Karnataka Times
Trending Stories, Viral News, Gossips & Everything in Kannada

Property: ಅದ್ದೂರಿಯಾಗಿ ಸಾಲ ಮಾಡಿ ಮದುವೆ ಮಾಡಿ ಕೊಟ್ಟ ಹೆಣ್ಣಿಗೆ ಆಸ್ತಿ ಪಾಲು ನೀಡಬೇಕಾ? ಕೋರ್ಟ್ ಹೊಸ ಸೂಚನೆ

advertisement

Property Rights of Women in India: ನಮ್ಮ ಭಾರತ ದೇಶ ಸಾಕಷ್ಟು ವರ್ಷಗಳ ಹಿಂದೆ ಹೋದರೆ ಪ್ರತಿಯೊಂದು ಕಡೆಗಳಲ್ಲಿ ಕೂಡ ಅವಿಭಾಜ್ಯ ಕುಟುಂಬಗಳನ್ನು ಹೊಂದಿರುವಂತಹ ಜನಸಂಖ್ಯೆಯನ್ನು ಹೆಚ್ಚಾಗಿ ಹೊಂದಿತ್ತು. ಈ ರೀತಿ ಸಂಸ್ಕೃತಿ ಇರುವವರೆಗೂ ಕೂಡ ಬಹುತೇಕ ಎಲ್ಲಾ ಮನೆಗಳಲ್ಲಿ ಕೂಡ ಆಸ್ತಿಯ ಪಾಲು ಅನ್ನೋದು ಅಷ್ಟೊಂದು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ ಯಾಕೆಂದರೆ ಎಲ್ಲರೂ ಜೊತೆಯಾಗಿ ಇರುತ್ತಿದ್ದರು ಹಾಗೂ ಅದು ವಂಶ ಪಾರಂಪರಿಕವಾಗಿ ಅದೇ ರೀತಿಯಲ್ಲಿ ನಡೆದುಕೊಂಡು ಬರುತ್ತಿತ್ತು.

WhatsApp Join Now
Telegram Join Now

ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಹಳ್ಳಿಯಿಂದ ಪಟ್ಟಣಕ್ಕೆ ಶಿಫ್ಟ್ ಆಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ ಹಾಗೂ ಪ್ರತಿಯೊಬ್ಬರಿಗೂ ಕೂಡ ತಮ್ಮ ಜೀವನವನ್ನು ನೋಡಿಕೊಳ್ಳುವುದಕ್ಕೆ ತಮಗೆ ಬೇಕಾಗಿರುವಂತಹ ಆಸ್ತಿಯಲ್ಲಿ ಪಾಲನ್ನು ಪಡೆದುಕೊಂಡು ಅದನ್ನ ಮಾರಾಟ ಮಾಡಿಯೋ ಅಥವಾ ಅದರಿಂದ ಬರುವಂತಹ ಆದಾಯದಿಂದಲೂ ಜೀವನ ನಡೆಸುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು ಹೆಣ್ಣು ಮಕ್ಕಳ ಆಸ್ತಿಯ ಪಾಲಿನ ವಿಚಾರದ ಬಗ್ಗೆ.
Property Rights of Women in India

ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿದ್ಮೇಲು ಹೆಣ್ಣು ಮಕ್ಕಳಿಗೆ ಆಸ್ತಿ ಸಿಗುತ್ತಾ?

advertisement

ಮನೆಯಲ್ಲಿರುವಂತಹ ಒಬ್ಬಳೇ ಹೆಣ್ಣು ಮಗಳು ಎನ್ನುವುದಾಗಿ ನೀವು ಸಾಕಷ್ಟು ಕಡೆಗಳಲ್ಲಿ ನೋಡಿರಬಹುದು ಲಕ್ಷ ಲಕ್ಷ ಖರ್ಚು ಮಾಡಿ ಮದುವೆ ಮಾಡಿಕೊಡುತ್ತಾರೆ ಹಾಗೂ ಮದುವೆ ಮಾಡಿ ಕೊಟ್ಟ ಮೇಲೆ ಕೂಡ ಗಂಡಿನ ಕಡೆಯುವರಿಗೂ ಕೂಡ ಆ ಮನೆಗೆ ನಮ್ಮ ಮಗಳು ಹೋಗ್ತಿದ್ದಾಳೆ ಅಂತ ಸಾಕಷ್ಟು ಸವಲತ್ತುಗಳನ್ನು ಉಡುಗೊರೆಗಳನ್ನು ಹೆಣ್ಣಿನ ಕಡೆಯವರು ನೀಡುವುದನ್ನ ನೀವು ನೋಡಿರಬಹುದು. ಇದಾದ ನಂತರ ಕೂಡ ಆಕೆ ಮತ್ತೆ ಬಂದು ತಮ್ಮ ತವರು ಮನೆಯಲ್ಲಿ ಆಸ್ತಿಯಲ್ಲಿ ಪಾಲನ್ನು ಪಡೆದುಕೊಳ್ಳಬಹುದಾ ಎನ್ನುವುದರ ಬಗ್ಗೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ.

ಆರಂಭದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಕೇವಲ ಗಂಡು ಮಕ್ಕಳಿಗೆ ಮಾತ್ರ ಹಾಕಿತ್ತು ಆದರೆ ನಂತರದ ದಿನಗಳಲ್ಲಿ ಅದನ್ನ ಬದಲಾಯಿಸಿ ಹೆಣ್ಣುಮಕ್ಕಳಿಗೂ ಕೂಡ ಸಮಾನ ಹಕ್ಕು ಇದೆ ಅನ್ನೋದನ್ನ ನಿಯಮದಲ್ಲಿ ಜಾರಿಗೆ ತರಲಾಯಿತು. ಹಿಂದೂ ಸಕ್ಸೆಷನ್ ಆಕ್ಟ್ 1961 ರ ಪ್ರಕಾರ ತನ್ನ ತಾಯಿಯ ಆಸ್ತಿಯನ್ನು ಮದುವೆಯಾಗಿರುವಂತಹ ಹೆಣ್ಣು ಮಕ್ಕಳು ಹಾಗೂ ಪಿತ್ರಾರ್ಜಿತ ಆಸ್ತಿಯನ್ನು ಕೂಡ ಆ ಹೆಣ್ಣು ಮಗಳು ಪಡೆದುಕೊಳ್ಳುವುದಕ್ಕೆ ಅಧಿಕಾರ ಇರುತ್ತದೆ.
Property Rights of Women in India

ಅವಳಿಗೆ ಮದುವೆ ಮಾಡಿಕೊಟ್ಟ ಮಾತ್ರಕ್ಕೆ ಆಸ್ತಿಯಲ್ಲಿ ಪಾಲು ನೀಡಬಾರದು ಎನ್ನುವಂತಹ ನಿಯಮ ಯಾವುದೇ ರೀತಿಯ ಕಾನೂನು ನಿಯಮಗಳಲ್ಲಿ ಉಲ್ಲೇಖ ಮಾಡಿಲ್ಲ. ಕೇವಲ ತಂದೆ ತಾನು ಸ್ವಂತ ದುಡಿಮೆಯಿಂದ ದುಡಿದಿರುವಂತಹ ಆಸ್ತಿಯನ್ನು ಮಾತ್ರ ಯಾರಿಗೆ ಕೊಡಬೇಕು ಎನ್ನುವುದನ್ನ ನಿರ್ಧರಿಸುವಂತಹ ಸ್ವಾತಂತ್ರ್ಯವನ್ನು ಹೊಂದಿರುತ್ತಾನೆ. ಹೊರತಾಗಿ ಬೇರೆ ಪಿತ್ರಾರ್ಜಿತ ಆಸ್ತಿ ಗಂಡು ಮಕ್ಕಳ ರೀತಿಯಲ್ಲಿ ಹೆಣ್ಣು ಮಕ್ಕಳಿಗೂ ಕೂಡ ವಂಶ ಪಾರಂಪರಿಕವಾಗಿ ಕಾನೂನಾತ್ಮಕವಾಗಿ ದೊರಕಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ.

advertisement

Leave A Reply

Your email address will not be published.