ್ಲಿ ಜಾರಿಗೆ ತರಲಾಗಿತ್ತು. 2023 ಹಾಗೂ 24ರ ಸಾಲಿನ ಈ ಯೋಜನೆಯ ನೋಂದಾವಣೆ ಪ್ರಕ್ರಿಯೆ ಮಾರ್ಚ್ 31ರವರೆಗೆ ವಿಸ್ತರಣೆ ಆಗಿತ್ತು ಹಾಗೂ 200ಕ್ಕೂ ಹೆಚ್ಚಿನ ಚಿಕಿತ್ಸೆಯ ದರಗಳ ಮೇಲೆ ಬೆಲೆಯ ಪರಿಷ್ಕರಣೆ ಮಾಡುವಂತಹ ನಿರ್ಧಾರವನ್ನು ಕೂಡ ಮಾಡಲಾಗಿದೆ.

ಈ ಯೋಜನೆ ಅಡಿಯಲ್ಲಿ ಖಾಸಗಿ ಆಸ್ಪತ್ರೆಗಳು ಬಡ ಹಾಗೂ ಮಾಧ್ಯಮ ವರ್ಗದ ರೋಗಿಗಳಿಗೆ ಚಿಕಿತ್ಸೆ ನೀಡುವುದನ್ನ ಬಹುತೇಕ ನಿರಾಕರಿಸಲು ಪ್ರಾರಂಭಿಸಿದ್ದವು ಯಾಕೆಂದರೆ 300 ಪ್ರತಿಶತ ಇದೆ ರಿಯಾಯಿತಿ ದರವನ್ನು 370ಕ್ಕೆ ಏರಿಸಲಾಗಿತ್ತು ಹೀಗಾಗಿ ಯಶಸ್ವಿನಿ ಯೋಜನೆಯಡಿಯಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದಕ್ಕೆ ಈಗ ಹೆಚ್ಚಿನ ಖಾಸಗಿ ಆಸ್ಪತ್ರೆಗಳು ತೆರೆದಿವೆ ಎಂಬುದಾಗಿ ಸರ್ಕಾರ ಘೋಷಣೆ ಮಾಡಿದ್ದು ಖಾಸಗಿ ಆಸ್ಪತ್ರೆಗಳ ಸಂಖ್ಯೆ ಈಗ 600ನ್ನು ದಾಟಿದೆ ಎಂಬುದಾಗಿ ತಿಳಿದು ಬಂದಿದೆ.

Image Source: Deccan Herald

ಯಶಸ್ವಿನಿ ಯೋಜನೆಯಡಿಯಲ್ಲಿ ನಿಮಗೆ 2128 ಚಿಕಿತ್ಸೆಗಳು ದೊರಕಲಿವೆ ಅದರಲ್ಲಿ 206 ಚಿಕಿತ್ಸೆಗಳ ದರವನ್ನ ಬದಲಾವಣೆ ಮಾಡಲಾಗಿದೆ. 637 ಆಸ್ಪತ್ರೆಗಳು ಈ ಯೋಜನೆ ಅಡಿಯಲ್ಲಿ ನೋಂದಾವಣೆ ಮಾಡಿಕೊಂಡಿದ್ದವು ಇವುಗಳಲ್ಲಿ 602 ಖಾಸಗಿ ಆಸ್ಪತ್ರೆಗಳಾಗಿವೆ. ಯಶಸ್ವಿನಿ ಕಾರ್ಡ್ ಹೊಂದಿರುವವರು 5 ಲಕ್ಷ ರೂಪಾಯಿಗಳ ವರೆಗೆ ನಗದು ರಹಿತ ಚಿಕಿತ್ಸೆಯನ್ನ ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.