Karnataka Times
Trending Stories, Viral News, Gossips & Everything in Kannada

CM Siddaramaiah: ಸರಕಾರಿ ಶಾಲೆಗಳಲ್ಲಿ ಓದುವ ಎಲ್ಲಾ ಮಕ್ಕಳಿಗೆ ಹೊಸ ನಿಯಮ! ಸಿಎಂ ಘೋಷಣೆ

advertisement

ಇದೀಗ ಸರಕಾರಿ ಶಾಲೆಯಲ್ಲಿ ಓದುವ ಎಲ್ಲಾ ಮಕ್ಕಳಿಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ. ಹೌದು ಸರಕಾರಿ ಶಾಲೆಯ ಮಕ್ಕಳೂ ಕೂಡ ಇನ್ಮುಂದೆ ಸ್ಪರ್ಧಾತ್ಮಕ ಪರೀಕ್ಷೆ ಯನ್ನು ಸುಲಭ ವಾಗಿ ಎದುರಿಸಬಹುದು. ಯಾಕಂದರೆ ಇದೀಗ ರಾಜ್ಯ ಸರಕಾರ ಸರಕಾರಿ ಮಕ್ಕಳಿಗೆ ವಿಶೇಷ ಅವಕಾಶ ವನ್ನು ನೀಡಿದೆ. ಹಾಗಿದ್ದಲ್ಲಿ ಆ ಮಾಹಿತಿ ಯಾವುದು ಎಂದು ತಿಳಿಯಲು ಈ‌ ಲೇಖನ ಪೂರ್ತಿಯಾಗಿ ಓದಿರಿ.

WhatsApp Join Now
Telegram Join Now

ಇಂದು ಹೆಚ್ಚಿನ ಜನರು ಮಕ್ಕಳ ಶಿಕ್ಷಣ ಕ್ಕಾಗಿ ಹೆಚ್ಚಿನ ಆದ್ಯತೆ ಯನ್ನು ತೋರುತ್ತಾರೆ. ಹೌದು ಕೆಲವು ಮನೆಯಲ್ಲಿ ಆರ್ಥಿಕ ಸಮಸ್ಯೆ ಇದ್ದರೂ ಕೂಡ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಇಂದು ಸರಕಾರ ಕೂಡ ಮಕ್ಕಳಿಗೆ ಶಿಕ್ಷಣ ಕಡ್ಡಾಯ ಮಾಡಿದೆ. ಮಕ್ಕಳಿಗೆ ಆರ್ಥಿಕ ವಾಗಿ ನೆರವಾಗಲು ಸ್ಕಾಲರ್ಶಿಪ್, ಉಚಿತ ಸಮವಸ್ತ್ರ, ಪುಸ್ತಕ, ಮಧ್ಯಾನ್ನದ ಊಟ, ಶೂ, ಬ್ಯಾಗ್ ಇತ್ಯಾದಿ ಸಲಕರಣೆ ಯನ್ನು ಕೂಡ ವಿತರಣೆ ಮಾಡುತ್ತಿದೆ. ಅದರ ಜೊತೆ ಇದೀಗ ಕನ್ನಡ ಮಾದ್ಯಮ ಶಾಲೆಯಲ್ಲೂ ಇಂಗ್ಲಿಷ್‌ ಕಲಿಕೆಗೆ ಪ್ರೋತ್ಸಾಹ ನೀಡಿದೆ. ಮಕ್ಕಳಿಗೆ ಇಂಗ್ಲಿಷ್ ಸ್ಪೋಕನ್ ತರಬೇತಿ ನೀಡುವ ಬಗ್ಗೆ ಶಾಲೆಗಳಿಗೆ ಆದೇಶ ನೀಡಿದೆ.

 

Image Source: NewsClick

 

advertisement

ಸರಕಾರಿ ಶಾಲಾ ಮಕ್ಕಳೂ ಇಂಗ್ಲೀಷ್ ಕಲಿಕೆಯಲ್ಲಿ ಹಿಂದೆ ಅನ್ನೋದು ಹಿಂದಿ ನಿಂದಲೂ ಚರ್ಚೆ ಯಾಗುತ್ತಿದೆ.‌ಹಾಗಾಗಿ ಇಂಗ್ಲೀಷ್ ಸಂವಹನದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆ ಮತ್ತು ಎಲ್ಲ ಕ್ಷೇತ್ರಗಳಲ್ಲೂ ಸಮರ್ಥವಾಗಿ ಎದುರಿಸಲು ಸ್ಪೋಕನ್‌ ಇಂಗ್ಲಿಷ್‌ ತರಗತಿಗಳನ್ನು ಆರಂಭಿಸಲು ನಿರ್ಧಾರ ಮಾಡಲಾಗಿದೆ.‌ ಒಂದರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಿಗೆ ‌ಇಂಗ್ಲೀಷ್ ಸಂವಹನ ತರಭೇತಿ ನೀಡಲು ಆದೇಶ ನೀಡಲಾಗಿದೆ.

1 ರಿಂದ 8ನೇ ತರಗತಿಯ ಮಕ್ಕಳಿಗೆ ಈ ವರ್ಷದಿಂದಲೇ ತರಭೇತಿ ನೀಡುವ ಬಗ್ಗೆ ತಿಳಿಸಲಾಗಿದೆ. ಈಗಾಗಲೇ ಇದಕ್ಕೆ ಅಂತಿಮ ಹಂತದ ಸಿದ್ಧತೆಗಳು ಆಗಿದ್ದು ಸರಕಾರಿ, ಮತ್ತು ಅನುದಾನಿತ ಶಾಲೆಗಳಲ್ಲಿ ಈ ಸೌಲಭ್ಯ ಸಿಗಲಿದೆ. ಬಹುತೇಕ ಈ ವರ್ಷವೇ ಸ್ಪೋಕನ್ ಇಂಗ್ಲೀಷ್ ತರಗತಿಗಳು ಪ್ರಾರಂಭ ಆಗಲಿವೆ.

 

Image Source: iStock

 

ಒಂದು ವೇಳೆ ಶಿಕ್ಷಕರ ಸಮಸ್ಯೆ ಬಂದರೆ ಔಟ್ ಸೋರ್ಸ್ ಅಥವಾ ಅತಿಥಿ ಶಿಕ್ಷಕರನ್ನ ನೇಮಕ ಮಾಡಿಕೊಂಡು ಸ್ಪೋಕನ್ ಇಂಗ್ಲೀಷ್ ಕಲಿಕೆಗೆ ಸರ್ಕಾರ ಮುಂದಾಗಿದೆ.ಈ ತರಭೇತಿಯನ್ನು 40 ನಿಮಿಷಗಳ ಸ್ಪೋಕನ್ ತರಬೇತಿ ವಾರದಲ್ಲಿ ಒಂದು ದಿನ ನಡೆಸಲು ಸಿದ್ಧತೆ ನಡೆಸಿದೆ.ಕನ್ನಡ ಮಾಧ್ಯಮ ಮಕ್ಕಳು ಇಂಗ್ಲಿಷ್ ಬಾರದೇ ಪರದಾಡುತ್ತಿದ್ದರು ಸದ್ಯ ಈ ಸೌಲಭ್ಯ ವಿದ್ಯಾರ್ಥಿಗಳ ಮುಂದಿನ ಜೀವನಕ್ಕೆ ಸಹಾಯವಾಗಲಿದೆ.ಈ ನಿಟ್ಟಿನಲ್ಲಿ ಶಾಲೆಗಳ ಪ್ರಾಥಮಿಕ ಹಂತದಲ್ಲೇ ಸ್ಪೋಕನ್ ಇಂಗ್ಲೀಷ್ ತರಬೇತಿಯನ್ನ ನೀಡಿದರೇ ವಿದ್ಯಾರ್ಥಿಗಳ ಭವಿಷ್ಯದ ಹಾದಿಗೆ ಸುಲಭವಾಗಲಿದೆ.

advertisement

Leave A Reply

Your email address will not be published.