Karnataka Times
Trending Stories, Viral News, Gossips & Everything in Kannada

RBI: ಕರ್ನಾಟಕ ಸೇರಿದಂತೆ ದೇಶದ ಈ 3 ಬ್ಯಾಂಕ್ ಗಳಲ್ಲಿ ಹಣ ಇಟ್ಟವರಿಗೆ RBI ಹೊಸ ಸೂಚನೆ

advertisement

ಇಂದು ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.‌ ಬ್ಯಾಂಕುಗಳು ಕೂಡ ಗ್ರಾಹಕರೊಂದಿಗೆ ನಿಯಮ ಬದ್ದವಾಗಿ ನಡೆಯಬೇಕು,ಇದಕ್ಕಾಗಿ ಅರ್ ಬಿ ಐ ಸದಾ ಮುಂದು ಎಂದು ಹೇಳಬಹುದು.ಗ್ರಾಹಕರ ಹಿತ ದೃಷ್ಟಿಯಿಂದ, ಯಾವುದೇ ತೊಂದರೆ ಯಾಗಬಾರದು ಎನ್ನುವ ನಿಟ್ಟಿನಲ್ಲಿ RBI ಹೊಸ ಹೊಸ ನಿಯಮ ಗಳನ್ನು ಜಾರಿಗೆ ತರ್ತಾ ಇದೆ.‌ಅದರಲ್ಲೂ ಬ್ಯಾಂಕುಗಳು ನಿಯಮ ಪಾಲಿಸದೇ ಇದ್ದಲ್ಲಿ ಅರ್ ಬಿ ಐ ಕೂಡ ದಂಡ ವಿಧಿಸಲಿದೆ. ಇದೀಗ RBI ಕರ್ನಾಟಕದ ಬ್ಯಾಂಕ್‌ ಸೇರಿ ದೇಶದ 3 ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳಿಗೆ ದಂಡ ಕೂಡ ವಿಧಿಸಿದೆ.

WhatsApp Join Now
Telegram Join Now

ಇಂದು ಹೆಚ್ಚಿನ ಬ್ಯಾಂಕುಗಳು ನಿಯಮ ಉಲ್ಲಂಘನೆ ಮಾಡುತ್ತಿದೆ.‌ಈಗಾಗಲೇ ಹೋದ ಬಾರಿ ಎಟಿಎಮ್ ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ಅರ್ ಬಿ ಐ ದಂಡ ವಿಧಿಸುವ ಮೂಲಕ ಸೇವೆ ಸ್ಥಗಿತ ಕೂಡ ಮಾಡಿತ್ತು‌‌.ಹಾಗೆಯೇ ಈ ವರ್ಷದ ಪೆಬ್ರವರಿಯಲ್ಲಿ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಕೆನರಾ ಬ್ಯಾಂಕ್ (Canara Bank) ಹಾಗೂ ಸಿಟಿ ಯೂನಿಯನ್ ಬ್ಯಾಂಕಿಗೆ (City Union Bank) ಭಾರತೀಯ ರಿಸರ್ವ್ ಬ್ಯಾಂಕ್ ಸುಮಾರು 3 ಕೋಟಿ ರೂ. ಮೊತ್ತದ ದಂಡ ವಿಧಿಸಿತ್ತು. ಇದೀಗ ವಿವಿಧ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಕುರಿತಾಗಿ ಮೂರು ಸಹಕಾರಿ ಬ್ಯಾಂಕ್‌ಗಳಿಗೆ ವಿತ್ತೀಯ ದಂಡವನ್ನು ವಿಧಿಸಿದೆ.‌ಹಾಗಿದ್ದಲ್ಲಿ ಯಾವೆಲ್ಲ ಬ್ಯಾಂಕ್ ಯಾಕಾಗಿ ದಂಡ ವಿಧಿಸಿದೆ ಎನ್ನುವ ಮಾಹಿತಿ ಈ ಲೇಖನದಲ್ಲಿ ಇರಲಿದೆ.

ಹೌದು RBI ಈ ಬ್ಯಾಂಕುಗಳಿಗೆ ದಂಡ ವಿಧಿಸಿದ್ದು ಕರ್ನಾಟಕದ ರಾಮನಗರಂ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (Ramanagara Urban Co-operative Bank Ltd), ತಮಿಳುನಾಡಿನ ಕಾಂಚೀಪುರಂನ ಕಾಂಚೀಪುರಂ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (Kanchipuram Central Cooperative Bank Ltd), ಹಾಗೂ ಮಹಾರಾಷ್ಟ್ರದ ಕೊಲ್ಲಾಪುರದ ನಂದನಿ ಸಹಕಾರಿ ಬ್ಯಾಂಕ್ ಲಿಮಿಟೆಡ್‌ಗೆ (Nandani Sahakari Bank Ltd) ನಿಯಮ ಉಲ್ಲಂಘನೆ ಮಾಡಿದ್ದಕ್ಕಾಗಿ ದಂಡ ವಿಧಿಸಿದೆ.

 

Image Source: Sakshi.com

 

advertisement

ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕ್‌ಗಳು ಇದರ ಮಾನದಂಡಗಳು ಮತ್ತು‌ ನಿರ್ಬಂಧಗಳ ವಿಚಾರವಾಗಿ ಆರ್‌ಬಿಐ ನೀಡಿದ್ದ ನಿರ್ದೇಶನಗಳನ್ನು ಪಾಲಿಸದೇ ಇದ್ದಲ್ಲಿ ಈ ಕಾರಣಕ್ಕಾಹಿ ರಾಮನಗರ ಬ್ಯಾಂಕ್‌ಗೆ 75,000 ರೂ. ದಂಡವನ್ನು RBI ಹಾಕಿದೆ.

 

Image Source: Nandani Sahakari Bank Ltd

 

ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ಹೊರಡಿಸಿದ ವರ್ಗೀಕರಣ, ವರದಿ ಮತ್ತು ಮೇಲ್ವಿಚಾರಣೆ, ನಿಯಮ ನಿರ್ದೇಶನಗಳನ್ನು ಪಾಲಿಕೆ ಮಾಡಿಲ್ಲ ಎನ್ನುವ ನಿಟ್ಟಿನಲ್ಲಿ ಆರ್‌ಬಿಐ ಕಾಂಚೀಪುರಂ ಬ್ಯಾಂಕ್‌ಗೆ 50,000 ರೂ. ದಂಡವನ್ನು ಕೂಡ ವಿಧಿಸಿದೆ.

ನಂದಿನಿ ಸಹಕಾರಿ ಬ್ಯಾಂಕಿನ ಚಿನ್ನದ ಸಾಲ, ಬುಲೆಟ್ ಮರುಪಾವತಿಗೆ ಸಂಬಂಧಿಸಿದ ವಿಚಾರ ಹಾಗೂ ಮುಂಗಡಗಳ ನಿರ್ವಹಣೆ ಕುರಿತಾಗಿ RBI ನೀಡಿದ್ದ ನಿರ್ದೇಶನಗಳನ್ನು ಪಾಲಿಕೆ ಮಾಡಿಲ್ಲ ಅನ್ನುವ ಕಾರಣಕ್ಕಾಗಿ 2 ಲಕ್ಷ ರೂ. ದಂಡವನ್ನು ಕೂಡ ಹಾಕಿದೆ.

advertisement

Leave A Reply

Your email address will not be published.