Karnataka Times
Trending Stories, Viral News, Gossips & Everything in Kannada

RBI: ಬೆಳ್ಳಂಬೆಳಿಗ್ಗೆ ಮುಲಾಜಿಲ್ಲದೆ ಈ ಬ್ಯಾಂಕಿನ ಮೇಲೆ ಕ್ರಮ ಕೈಗೊಂಡ RBI , ಖಾತೆದಾರರಿಗೆ ಸೂಚನೆ

advertisement

Central Bank of India: ಸ್ನೇಹಿತರೆ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಭಾರತ ದೇಶದಲ್ಲಿ ಹಣಕಾಸಿನ ವಿಚಾರದಲ್ಲಿ ಹಾಗೂ ಹಣಕಾಸಿಗೆ ಸಂಬಂಧಪಟ್ಟಂತಹ ಸಂಸ್ಥೆಗಳ ಆಗಿರುವಂತಹ ಬ್ಯಾಂಕ್ ಹಾಗೂ ಇನ್ನಿತರ ಸಂಸ್ಥೆಗಳ ಕಂಟ್ರೋಲ್ ಮಾಡುವ ವಿಚಾರದಲ್ಲಿ ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಇನ್ನು ಲೇಟೆಸ್ಟ್ ಆಗಿ ಕೇಳಿ ಬರುತ್ತಿರುವಂತಹ ಸುದ್ದಿಯ ಪ್ರಕಾರ ಈ ಬ್ಯಾಂಕಿನ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಉಲ್ಲಂಘನೆ ಕಾರಣಕ್ಕಾಗಿ ಬರೋಬ್ಬರಿ ಫೈನ್ ಅನ್ನು ವಿಧಿಸಿದೆ ಎಂಬುದಾಗಿ ತಿಳಿದು ಬಂದಿದೆ. ಹೌದು ಗೆಳೆಯರೇ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನಿಯಮಗಳ ಉಲ್ಲಂಘನೆ ಮಾಡಿರುವ ಕಾರಣಕ್ಕಾಗಿ 1.45 ಕೋಟಿ ರೂಪಾಯಿಗಳ ಫೈನ್ ವಿಧಿಸಿದೆ ಎಂಬುದಾಗಿ ತಿಳಿದುಬಂದಿದೆ.

WhatsApp Join Now
Telegram Join Now

ದಂಡ ವಿಧಿಸುವುದರ ಹಿಂದಿನ ಕಾರಣ ಏನು?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಲೋನ್ ಹಾಗೂ ಅಡ್ವಾನ್ಸ್ ಜೊತೆಗೆ ಗ್ರಾಹಕರ ಸುರಕ್ಷತೆಗೆ ಸಂಬಂಧಪಟ್ಟಂತೆ ಕೆಲವೊಂದು ನಿಯಮಗಳ ಉಲ್ಲಂಘನೆಯನ್ನು ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಬ್ಯಾಂಕಿನ ಅಧಿನಿಯಮದ ಆಕ್ಟ್ 1949 ರ ಪ್ರಕಾರ ಈ ತಪ್ಪಿಗಾಗಿ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಬಳಿ 1.45 ಕೋಟಿ ರೂಪಾಯಿಗಳ ಜುರ್ಮಾನೆಯನ್ನು ಕಟ್ಟುವುದಕ್ಕೆ ಹೇಳಿದೆ.

Central Bank of India
Image Source: NDTV

advertisement

2022 ರಲ್ಲಿ ಕೂಡ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ವಿರುದ್ಧ ಆರ್ಥಿಕ ವ್ಯವಹಾರಗಳ ಬಗ್ಗೆ ಅಸಮಾಧಾನ ಹೊಂದಿರುವ ಕಾರಣದಿಂದಾಗಿ ಬ್ಯಾಂಕಿನಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಉತ್ತರವನ್ನು ಕೇಳಿತ್ತು. ಈ ಸಂದರ್ಭದಲ್ಲಿ ಕೇಳಿ ಬಂದಂತಹ ಉತ್ತರ ಕೂಡ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ ಗೆ ಅಷ್ಟೊಂದು ಸಮಾಧಾನಕರ ಎಂದು ಅನಿಸಲಿಲ್ಲ ಎಂಬುದಾಗಿ ತಿಳಿದು ಬಂದಿದ್ದು ಕೂಡ ಆ ಸಮಯದಲ್ಲಿ ಈ ವಿಚಾರದ ಬಗ್ಗೆ ನೋಟಿಸ್ ಕೂಡ ಕಳಿಸಲಾಗಿತ್ತು.

ಇದರಿಂದ ಗ್ರಾಹಕರ ಮೇಲೆ ಯಾವ ಪರಿಣಾಮ ಬೀಳುತ್ತೆ?

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ರೀತಿಯ ಕಾರ್ಯಾಚರಣೆ ನಡೆಸಿದಾಗ ಬಹುತೇಕ ಎಲ್ಲರೂ ಕೂಡ ಆ ಬ್ಯಾಂಕಿನ ಗ್ರಾಹಕರ ಸಾಕಷ್ಟು ಚಿಂತಿತರಾಗಿರುತ್ತಾರೆ. ಈ ಸಮಯದಲ್ಲಿ ಕೂಡ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಮೇಲೆ ಮಾಡಿರುವಂತಹ ಕಾರ್ಯಾಚರಣೆಯಿಂದಾಗಿ ಆ ಬ್ಯಾಂಕಿನ ಗ್ರಾಹಕರು ಯಾವುದೇ ರೀತಿಯ ಟೆನ್ಶನ್ ಮಾಡಿಕೊಳ್ಳಬೇಕಾದ ಅಗತ್ಯವಿಲ್ಲ ಈ ಕಾರ್ಯಚರಣೆ ಕೇವಲ ಬ್ಯಾಂಕಿನ ವಿರುದ್ಧ ಮಾತ್ರ ಬ್ಯಾಂಕಿನ ಗ್ರಾಹಕರ ವಿರುದ್ಧ ಅಲ್ಲ ಎನ್ನುವುದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. ಹೀಗಾಗಿ ಈ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರು ಈ ವಿಚಾರದ ಬಗ್ಗೆ ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ.

Image Source: The New Indian Express

advertisement

Leave A Reply

Your email address will not be published.