Karnataka Times
Trending Stories, Viral News, Gossips & Everything in Kannada

KSRTC: KSRTC ಬಸ್ ನಲ್ಲಿ ಪ್ರಯಾಣಿಸುವ ಎಲ್ಲರಿಗೂ ಸಿಹಿಸುದ್ದಿ ಕೊಟ್ಟ ಸರ್ಕಾರ

advertisement

ಇಂದು ರಾಜ್ಯ ಸರಕಾರದ ಗ್ಯಾರಂಟಿ ಯೋಜನೆ ಶಕ್ತಿ ಯೋಜನೆ (Shakti Yojana) ಮೂಲಕ ಮಹಿಳೆಯರು ಉಚಿತ ಪ್ರಯಾಣ ವನ್ನು ಮಾಡುತ್ತಿದ್ದಾರೆ. ಈಗಾಗಲೇ ಮಹಿಳಾ ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ವಾಗಿದ್ದು ಬಸ್ ಗಳ ಸಂಖ್ಯೆ ‌ಕೂಡ ಹೆಚ್ಚು ಮಾಡಲಾಗಿದೆ. ಈಗಾಗಲೇ ಆಧಾರ್ ಕಾರ್ಡ್ (Aadhaar Card) ತೋರಿಸುವ ಮೂಲಕ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದರು‌‌.

WhatsApp Join Now
Telegram Join Now

ಇದೀಗ ಜೆರಾಕ್ಸ್ ಕಾಫಿ (Xerox Copy) ಅಥವಾ ಮೊಬೈಲ್‌ನಲ್ಲಿ ಇದರ ಪ್ರತಿ ಇದ್ದರೂ ಇದನ್ನು ತೋರಿಸುವ ಮೂಲಕ ಉಚಿತ ಪ್ರಯಾಣ (Free Travel) ಮಾಡಬಹುದು ಎನ್ನುವ ‌ಮಾಹಿತಿಯನ್ನು ಸರಕಾರ ನೀಡಿದೆ.‌ ಇದೀಗ ಸರಕಾರಿ ಬಸ್ ನಲ್ಲಿ‌ಪ್ರಯಾಣ ಮಾಡುವ ಜನತೆಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು ಈ ವಿಚಾರ ನೀವು ತಿಳಿಯಲೇ ಬೇಕು.

ಉಚಿತ ಪ್ರಯಾಣಕ್ಕೆ ಹೈ ಡಿಮ್ಯಾಂಡ್:

 

Image Source: ET Auto

 

ಇಂದು ಕರ್ನಾಟಕದ ನಾಲ್ಕು ಸಾರಿಗೆ ಸಂಸ್ಥೆಗಳಲ್ಲಿ 23,978 ಬಸ್‌ಗಳಿದ್ದು, ಅದರಲ್ಲಿ 21,574 ಬಸ್‌ಗಳು ಬಳಕೆಯಾಗುತ್ತಿದ್ದು ಪ್ರಯಾಣಿಕರ ಸಂಖ್ಯೆಯಂತು ಹೆಚ್ಚಿದೆ. ಅದರಲ್ಲೂ ಮಹಿಳಾ ಪ್ರಯಾಣಿಕರ ಸಂಖ್ಯೆ ಬಹಳಷ್ಟು ಹೆಚ್ಚಿದ್ದು ಇದಕ್ಕೆ ಅನುಗುಣವಾಗಿ ಸರ್ಕಾರದ ಆದಾಯವೂ ಹೆಚ್ಚಳ ಆಗಿದೆ.ಮಹಿಳಾ ಪ್ರಯಾಣಿಕರ ಒಟ್ಟು ಟಿಕೆಟ್ ಮೌಲ್ಯದಲ್ಲಿ KSRTC 900.29 ಕೋಟಿ ರೂ.ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದು ಹೊಸ ಬಸ್ ಗಳನ್ನು ಈಗಾಗಲೇ ಕೆಲವೊಂದು ಸ್ಥಳದಲ್ಲಿ ನಿಗದಿ ಪಡಿಸಲಾಗಿದೆ

advertisement

ಹೊಸ ಬಸ್ ಖರೀದಿ:

 

Image Source: The Hindu

 

ಇದೀಗ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು (KSRTC) ತನ್ನ ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಲು ಮುಂದಾಗಿದ್ದು‌ ದೂರದ ಊರುಗಳಿಗೆ ಪ್ರಯಾಣಿಕರು ಆರಾಮ ದಾಯಕವಾಗಿ ತೆರಳುವಂತೆ ಮಾಡಲು ಹೊಸ ಐರಾವತ್ ಕ್ಲಬ್ ಕ್ಲಾಸ್ (Airavat Club Class) ಮತ್ತು ಸ್ಲೀಪರ್ ಬಸ್‌ಗಳನ್ನು ಖರೀದಿಸಲು ಮುಂದಾಗಿದ್ದು ಈ ವಿಚಾರ ಪ್ರಯಾಣಿಕರಿಗಂತೂ ಬಹಳಷ್ಟು ಖುಷಿ ನೀಡಿದೆ.

ವೈಶಿಷ್ಟ್ಯ ಹೇಗಿದೆ?

ಇದೀಗ 40 ಹೊಸ ಐರಾವತ ಬಸ್‌ಗಳಿಗೆ ಟೆಂಡರ್ ಕರೆದಿದ್ದು ಈ ಬಸ್ ನ ಪ್ರಯಾಣವು ಪ್ರಯಾಣಿಕರಿಗೆ ವಿಶೇಷ ಅನುಭವ ನೀಡಲಿದೆ. ಆರಾಮದಾಯಕ ಪ್ರಯಾಣ ಕೂಡ ಮಾಡಬಹುದಾಗಿದೆ. ಈ ಬಸ್ ಐಷಾರಾಮಿ ಸೌಕರ್ಯವನ್ನು ನೀಡಲಿದ್ದು ಇವು ಬಿಎಸ್-6 ಎಂಜಿನ್‌ನಿಂದ ಚಾಲಿತವಾಗಿದ್ದು 40 ಆರಾಮದಾಯಕ ಆಸನಗಳನ್ನು ಹೊಂದಿರಲಿವೆ. ಈ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು ಅದಕ್ಕಾಗಿ ಕ್ಯಾಮೆರಾಗಳು, ಎಮರ್ಜೆನ್ಸಿ ಪ್ಯಾನಿಕ್ ಬಟನ್‌ಗಳು, ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಹಾಗೂ ಫೈರ್ ಡಿಟೆಕ್ಷನ್ ಸಿಸ್ಟಮ್ ಇತ್ಯಾದಿ ಆಕರ್ಷಕ ಫೀಚರ್ ಕೂಡ ಇರಲಿದೆ.

advertisement

Leave A Reply

Your email address will not be published.