Karnataka Times
Trending Stories, Viral News, Gossips & Everything in Kannada

SIM Card: ಇಂದು ಮಧ್ಯರಾತ್ರಿಯಿಂದಲೇ ಸಿಮ್ ಕಾರ್ಡ್ ವಿಚಾರವಾಗಿ ಹೊಸ ರೂಲ್ಸ್! ಖಡಕ್ ಆದೇಶ

advertisement

ಪ್ರತಿಯೊಬ್ಬರ ಜೀವನದಲ್ಲಿ ಕೂಡ ಮೊಬೈಲ್ ಒಂದು ರೀತಿಯಲ್ಲಿ ಅವಿಭಾಜ್ಯ ಅಂಗವಾಗಿದೆ ಹಾಗೂ ಸಿಮ್ ಕಾರ್ಡ್ (SIM Card) ಕೂಡ ಅತ್ಯಂತ ಪ್ರಮುಖವಾದ ವಸ್ತುವಿನ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ತಿಳಿದುಬಂದಿರುವ ಮಾಹಿತಿಯ ಪ್ರಕಾರ ಸಿಮ್ ಕಾರ್ಡ್ (SIM Card) ಬಗ್ಗೆ ಕೂಡ ಈಗ ಹೊಸ ನಿಯಮವನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂಬುದಾಗಿ ತಿಳಿದು ಬಂದಿದೆ. ಹೊಸ ನಿಯಮ ಏನು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿದುಕೊಳ್ಳುವಂತಹ ಪ್ರಯತ್ನ ಮಾಡೋಣ.

WhatsApp Join Now
Telegram Join Now

ನಾಳೆಯಿಂದಲೇ ಜಾರಿ ಆಗ್ತಾ ಇದೆ ಈ ಹೊಸ ನಿಯಮ:

ಪಾರ್ಲಿಮೆಂಟ್ ನಲ್ಲಿ ಪಾಸ್ ಆಗಿರುವಂತಹ ಹೊಸ ಟೆಲಿಕಾಂ ಆಕ್ಟ್ ಪ್ರಕಾರ ಇನ್ಮುಂದೆ ಒಂದು ಆಧಾರ್ ಕಾರ್ಡ್ ಮೇಲೆ ಒಂಬತ್ತಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ಗಳನ್ನು (SIM Card) ಖರೀದಿಸಿದರೆ ಅವರ ಮೇಲೆ ದೊಡ್ಡ ಮಟ್ಟದಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಮೊದಲ ಬಾರಿ ಈ ರೀತಿ ಸಿಕ್ಕಿಬಿದ್ರೆ ಅವರ ಮೇಲೆ 50,000ಗಳ ದಂಡ ಹಾಗೂ ಎರಡನೇ ಬಾರಿ ಸಿಕ್ಕಿ ಬಿದ್ದರೆ 2 ಲಕ್ಷಗಳವರೆಗೆ ದಂಡವನ್ನು ವಿಧಿಸಲಾಗುತ್ತದೆ. ಸಾಕಷ್ಟು ವರ್ಷಗಳ ಇತಿಹಾಸವನ್ನು ಹೊಂದಿರುವಂತಹ ಟೆಲಿಗ್ರಾಫ್ ಆಕ್ಟ್ ಅನ್ನು ಈಗ ರಿಪ್ಲೇ ಮಾಡಲಾಗುತ್ತಿದೆ ಎನ್ನುವಂತಹ ಮಾಹಿತಿ ತಿಳಿದು ಬಂದಿದ್ದು ಅದರಲ್ಲಿ ಕೂಡ ಈ ವಿಚಾರ ಉಲ್ಲೇಖವಾಗಿರುವುದೇ ಈಗ ಇದು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಕಾರಣವಾಗಿದೆ.

 

Image Source: Mint

 

advertisement

ಹೊಸ ಟೆಲಿಕಾಂ ಆಕ್ಟ್ ಪ್ರಕಾರ ಯಾರು ಕೂಡ ತಮ್ಮ ಸಿಮ್ ಕಾರ್ಡ್ (SIM Card) ಅನ್ನು ಕೆಟ್ಟ ಕೆಲಸಗಳಿಗೆ ಉಪಯೋಗ ಮಾಡಬಾರದು ಹಾಗೂ ಯಾರದ್ದೇ ಕಾಲ್ ಬಂದ್ರು ಕೂಡ ಅವರ ಹೆಸರಿನ ಸಮೇತ ಗ್ರಾಹಕರಿಗೆ ಯಾರ್ ಕಾಲ್ ಮಾಡಿದ್ದಾರೆ ಎಂಬುದಾಗಿ ತಿಳಿದುಬರುವಂತಹ ನಿಯಮಗಳನ್ನು ಕೂಡ ಈ ಮೂಲಕ ತರಲಾಗುತ್ತಿದೆ.

ಒಂದು ವೇಳೆ ಯಾವುದೇ ರೀತಿಯ ನಕಲಿ ಐಡಿಯನ್ನು ಬಳಸಿಕೊಂಡು ನೀವು ಸಿಮ್ ಕಾರ್ಡ್ (SIM Card) ಖರೀದಿ ಮಾಡೋದಕ್ಕೆ ಹೋದರೆ 50 ಲಕ್ಷ ರೂಪಾಯಿಗಳ ವರೆಗೆ ದಂಡವನ್ನು ಕಟ್ಟಬೇಕಾಗುತ್ತೆ ಹುಷಾರ್. ಕೇವಲ ಫೈನ್ ಮಾತ್ರ ಅಲ್ಲ ಜೇಲ್ ಕೂಡ ಆಗಬಹುದಾಗಿದೆ. ಇನ್ನು ಹೊಸ ನಿಯಮಗಳ ಪ್ರಕಾರ ಸಿಮ್ ಕಾರ್ಡ್ ಖರೀದಿಯಲ್ಲಿ ಆಧಾರ್ ಕಾರ್ಡ್ ವೆರಿಫಿಕೇಷನ್ ಕೂಡ ಮಾಡಬೇಕಾಗಿರುತ್ತದೆ.

ಇನ್ನು ಮುಂದೆ ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ಡು ನಾಟ್ ಡಿಸ್ಟರ್ಬ್ ಆಪ್ಷನ್ ನೀಡುವಂತಹ ನಿಯಮವನ್ನು ಕೂಡ ಜಾರಿಗೆ ತರಲಿದೆ. ಅನುಮತಿ ಇಲ್ಲದೆ ಟೆಲಿಕಾಂ ಸರ್ವಿಸ್ ನೀಡುವುದು ಅಥವಾ ಡೇಟಾ ಅಸೆಸ್ ಮಾಡುವುದನ್ನ ಕೂಡ ಟೆಲಿಕಾಂ ಕಂಪನಿಗಳು ಇನ್ಮುಂದೆ ಮಾಡುವ ಹಾಗಿಲ್ಲ. ಕಾಲ್ ಟೈಪಿಂಗ್ ಸೇರಿದಂತೆ ಗ್ರಾಹಕರ ಸಿಮ್ ಬಗ್ಗೆ ಕದ್ದು ಮಾಹಿತಿಯನ್ನು ಪಡೆದುಕೊಳ್ಳುವುದನ್ನು ಮಾಡಿದರೆ ಎರಡು ಕೋಟಿ ರೂಪಾಯಿಗಳ ವರೆಗೆ ದಂಡವನ್ನು ವಿಧಿಸುವಂತಹ ನಿಯಮವನ್ನು ಕೂಡ ಜಾರಿಗೆ ತರಲಾಗಿದೆ.

ಹೀಗಾಗಿ ಇನ್ಮುಂದೆ ಟೆಲಿಕಾಂ ಆಕ್ಟ್ ನಿಯಮಗಳ ಪ್ರಕಾರ ಒಂದು ಆಧಾರ್ ಕಾರ್ಡ್ ನಿಂದ 9 ಸಿಮ್ ಕಾರ್ಡ್ ಗಳನ್ನ ಮ್ಯಾಕ್ಸಿಮಮ್ ಪಡೆದುಕೊಳ್ಳಬಹುದಾಗಿದ್ದು ಅದಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ ಗಳನ್ನು ಪಡೆದುಕೊಳ್ಳುವುದು ಕಾನೂನು ಪ್ರಕಾರವಾಗಿ ಅಪರಾಧವಾಗಿರುತ್ತದೆ.

advertisement

Leave A Reply

Your email address will not be published.