Karnataka Times
Trending Stories, Viral News, Gossips & Everything in Kannada

Antilia: ಸಾವಿರಾರು ಕೋಟಿಯ ಅಂಬಾನಿ ಮನೆಯಲ್ಲಿ ಇಂದಿಗೂ AC ಹಾಕಿಸಿಲ್ಲವಂತೆ! ಏಕೆ ಗೊತ್ತಾ?

advertisement

ಪ್ರತಿಯೊಬ್ಬರಿಗೂ ಜೀವನದಲ್ಲಿ ಸಂತೃಪ್ತಿಯಿಂದ ಇರಬೇಕು ಎನ್ನುವ ಆಸೆ ಇರುತ್ತದೆ. ಹಾಗೆ ಇರಬೇಕು ಎಂದರೆ ಸಾಕಷ್ಟು ಹಣ ಮನೆ ಆಸ್ತಿ ಎಲ್ಲವೂ ಹೊಂದಿರಬೇಕು. ಜೀವನದಲ್ಲಿ ಅಂಬಾನಿ ತರ ಆಸ್ತಿ ಮಾಡಬೇಕು ಎಂಬುದು ಬಹುತೇಕರ ಕನಸ್ಸು ಆದರೆ ಅಂಬಾನಿ (Mukesh Ambani) ಅವರು ಎಷ್ಟೇ ಶ್ರೀಮಂತರಾಗಿದ್ದರೂ ಕೂಡ ಸಾಧ್ಯವಿದ್ದಷ್ಟು ಸಮಾಜಕ್ಕೆ ಸೇವೆ ನೀಡಿ ಅದರ ಜೊತೆಗೆ ಸರಳ ಜೀವನದಲ್ಲೂ ಕೂಡ ಬದುಕಿದ್ದಾರೆ. ಮದುವೆ ಇತರ ಕಾರ್ಯಕ್ರಮದಲ್ಲಿ ಇವರ ಐಷರಾಮಿ ಜೀವನ ಶೈಲಿ ನಮಗೆಲ್ಲ ಚಿರ ಪರಿಚಿತ ಎನ್ಮಬಹುದು. ಅದೇ ರೀತಿ ಅಂಬಾನಿ ಅವರ ಮನೆ ಅಷ್ಟೆಲ್ಲ ಐಷಾರಾಮಿ ಯಾಗಿದ್ದರು ಅಲ್ಲಿ ಎಸಿ ಅಳವಡಿಕೆ ಯಾಕೆ ಮಾಡಿಲ್ಲ ಎಂಬುದೇ ಎಲ್ಲರಿಗೂ ಕುತೂಹಲ ಮೂಡುತ್ತಿದೆ ಎನ್ನಬಹುದು.

WhatsApp Join Now
Telegram Join Now

ಇತ್ತೀಚಿನ ದಿನದಲ್ಲಿ ಸಾಮಾನ್ಯ ವರ್ಗದ ಮನೆಯಲ್ಲಿಯೂ AC, Cooler ಎಂದೆಲ್ಲ ಇರುವುದನ್ನು ನಾವು ಕಾಣಬಹುದು. ಕೆಲವರಿಗಂತೂ ಕಚೇರಿ ಕೆಲಸ ಮಾಡುವಲ್ಲಿ ಮನೆಯಲ್ಲಿ ಎಲ್ಲ ಕಡೆ ಎಸಿ ಬೇಕೆ ಬೇಕು. ಆದರೆ ಸಾವಿರಾರು ಕೋಟಿಯ ವ್ಯವಹಾರಗಳ ಹೊಣೆ ನಿಭಾಯಿಸುವ ಅಂಬಾನಿ ಕುಟುಂಬದ ಮುಂಬೈನ ಐಷಾರಾಮಿ ಮನೆಗೆ ಇನ್ನು ಎಸಿ ಯಾಕೆ ಬಂದಿಲ್ಲ ಎಂಬ ಬಗ್ಗೆ ನಾವಿಂದು ನಿಮಗೆ ತಿಳಿಸಲಿದ್ದು ಈ ಮಾಹಿತಿ ಪೂರ್ತಿ ಓದಿ.

ಅರಮನೆ:

 

Image Source: India Today

 

advertisement

ಮುಖೇಶ್ ಅಂಬಾನಿ (Mukesh Ambani) ಅವರ ಮನೆಯನ್ನು ಮುಂಬೈನಲ್ಲಿ ನಿರ್ಮಿಸಲಾಗಿದ್ದು ಇದಕ್ಕೆ ಆಂಟಿಲಿಯಾ (Antilia) ಎಂದು ಹೆಸರಿಸಿದ್ದಾರೆ. ಈ ಆಂಟಿಲಿಯಾ 2012ರಂದು ದಕ್ಷಿಣ ಮುಂಬೈ ನ ಮಧ್ಯ ಭಾಗದಲ್ಲಿ ನಿರ್ಮಾಣ ಮಾಡಲಾಗಿದ್ದು 173 ಮೀಟರ್ ಎತ್ತರ ಹೊಂದಿದ್ದ ಈ ಒಂದು ಬಂಗಲೆ ಅರಮನೆ ಎಂದೆ ಹೇಳಬಹುದು. ಜಿಮ್, ಮಿನಿ ಥಿಯೇಟರ್ ಸೇರಿದಂತೆ ಅತ್ಯಾಧುನಿಕ ವೈಶಿಷ್ಟ್ಯ ಕೂಡ ಇರಲಿದ್ದು ಬರೋಬ್ಬರಿ 27 ಮಹಡಿ ಹೊಂದಿದೆ. ಸಲ್ಯೂನ್ , ಪಾರ್ಕಿಂಗ್, ಈಜುಕೊಳ, ಮಿನಿ ಹೊಟೇಲ್, ಐಸ್ ಕ್ರೀಂ ಪಾರ್ಲರ್ ಸ್ನೋ ಫ್ಲೋ ಇದೆ, ಮೇಕಪ್ ರೂಂ ಹೀಗೆ ಇನ್ನು ಅಧಿಕ ವೈಶಿಷ್ಟ್ಯ ಈ ಮನೆಯಲ್ಲಿ ಇದ್ದು ಅಂದಾಜು ಮನೆ ನಿರ್ಮಾಣ ಮಾಡಲು ಎರಡು ವರ್ಷ ಬೇಕಾಗಿದ್ದು ಎಂಟು ಸಾವಿರ ಕೋಟಿ ಬೆಲೆಬಾಳುವ ಮನೆ ಇದು ಎನ್ನಬಹುದು.

ಈ ಮನೆಯ ಕೊನೆಯ ನಾಲ್ಕು ಮಹಡಿಯಲ್ಲಿ ಮುಖೇಶ್ ಅಂಬಾನಿ (Mukesh Ambani) ಕುಟುಂಬದವರು ವಾಸ್ತವ್ಯ ಕಂಡು ಕೊಂಡಿದ್ದಾರೆ. ಈ ಮನೆಯನ್ನು ನೋಡಿಕೊಳ್ಳಲು ನೂರಾರು ಸಿಬಂದಿ ಇದ್ದು 9 ಲಿಫ್ಟ್ ವ್ಯವಸ್ಥೆ ಕೂಡ ಇದೆ. 600-1000 ದ ವರೆಗೂ ಬೇರೆ ಬೇರೆ ಕೆಲಸಕ್ಕೆ ಪ್ರತ್ಯೇಕ ಸಿಬಂದಿ ಇದ್ದಾರೆ. ಈ ಒಂದು ಮನೆಯನ್ನು ಐಷಾರಾಮಿಯಾಗಿ W ಆಕೃತಿಯಲ್ಲಿ ನಿರ್ಮಾಣ ಮಾಡಿರುವುದು ವಿಶೇಷ ಎನ್ನಬಹುದು.

AC ಯಾಕೆ ಇಲ್ಲ?

ಇಷ್ಟೆಲ್ಲ ಐಶಾರಾಮಿ ಆಗಿ ಇದ್ದರೂ ಕೂಡ ಈ ಒಂದು ಬಂಗಲೆಯಲ್ಲಿ AC ಮಾತ್ರ ಇಲ್ಲ ಎನ್ನುವುದೇ ಎಲ್ಲರಿಗೂ ಅಚ್ಚರಿ ಎನ್ನಬಹುದು. ಅದಕ್ಕೂ ನಿಖರ ಕಾರಣ ಇದೆ ಎನ್ನಬಹುದು. ಈ ಮನೆಯನ್ನು ಚಿಕಾಗೊ ಮೂಲದ ಪರ್ಕಿನ್ಸ್ ಹಾಗೂ ವಿಲ್ ಈ ಮನೆಯನ್ನು ವಿನ್ಯಾಸ ಗೊಳಿಸಿದ್ದಾರೆ. ಇದರ ಲೈಟ್ ಮತ್ತು ಹೋಲ್ಡಿಂಗ್ಸ್ ಅನ್ನು ಆಸ್ಟ್ರೇಲಿಯಾ ನಿರ್ಮಾಣ ಸಂಸ್ಥೆ ಮಾಡಿದೆ. ಈ ಮನೆಯನ್ನು ಭೂಕಂಪದಲ್ಲೂ 8.0 ನಷ್ಟು ತಿವೃತೆ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಮನೆಯ ಗೋಡೆಗಳು ಮನೆಯ ತಾಪಮಾನ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿರುವಂತೆ ನಿರ್ಮಿಸಲಾಗಿದೆ. ಹಾಗಾಗಿ ಮನೆ ತಾಪಮಾನ ನಮಗೆ ಬೇಕಾದಂತೆ ಹೊಂದಿಸಿಕೊಳ್ಳಬಹುದು. ಹಾಗಾಗಿ ಈ ಮನೆಗೆ ಎಸಿ ಅಗತ್ಯವೇ ಇಲ್ಲ ಎನ್ನಬಹುದು‌

advertisement

Leave A Reply

Your email address will not be published.