Karnataka Times
Trending Stories, Viral News, Gossips & Everything in Kannada

SBI: ಕೇಂದ್ರದ ಒಪ್ಪಿಗೆ ಮೇರೆಗೆ ಕರೆಂಟ್ ಬಿಲ್ ಕಟ್ಟಲಾಗದವರಿಗೆ ಸ್ಟೇಟ್ ಬ್ಯಾಂಕ್ ಹೊಸ ಘೋಷಣೆ, ಈಗಲೇ ಅರ್ಜಿ ಸಲ್ಲಿಸಿ

advertisement

SBI Surya Ghar – Loan for Solar Roof Top: ಕೇಂದ್ರ ಸರ್ಕಾರವು ಈಗಾಗಲೇ ಜನರಿಗೆ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ(Pradhanmantri Surya Ghar Yojana) ಕೂಡ ಒಂದು. ಭಾರತೀಯ ನಾಗರಿಕರಿಗೆ ಉಚಿತವಾಗಿ ವಿದ್ಯುತ್ ಅನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಈ ಯೋಜನೆಯನ್ನು ಪ್ರಾರಂಭ ಮಾಡಿದ್ದು ಸೂರ್ಯ ಘರ್ ಯೋಜನೆಯ ಸೌಲಭ್ಯವನ್ನು ಪಡೆದುಕೊಂಡು ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿದರೆ ಬರೋಬ್ಬರಿ 300 ಯೂನಿಟ್ ಗಳಷ್ಟು ಉಚಿತ ಎಲೆಕ್ಟ್ರಿಸಿಟಿ ಸೌಲಭ್ಯವನ್ನು(300 Unit Free Electricity Facility) ಪಡೆಯಬಹುದು.

WhatsApp Join Now
Telegram Join Now

ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸರ್ಕಾರದಿಂದ ಧನ ಸಹಾಯ

ಪ್ರಧಾನಮಂತ್ರಿ ಸೂರ್ಯ ಗರ್ ಯೋಜನೆಗೆ ಅರ್ಜಿ ಸಲ್ಲಿಸಿ ಸರಕಾರದಿಂದ ನೀಡಲಾಗುವ ಸಬ್ಸಿಡಿ ಹಣವನ್ನು ಪಡೆದುಕೊಂಡು ಮನೆಯ ಮೇಲ್ಚಾವಣಿಯ(House Rooftop) ಮೇಲೆ ಈ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಿ ಉಚಿತವಾಗಿ ವಿದ್ಯುತ್ ಉಪಯೋಗಿಸಬಹುದು. ಈಗಾಗಲೇ ಒಂದು ಕೋಟಿಗೂ ಅಧಿಕ ಕುಟುಂಬಗಳು ಈ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದು, 1 KW ವ್ಯವಸ್ಥೆಯನ್ನು ಅಳವಡಿಸಲು ₹30,000, 2 KW ವ್ಯವಸ್ಥೆ ಅಳವಡಿಕೆಗೆ ₹60,000 ಹಾಗೂ 3 KW ಗೆ ₹78,000 ವರೆಗೂ ಸಬ್ಸಿಡಿ ಹಣವನ್ನು ನೀಡಲಾಗುತ್ತದೆ.

SBI Surya Ghar – Loan for Solar Roof Top
Image Source: Naidunia

ಸೋಲಾರ್ ರೂಫ್ ಟಾಪ್ ಮಾಡಲು SBIನಿಂದ ಸಿಗಲಿರುವ ಸಾಲವೆಷ್ಟು?

ಸದ್ಯ ಎಲ್ಲರಿಗು ಯೋಜನೆಯ ಅನುಕೂಲ ಆಗಬೇಕೆಂದು ಸ್ಟೇಟ್ ಬ್ಯಾಂಕ್ ಮಹತ್ವದ ಘೋಷಣೆ ಮಾಡಿದೆ, ಕೇಂದ್ರಾದ ಒಪ್ಪಿಗೆ ಮೇರೆಗೆ ಎಲ್ಲರಿಗು ಸೋಲಾರ್ ಲೋನ್ ನೀಡಲು ಮುಂದಾಗಿದೆ. ಸರ್ಕಾರದಿಂದ ದೊರಕುವಂತಹ ಸಬ್ಸಿಡಿ ಹಣವನ್ನು ಹೊರತುಪಡಿಸಿ ಅದರ ಅಳವಡಿಕೆಗೆ ಮತ್ತಷ್ಟು ಹಣ ಖರ್ಚಾಗಲಿದೆ. ಹೀಗಾಗಿ ಸಾಕಷ್ಟು ಬ್ಯಾಂಕುಗಳು ಇದರ ಮೇಲೆ ಸಾಲ ನೀಡಲು ಮುಂದಾಗಿದ್ದು, 3 KW – 10 KW ವರೆಗಿನ ಕೆಪ್ಯಾಸಿಟಿ ಇರುವ ಪ್ಯಾನಲ್(solar panels) ಗಳನ್ನು ಅಳವಡಿಸಲು ಎರಡು ಲಕ್ಷದಿಂದ 6 ಲಕ್ಷದವರೆಗೂ ಸಾಲವನ್ನು ಪಡೆದುಕೊಳ್ಳಬಹುದು.

ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು

advertisement

ಗುರುತಿನ ಪುರಾವೆ/identity proof
ವಿಳಾಸದ ಪುರಾವೆ/address proof
ಮನೆ ಮಾಲೀಕತ್ವದ ಪ್ರಮಾಣ ಪತ್ರ/House ownership certificate
ಆದಾಯ ಪ್ರಮಾಣ ಪತ್ರ/Income Proof
ವಿದ್ಯುತ್ ಬಿಲ್/electricity bill

SBI Surya Ghar – Loan for Solar Roof Top
Image Source: Vakilsearch

ಸೂರ್ಯ ಘರ್ ಯೋಜನೆಯ ಅರ್ಹತೆ!

1.ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಅರ್ಜಿ ಸಲ್ಲಿಸುವಂತಹ ವ್ಯಕ್ತಿಯು ಕಡ್ಡಾಯವಾಗಿ ಭಾರತೀಯ ನಾಗರಿಕನಾಗಿರಬೇಕು.

2.ಭಾರತದಲ್ಲಿ ತನ್ನದೇ ಆದ ಸ್ವಂತ ಮನೆಯನ್ನು ಹೊಂದಿರಬೇಕು, ಬಾಡಿಗೆದಾರರು ಯೋಜನೆಗೆ ಅರ್ಹರಾಗಿರುವುದಿಲ್ಲ.

3.ಅರ್ಜಿದಾರರು ಸರ್ಕಾರದ ಇತರೆ ಸೋಲಾರ್ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತಿರಬಾರದು.

4.ಪ್ರಧಾನ ಮಂತ್ರಿ ಸೂರ್ಯನಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು https://pmsuryaghar.gov.in ಎಂಬ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಕೆಳವಾಗುವಂತಹ ದಾಖಲಾತಿಗಳನ್ನು ನಮೂದಿಸಿ.

ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲು ಸರ್ಕಾರದ ವತಿಯಿಂದ ಸಾಲವನ್ನು ಪಡೆದುಕೊಳ್ಳಬಹುದು. ಈ ಕುರಿತಾದ ಹೆಚ್ಚಿನ ಮಾಹಿತಿಯು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಅರ್ಜಿ ಸಲ್ಲಿಕೆಯಲ್ಲಿ ಪೋರ್ಟಲ್ ನ ಸಹಾಯಕರು ನಿಮಗೆ ಸೂಚನೆಯನ್ನು ನೀಡುತ್ತಾರೆ. ಯಾವುದೇ ತಪ್ಪನ್ನು ಮಾಡದೆ ಬ್ಯಾಂಕ್ ವಿವರಗಳನ್ನೆಲ್ಲ ಸರಿಯಾದ ಕ್ರಮದಲ್ಲಿ ನಮೂದಿಸಿ ಪಿಎಂ ಸೂರ್ಯ ಘರ್ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು.

advertisement

Leave A Reply

Your email address will not be published.