Karnataka Times
Trending Stories, Viral News, Gossips & Everything in Kannada

Electricity Bill: ಜನರಿಂದ ಸುರಕ್ಷಿತ ಹಣವನ್ನು ಪಡೆಯಲು ವಿದ್ಯುತ್ ಇಲಾಖೆಯಿಂದ ಮಹತ್ತರ ನಿರ್ಧಾರ, ಇನ್ಮುಂದೆ ಹೆಚ್ಚಾಗಲಿದೆ ಎಲೆಕ್ಟ್ರಿಸಿಟಿ ಬಿಲ್!

advertisement

ಈ ಹಿಂದೆ ವರ್ಷದಲ್ಲಿ ಒಮ್ಮೆಲೇ ಸಂಗ್ರಹಿಸಲಾಗುತ್ತಿದ್ದ ಹೆಚ್ಚುವರಿ ಭದ್ರತಾ ಠೇವಣಿ ಹಣ (Additional Security Deposit Amount) ವನ್ನು ಇನ್ಮುಂದೆ ಪ್ರತಿ ತಿಂಗಳು ಇನ್ಸಟಾಲ್ಮೆಂಟ್ (Installment) ರೂಪದಲ್ಲಿ ಗ್ರಾಹಕರಿಂದ ಪಡೆಯಲು ವಿದ್ಯುತ್ ಇಲಾಖೆ ನಿರ್ಧರಿಸಿದ್ದು, ಇದಕ್ಕಾಗಿ ಹೊಸ ನಿಯಮವನ್ನು ಜಾರಿಗೊಳಿಸಿದ್ದಾರೆ.

WhatsApp Join Now
Telegram Join Now

ಹೌದು ಗೆಳೆಯರೇ ವಾರ್ಷಿಕ ವಿದ್ಯುತ್ ಬಳಕೆಯ ಆಧಾರದ ಮೇಲೆ ಗ್ರಾಹಕರಿಂದ ASD ಸಂಗ್ರಹಿಸಲಾಗುತ್ತಿತ್ತು ಆದರೆ ಇನ್ಮುಂದೆ ಎನರ್ಜಿ ಕಾರ್ಪೊರೇಷನ್ (Energy Corporation) ಏಪ್ರಿಲ್ ತಿಂಗಳಿನ ಬಿಲ್ನಿಂದಲೇ ಕಂತುಗಳ ರೀತಿ ಡೆಪಾಸಿಟ್ ಹಣವನ್ನು (Deposit Amount) ಸಂಗ್ರಹಿಸಲು ಪ್ರಾರಂಭ ಮಾಡಿದೆ.

ಇನ್ಮುಂದೆ ಪ್ರತಿ ತಿಂಗಳ ವಿದ್ಯುತ್ ಬಿಲ್ನಲ್ಲಿ ಏರಿಕೆ:

 

Image Source: Star of Mysore

 

ಉತ್ತರಕಾಂಡ ಸರ್ಕಾರ ಅದಾಗಲೇ ಈ ನಿಯಮವನ್ನು ಜಾರಿಗೊಳಿಸಿದ್ದು ವಿದ್ಯುತ್ ದರದಲ್ಲಿ 6.92% ಹೆಚ್ಚಿಸಿದೆ. ಈ ಯೋಜನೆಯಿಂದಾಗಿ ಗ್ರಾಹಕರು ಅಸಮಧಾನವನ್ನು ವ್ಯಕ್ತಪಡಿಸುತ್ತಿದ್ದು, ಪ್ರತಿ ತಿಂಗಳು ಹೆಚ್ಚುವರಿ ವಿದ್ಯುತ್ ಬಿಲ್ಲನ್ನು (Electricity Bill) ನಮ್ಮಿಂದ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ ವರ್ಷಕ್ಕೊಮ್ಮೆ ASD ಹಣವನ್ನು ಪಡೆಯರಿ ಎಂದು ಮನವಿ ಮಾಡಿಕೊಂಡಿದ್ದರು. ಆದರೂ ಸಹ ಇಂಧನ ನಿಗಮದಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ, ಈ ಕಾರಣದಿಂದಾಗಿ ವಿದ್ಯುತ್ ಬಳಕೆ ಮಾಡುತ್ತಿರುವ ಗ್ರಾಹಕರು ಹಾಗೂ ವಿರುದ್ಧ ಪಕ್ಷದ ರಾಜಕೀಯ ನಾಯಕರು (Opposition Political Party Leaders) ನಿರಂತರವಾಗಿ ಪ್ರತಿಭಟನೆ ನಡೆಸುತ್ತಾ, ಈ ಯೋಜನೆಯನ್ನು ಕಡಿತಗೊಳಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಆದರೆ ಅದಕ್ಕೆ ವಿದ್ಯುತ್ ಇಲಾಖೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತ್ತಿಲ್ಲ.

advertisement

ಭದ್ರತಾ ಹಣವನ್ನು ಪಾವತಿ ಮಾಡಿದೆ ಇರುವವರಿಗೆ ನೋಟಿಸ್ ಕಳಿಸಲಾಗುತ್ತದೆ:

 

Image Source: The Hindu

 

ಏಪ್ರಿಲ್ ತಿಂಗಳಿನಿಂದ ಜಾರಿಯಾದ ASD ಹಣವನ್ನು ಪಾವತಿ ಮಾಡದೇ ಇರುವ ಗ್ರಾಹಕರಿಗೆ ಇಂಧನ ನಿಗಮದಿಂದ ನೋಟಿಸ್ ಕಳಿಸಲಾಗುತ್ತದೆ. ಆರ್ಥಿಕ ವರ್ಷದ ಕೊನೆಯಲ್ಲಿ ಬಹು ದೊಡ್ಡ ಮೊತ್ತದ ಹಣವನ್ನು ಪಾವತಿ ಮಾಡಲು ಗ್ರಾಹಕರಿಗೆ ಬಹಳ ಕಷ್ಟವಾಗುತ್ತಿತ್ತು.

ಮತ್ತಷ್ಟು ಗ್ರಾಹಕರು ಠೇವಣಿ ಹಣವನ್ನು ನೀಡಲು ನಿರಾಕರಿಸುತ್ತಿದ್ದರು, ಇಂಧನ ನಿಗಮ (Energy Department) ಹಣ ವಸೂಲಿ ಮಾಡಲು ಸಾಕಷ್ಟು ಪ್ರಯತ್ನ ಪಡಬೇಕಾಗಿದ್ದು. ಈ ಕಾರಣದಿಂದ ವಿದ್ಯುತ್ ಬಿಲ್ಗೆ ಹಣವನ್ನು ಸೇರಿಸುವ ಮೂಲಕ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಹಣವನ್ನು ಪಡೆಯಲು ಮುಂದಾಗಿದ್ದಾರೆ.

ನಿಮ್ಮ ಠೇವಣಿ ಹಣಕ್ಕೆ ಇಂಧನ ನಿಗಮ ಬಡ್ಡಿ ಹಣವನ್ನು ನೀಡಲಿದ್ದಾರೆ:

ಹೀಗೆ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಭದ್ರತಾ ಠೇವಣಿ ಹಣವನ್ನು ಸಂಗ್ರಹಿಸಲು ಇಂಧನ ನಿಗಮ ಮುಂದಾಗಿದ್ದು, ಈ ಹಣವನ್ನು ಹೆಚ್ಚಿನ ದಿನಗಳ ಕಾಲ ಸಂಗ್ರಹಿಸಲಾಗುತ್ತದೆ. ವಿದ್ಯುತ್ ಸಂಪರ್ಕವನ್ನು ಮುಚ್ಚಿದಾಗ ಅವರ ಸಂಪೂರ್ಣ ಭದ್ರತಾ ಹಣ (Security Amount) ವನ್ನು ಗ್ರಾಹಕರಿಗೆ ಮರುಪಾವತಿಸಲಾಗುತ್ತದೆ ಇದರೊಂದಿಗೆ ನಿಮ್ಮ ಹಣಕ್ಕೆ ಬಡ್ಡಿ ಕೂಡ ದೊರಕುತ್ತದೆ. ಯಾರ ಬಿಲ್ ಈಗಾಗಲೇ ಠೇವಣಿಯಲ್ಲಿ ಇಟ್ಟಿರುವ ಭದ್ರತಾ ಠೇವಣಿಗಿಂತ ಕಡಿಮೆ ಇರುತ್ತದೆಯೋ ಆ ಬಿಲ್ ಮೊತ್ತವನ್ನು ಠೇವಣಿಗೆ ಸೇರಿಸುವ ಮೂಲಕ ಅವರ ತಿಂಗಳ ಬಿಲ್ ಕಡಿಮೆಯಾಗುತ್ತದೆ.

advertisement

Leave A Reply

Your email address will not be published.