Karnataka Times
Trending Stories, Viral News, Gossips & Everything in Kannada

RBI: ಚಲಾವಣೆಯಲ್ಲಿರುವ ಎಲ್ಲಾ ನೋಟುಗಳ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊಸ ನಿಯಮ!

advertisement

ನಮಗೆ ಸಾಕಷ್ಟು ಬಾರಿ ಹರಿದು ಹೋಗಿರುವಂತಹ ನೋಟುಗಳು (Torn Notes) ಸಿಕ್ಕಿರಬಹುದು ಆ ಸಂದರ್ಭದಲ್ಲಿ ನಾವು ಗಮ್ ಟೇಪ್ ಅನ್ನು ಸಿಕ್ಕಿಸಿ ಅವುಗಳನ್ನು ಬೇರೆ ಕಡೆಗೆ ಪಾಸ್ ಮಾಡುವಂತಹ ಕೆಲಸವನ್ನು ಸಾಕಷ್ಟು ಬಾರಿ ಮಾಡಿರುವುದು ನಿಮಗೆ ನೆನಪಿರಬಹುದು. ಸಾಕಷ್ಟು ಬಾರಿ ಒದ್ದೆ ಆಗಿರುವಂತಹ ನೋಟುಗಳನ್ನು ಹೇಗೋ ಮಾಡಿ ಅವುಗಳನ್ನು ಬೇರೆಯವರಿಗೆ ಸಾಗು ಹಾಕಬೇಕು ಎನ್ನುವಂತಹ ಯೋಜನೆಗಳನ್ನು ರೂಪಿಸಿರುವುದನ್ನು ಕೂಡ ನೀವು ನೋಡಿರಬಹುದು. ಇನ್ಮುಂದೆ ಆ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಮಗೆ ಒಂದು ಗುಡ್ ನ್ಯೂಸ್ ನೀಡುವುದಕ್ಕೆ ಹೊರಟಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

ಹರಿದು ಹಾಳಾಗಿರುವ ನೋಟುಗಳಿಗೆ ಹೊಸ ನಿಯಮವನ್ನು ಜಾರಿಗೆ ತಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ:

 

Image Source: DNA India

 

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹರಿದು ಹೋಗಿರುವ ಹಾಗೂ ಸುಟ್ಟಿರುವಂತಹ ನೋಟುಗಳಿಗೆ (Torn Notes) ಹತ್ತಿರದ ಬ್ಯಾಂಕುಗಳಿಗೆ ಹೋಗಿ ಬದಲಾವಣೆ ಮಾಡಿಕೊಳ್ಳುವುದಕ್ಕೆ ಹೊಸ ನಿಯಮವನ್ನು ಜಾರಿಗೆ ತಂದಿದ್ದು ಈ ಮೂಲಕ ನೀವು ಲಾಭವನ್ನು ಪಡೆದುಕೊಳ್ಳಬಹುದು. ಇನ್ಮುಂದೆ ಈ ರೀತಿ ಹರಿದು ಹೋಗಿರುವಂತಹ ಅಥವಾ ಸ್ವಲ್ಪಮಟ್ಟಿಗೆ ಹಾಳಾಗಿರುವಂತಹ ನೋಟುಗಳನ್ನು ಬ್ಯಾಂಕಿನಲ್ಲಿ ಎಕ್ಸ್ಚೇಂಜ್ (Torn Notes Exchange) ಮಾಡಿಕೊಳ್ಳುವುದಕ್ಕೆ ಯಾವುದೇ ರೀತಿಯ ಫಾರ್ಮ್ ಗೆ ಅರ್ಜಿ ಹಾಕಬೇಕಾದ ಅಗತ್ಯವಿಲ್ಲ.

advertisement

20 ನೋಟುಗಳವರೆಗೆ ಹರಿದು ನೋಟನ್ನು (Torn Notes) ನೀವು 5000 ಮ್ಯಾಕ್ಸಿಮಮ್ ಮೌಲ್ಯದ ವರೆಗೆ ಬ್ಯಾಂಕಿನಲ್ಲಿ ಕೊಟ್ಟು ಎಕ್ಸ್ಚೇಂಜ್ (Exchange) ಮಾಡಿಕೊಳ್ಳಬಹುದಾಗಿದೆ. ಇದು ಉಚಿತವಾಗಿ ಮಾಡಿಕೊಳ್ಳಬಹುದಾದಂತಹ ನಿಯಮವಾಗಿದ್ದು ಇದಕ್ಕಿಂತ ಹೆಚ್ಚಿನ ನೋಟುಗಳನ್ನು ನೀವು ಎಕ್ಸ್ಚೇಂಜ್ ಮಾಡಿಕೊಳ್ಳುವುದಕ್ಕೆ ಹೋದರೆ ಅವುಗಳ ಪರಿಸ್ಥಿತಿಗೆ ಅನುಗುಣವಾಗಿ ಅದಕ್ಕೆ ಯಾವ ರೀತಿಯಲ್ಲಿ ಮೌಲ್ಯವನ್ನು ನೀಡಬೇಕು ಎಂಬುದಾಗಿ ಲೆಕ್ಕಾಚಾರ ಹಾಕಿ ಬ್ಯಾಂಕ್ ನಿಮ್ಮ ಖಾತೆಗೆ ಹಣವನ್ನು ವರ್ಗಾವಣೆ ಮಾಡುವುದು. ಇನ್ನು 50,000ಗಳಿಗಿಂತ ಹೆಚ್ಚಿನ ಮೌಲ್ಯದ ನೋಟುಗಳನ್ನು ಎಕ್ಸ್ಚೇಂಜ್ ಮಾಡಿಕೊಳ್ಳುವುದಕ್ಕೆ ಹೋದರೆ ಬ್ಯಾಂಕ್ ಕೆಲವೊಂದು ಪ್ರಮುಖ ನಿಯಮಗಳನ್ನು ಈ ವಿಚಾರದಲ್ಲಿ ಅಳವಡಿಸಿಕೊಳ್ಳಬಹುದಾಗಿದೆ.

 

Image Source: Telangana Today

 

ಇನ್ನು ಅಗತ್ಯಕ್ಕಿಂತ ಹೆಚ್ಚಾಗಿ ಸುಟ್ಟು ಹೋಗಿರುವಂತಹ ಅಥವಾ ಅಂಟಿಕೊಂಡಿರುವಂತಹ ನೋಟುಗಳನ್ನ ಈ ರೀತಿ ಬ್ಯಾಂಕಿನಲ್ಲಿ ನೀವು ಜಮಾ ಮಾಡಲು ಸಾಧ್ಯವಿಲ್ಲ ಹಾಗೂ ಅದಕ್ಕೆ ಅಂತಾನೇ ವಿಶೇಷವಾದ ಕೇಂದ್ರಗಳಿವೆ ಅಲ್ಲಿ ಹೋಗಿ ನೀವು ಅಲ್ಲಿನ ಮೌಲ್ಯಕ್ಕೆ ತಕ್ಕಂತೆ ಅದರ ಮೌಲ್ಯವನ್ನು ಪಡೆದುಕೊಳ್ಳಬಹುದು ಎನ್ನುವಂತಹ ಸೂಚನೆಯನ್ನು ಕೂಡ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ನೀಡಿದೆ.

ಮುಂದಿನ ದಿನಗಳಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ದ ಈ ನಿಯಮಗಳ ಮೂಲಕ ನೀವು ಒಂದು ವೇಳೆ ಹರಿದು ಹೋಗಿರುವಂತಹ ನೋಟುಗಳನ್ನು (Torn Notes) ಬ್ಯಾಂಕಿನಲ್ಲಿ ಎಕ್ಸ್ಚೇಂಜ್ ಮಾಡುವುದಕ್ಕೆ ಹೋಗುವುದಕ್ಕಿಂತ ಮುಂಚೆ ತಿಳಿದುಕೊಂಡು ಹೋಗಿ.

advertisement

Leave A Reply

Your email address will not be published.