Karnataka Times
Trending Stories, Viral News, Gossips & Everything in Kannada

RBI: ಗ್ರಾಹಕರಲ್ಲಿ ಮನೆ ಮಾಡಿದ ಆತಂಕ! ಇನ್ನೊಂದು ಪ್ರತಿಷ್ಠಿತ ಬ್ಯಾಂಕಿನ ಲೈಸನ್ಸ್ ರದ್ದು

advertisement

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇದೆ ಬುಧವಾರ ಒಂದು ಕೋ ಆಪರೇಟಿವ್ ಬ್ಯಾಂಕಿನ ಲೈಸೆನ್ಸ್ ಅನ್ನು ರದ್ದು ಮಾಡಿದೆ ಎಂಬುದಾಗಿ ತಿಳಿದು ಬಂದಿದ್ದು ಇದಕ್ಕೆ ಕಾರಣ ಕೂಡ ತಿಳಿದು ಬಂದಿದ್ದು ಬನ್ನಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

ಹೌದು ಭಾರತ ದೇಶದ ಪ್ರತಿಯೊಂದು ಬ್ಯಾಂಕುಗಳನ್ನು ನಿಯಂತ್ರಿಸುವಂತಹ ಹಾಗೂ ಹಣಕಾಸಿನ ವ್ಯವಹಾರಗಳಲ್ಲಿ ಹೊಸ ಹೊಸ ನಿಯಮಗಳನ್ನ ಜಾರಿಗೆ ತರುವಂತಹ ಅಧಿಕಾರವನ್ನು ಹೊಂದಿರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಿಟಿ ಕೋ ಆಪರೇಟಿವ್ (City Cooperative Bank) ಲೈಸೆನ್ಸ್ ಅನ್ನು ಸರಿಯಾದ ಹಣ ಇಲ್ಲದೆ ಇರುವ ಹಾಗೂ ಮುಂದಿನ ದಿನಗಳಲ್ಲಿ ಸರಿಯಾದ ಆದಾಯ ಕೂಡ ಹರಿದು ಬರುವಂತಹ ಅನುಮಾನ ಇರುವ ಕಾರಣಕ್ಕಾಗಿ ರದ್ದು ಮಾಡಿದೆ.

 

Image Source: Indian Cooperative

 

advertisement

ಜೂನ್ 19ರಿಂದಲೇ ಯಾವುದೇ ರೀತಿಯ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ನಡೆಸುವ ಹಾಗೆ ಇಲ್ಲ ಎನ್ನುವುದಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈ ಕೊ ಆಪರೇಟಿವ್ ಬ್ಯಾಂಕ್ (Cooperative Bank) ಮೇಲೆ ನಿಯಮವನ್ನು ಜಾರಿಗೆ ತಂದಿದೆ. ಇನ್ನು ಹೂಡಿಕಿದಾರರ ಗತಿ ಏನು ಎಂಬುದಾಗಿ ನೀವು ಯೋಚಿಸಬೇಕಾದ ಅಗತ್ಯವಿಲ್ಲ ಈ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಹಣವನ್ನು ಹೂಡಿಕೆ ಮಾಡಿರುವಂತಹ ಜನರಿಗೆ (DICGC) ನಿಯಮಗಳ ಪ್ರಕಾರ 5 ಲಕ್ಷ ರೂಪಾಯಿಗಳ ವರೆಗೆ ಪರಿಹಾರವನ್ನು ನೀಡಬಹುದಾಗಿದೆ. ಅಂದ್ರೆ ನೀವು ಈ ಬ್ಯಾಂಕಿನಲ್ಲಿ ಎಷ್ಟೇ ಹಣವನ್ನು ಹೂಡಿಕೆ ಮಾಡಿದರು ಕೂಡ 5 ಲಕ್ಷಗಳವರೆಗೆ ಅದನ್ನು ಮರಳಿ ಪಡೆದುಕೊಳ್ಳುವಂತಹ ಇನ್ಸೂರೆನ್ಸ್ ಪರಿಹಾರ ನಿಮಗೆ ಸಿಗುತ್ತದೆ.

ತಿಳಿದು ಬಂದಿರುವಂತಹ ಮಾಹಿತಿಗಳ ಪ್ರಕಾರ ಬ್ಯಾಂಕಿನಿಂದ 87 ಪ್ರತಿಶತ ಹೂಡಿಕೆದಾರರು ತಮ್ಮ ಹಣವನ್ನು ಪಡೆದುಕೊಳ್ಳಲಿದ್ದಾರೆ ಎಂಬುದಾಗಿ (DICGC) ತಿಳಿಸಿದೆ ಎಂಬುದಾಗಿ ತಿಳಿದು ಬಂದಿದೆ. ಬ್ಯಾಂಕಿನ ವಿಚಾರವಾಗಿ ಜೂನ್ 14ರವರೆಗೆ (DICGC) ಸಂಸ್ಥೆ ಹೂಡಿಕೆದಾರರಿಗೆ ಇದುವರೆಗೆ 230.99 ಕೋಟಿ ರೂಪಾಯಿಗಳ ಹಣವನ್ನು ಹಿಂದಿರುಗಿಸಿದೆ ಎಂಬುದಾಗಿ ತಿಳಿದು ಬಂದಿದೆ.

ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಈ ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಾ ಬ್ಯಾಂಕ್ ಸದ್ಯದ ಪರಿಸ್ಥಿತಿಯಲ್ಲಿ ತನ್ನ ಬ್ಯಾಂಕಿನಲ್ಲಿ ಹಣವನ್ನು ಹೂಡಿಕೆ ಮಾಡುವಂತಹ ಡೆಪಾಸಿಟರ್ಗಳಿಗೆ ಹಣವನ್ನು ಪೂರ್ತಿಯಾಗಿ ವಾಪಸ್ ಮಾಡುವಂತಹ ಪರಿಸ್ಥಿತಿಯಲ್ಲಿ ಇಲ್ಲ ಎಂಬುದಾಗಿ ಹೇಳಿಕೊಂಡಿದೆ. ಹೀಗಾಗಿ ಈ ಬ್ಯಾಂಕ್ ಅನ್ನು ಇನ್ನು ಮುಂದುವರಿಸಿಕೊಂಡು ಹೋಗುವುದು ಸಾಕಷ್ಟು ರೀತಿಯಲ್ಲಿ ವ್ಯತಿರಿಕ್ತ ಪರಿಣಾಮವನ್ನು ಎದುರಿಸಬಹುದಾಗಿದೆ ಎನ್ನುವ ಕಳವಳವನ್ನು ಕೂಡ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದೆ.

ಹೀಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವಿಧಿಸಿರುವಂತಹ ಲೈಸೆನ್ಸ್ (License) ಕ್ಯಾನ್ಸಲ್ ಪ್ರಕ್ರಿಯೆ ಕಾರಣದಿಂದಾಗಿ ಮುಂದಿನ ದಿನಗಳಲ್ಲಿ ಈ ಕೊ ಆಪರೇಟಿವ್ ಬ್ಯಾಂಕ್ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಬ್ಯಾಂಕಿಂಗ್ ಕಾರ್ಯಾಚರಣೆಗಳನ್ನು ನಡೆಸುವ ಹಾಗಿಲ್ಲ ಎನ್ನುವಂತಹ ಕಟ್ಟುನಿಟ್ಟಿನ ನಿಯಮಗಳನ್ನು ಕೂಡ ಈಗಾಗಲೇ ಜಾರಿಗೆ ತರಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಹಕರು ಈ ಬ್ಯಾಂಕಿನಲ್ಲಿ ಯಾವುದೇ ರೀತಿಯ ಡೆಪಾಸಿಟ್ ಹಾಗೂ ಹಣವನ್ನು ತೆಗೆದುಕೊಳ್ಳುವಂತಹ ಪ್ರಕ್ರಿಯೆ ಕೂಡ ನಡೆಯೋದಿಲ್ಲ.

advertisement

Leave A Reply

Your email address will not be published.