Karnataka Times
Trending Stories, Viral News, Gossips & Everything in Kannada

RBI: ಈ ಬ್ಯಾಂಕ್ ಬಂದ್ ಮಾಡುವಂತೆ ಘೋಷಿಸಿದ ರಿಸರ್ವ್ ಬ್ಯಾಂಕ್ ! ಹಣ ತಗೆಯಲು ಸಾಧ್ಯವಿಲ್ಲ

advertisement

ಕೇಂದ್ರ ಬ್ಯಾಂಕ್ ಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದಿರುವ RBI ತನ್ನ ಅಧೀನ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಆಗಾಗ ನಿಯಮ ಜಾರಿಗೆ ತರುವುದು , ಸಲಹೆ ಸೂಚನೆ ನೀಡುವ ಕೆಲಸವನ್ನು ಮಾಡುತ್ತಲೇ ಇರುತ್ತದೆ. ಅದೇ ರೀತಿ ಬ್ಯಾಂಕ್ ಸರಿಯಾಗಿ ಕಾರ್ಯ ನಿರ್ವಹಿಸದೇ ಹೋದರೆ ಆಗ ಅದನ್ನು ಪ್ರಶ್ನೆ ಮಾಡುವ ಅಧಿಕಾರ ಹಾಗೂ ಅಧೀನ ಬ್ಯಾಂಕ್ ವ್ಯವಸ್ಥೆ ಅಸಮರ್ಪಕ ಎನಿಸಿದರೆ ಪರವಾನಿಗೆ (License) ರದ್ದು ಮಾಡುವ ಅಧಿಕಾರ RBI ಗೆ ಇದೆ. ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಒಂದು ಸಹಕಾರಿ ಬ್ಯಾಂಕ್ ನ ಪರವಾನಿಗೆ (Bank License) ರದ್ದು ಮಾಡಿದ್ದು ಬ್ಯಾಂಕ್ ನಿಯಮ ಉಲ್ಲಂಘನೆ ಆದರೆ ಸಹಕಾರಿ ಬ್ಯಾಂಕುಗಳ ಪರವಾನಿಗೆ ರದ್ದಾಗಲಿದೆ ಎಂದು ಮಹತ್ವದ ನಿರ್ಣಯದ ಕುರಿತಾಗಿ ಮಾಹಿತಿ ನೀಡಿದೆ.

WhatsApp Join Now
Telegram Join Now

ಅಧಿಕೃತ ಹೇಳಿಕೆ:

ಈ ಬಗ್ಗೆ ಸ್ವತಃ RBI ಮೂಲಕವೇ ಅಧಿಕೃತ ಹೇಳಿಕೆ ಹೊರಬಂದಿದ್ದು ಬ್ಯಾಂಕ್ ನಲ್ಲಿ ಮೂಲ ಬಂಡವಾಳ ಕೊರತೆ ಮತ್ತು ಕಳಪೆ ಗಳಿಕೆ ಕಂಡು ಬಂದ ಸಂದರ್ಭದಲ್ಲಿ ಅಂತಹ ಬ್ಯಾಂಕ್ ನ ಪರವಾನಿಗೆ ರದ್ದು ಮಾಡಲಾಗುವುದು. ಗಾಜಿಪುರದ ಪೂರ್ವಾಂಚಲ್ ಸಹಕಾರಿ ಬ್ಯಾಂಕ್ ನ ಪರವಾನಿಗೆ ಇದೆ ಕಾರಣಕ್ಕೆ ರದ್ದಾಗಿದೆ.

ಇನ್ನು ಮುಂದೆ ಎಲ್ಲ ಸಹಕಾರಿ ಹಾಗೂ ಸಾಮಾನ್ಯ ಬ್ಯಾಂಕುಗಳು ಆರ್ಥಿಕ ಸ್ಥಿರತೆ ಕಾಯುವುದು ಅತ್ಯವಶ್ಯಕ ಇಲ್ಲವಾದರೆ ಬ್ಯಾಂಕ್ ಪರವಾನಿಗೆ ರದ್ದಾಗಲಿದೆ ಎಂದು RBI ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದೆ.

 

Image Source: Amar Ujala

 

advertisement

ಠೇವಣಿ ಹಿಂಪಡೆಯಬಹುದು:

ಗಾಜಿಪುರದ ಪೂರ್ವಾಂಚಲ್ ಬ್ಯಾಂಕ್ ಗೆ ನೀಡಿದ್ದ ಆದೇಶದ ಅನ್ವಯ ಇನ್ನು ಮುಂದೆ ಎಲ್ಲ ಬ್ಯಾಂಕ್ ಈ ನಿಯಮ ಪಾಲಿಸಬೇಕು. ಉತ್ತರ ಪ್ರದೇಶದ ರಿಜಿಸ್ಟಾರ್ ಗೆ ಬ್ಯಾಂಕ್ ಮುಚ್ಚುವ ಪ್ರಕ್ರಿಯೆ ಆರಂಭ ಮಾಡಲು ಸೂಚನೆ ನೀಡಲಾಗಿದೆ. ಹಾಗಾಗಿ ಈ ಪೂರ್ವಾಂಚಲ್ ಬ್ಯಾಂಕ್ ನಲ್ಲಿ ಠೇವಣಿ ಇಟ್ಟ ಗ್ರಾಹಕರು ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರೆಂಟಿ ಕಾರ್ಪೋರೇಷನ್ ನಿಂದ 5 ಲಕ್ಷ ರೂಪಾಯಿ ತನಕ ಠೇವಣಿ ಪಡೆಯಲು ಅಧಿಕಾರ ಇರಲಿದೆ. ಹಾಗಾಗಿ 99.51% ನಷ್ಟು ಗ್ರಾಹಕರು ತಮ್ಮ ಠೇವಣಿ ಮೊತ್ತ ಹಿಂಪಡೆಯಲಿದ್ದಾರೆ ಎಂದು ಹೇಳಬಹುದು

RBI ಪ್ರಕಾರ ಪೂರ್ವಾಂಚಲ್ ಬ್ಯಾಂಕ್ ನಲ್ಲಿ ಸಾಕಷ್ಟು ಬಂಡವಾಳ ಗಳಿಕೆ ನಿರೀಕ್ಷೆಯನ್ನು ಹೊಂದಿಲ್ಲ ಎಂದು ಹೇಳಬಹುದು. ಇದು ಬ್ಯಾಂಕಿನ ಹಿತಾಸಕ್ತಿ ಕಾಪಡಲಾರದು. ಹಾಗಾಗಿ ಇಂತಹ ಬ್ಯಾಂಕಿನ ಪರವಾನಿಗೆ ರದ್ದು ಮಾಡಲಾಗುವುದು.ಹಾಗಾಗಿ ಇನ್ನು ಮುಂದೆ ಪೂರ್ವಂಚಲ್ ಬ್ಯಾಂಕಿನ ಚಟುವಟಿಕೆ ನಡೆಸುವಂತಿಲ್ಲ. ಬ್ಯಾಂಕ್ ನಲ್ಲಿ ಠೇವಣಿ ಸಂಗ್ರಹ ಮಾಡುವುದು ಇತರ ಚಟುವಟಿಕೆ ಮಾಡುವಂತಿಲ್ಲ. ಹಾಗಾಗಿ ಬ್ಯಾಂಕಿನ ಚಟುವಟಿಕೆ ನಿಷೇಧ ಮಾಡಲಾಗಿದೆ.

ವಿಮೆ ಠೇವಣಿ ನೀಡಿದೆ:

RBI ನೀಡಿದ್ದ ಮಾಹಿತಿ ಪ್ರಕಾರ ಈಗಾಗಲೇ ಠೇವಣಿ ಇಟ್ಟ ಹಣ ವಾಪಾಸ್ಸು ನೀಡಲು ಸೂಚನೆ ನೀಡಲಾಗಿದ್ದು ಅದರಲ್ಲಿ 12 ಕೋಟಿಯಷ್ಟು ವಿಮಾ ಠೇವಣಿ ಸಂಬಂಧ ಪಟ್ಟ ಗ್ರಾಹಕರಿಗೆ ಹಸ್ತಾಂತರ ಮಾಡಲಾಗುತ್ತಿದೆ. ಇನ್ನು ಕ್ಲೈಮ್ ಪ್ರಕ್ರಿಯೆ ಕೂಡ ನಡೆಯುತ್ತಿದ್ದು ವಿಮೆ ಠೇವಣಿ ಹಂತ ಹಂತವಾಗಿ ಗ್ರಾಹಕರಿಗೆ ಮರು ನೀಡಲಾಗುತ್ತಿದೆ. ಹಾಗಾಗಿ ಇನ್ನು ಮುಂದೆ ಆರ್ಥಿಕ ಸಮಸ್ಥಿತಿ ಕಾಪಾಡದಿದ್ದರೆ ಹಾಗೂ ನೀಡಿದ್ದ ಸಾಲ ಮರುಪಾವತಿ ಸರಿಯಾದ ಸಮಯಕ್ಕೆ ಆಗದಿದ್ದರೆ ಅಂತಹ ಬ್ಯಾಂಕುಗಳ ಮೇಲೆ RBI ನಿಗಾ ವಹಿಸಿ ಅಗತ್ಯ ಬಿದ್ದರೆ ಪರವಾನಿಗೆ ಕೂಡ ರದ್ದು ಮಾಡುತ್ತದೆ.

advertisement

Leave A Reply

Your email address will not be published.