Karnataka Times
Trending Stories, Viral News, Gossips & Everything in Kannada

KSRTC: ರಾಜ್ಯಾದ್ಯಂತ KSRTC ಬಸ್ ಗಳಿಗೆ ಹೊಸ ರೂಲ್ಸ್! ಎಲ್ಲರಿಗೂ ಅನ್ವಯ

advertisement

ಇತ್ತೀಚಿಗಷ್ಟೇ ಕೆಎಸ್ಆರ್ಟಿಸಿ (KSRTC) ನಿಗಮದಿಂದ ದೂರ ಸಂಚಾರ ಮಾಡುವಂತಹ ಬಸ್ಸುಗಳಿಗೆ ಊಟ ತಿಂಡಿಯ ಸಮಯ ಹಾಗೂ ಲಘು ವಿರಾಮದ ಸಮಯ ಸೇರಿದಂತೆ ಸಾಕಷ್ಟು ಸಮಯಾವಳಿಗಳ ನಿಯಮವನ್ನು ಜಾರಿಗೊಳಿಸಲಾಗಿದೆ. ಈ ವಿಚಾರದ ಬಗ್ಗೆ ಸಂಸ್ಥೆಯ ನಿರ್ದೇಶಕರು ದೂರ ಸಂಚಾರದ ಸಂದರ್ಭದಲ್ಲಿ ಪ್ರಯಾಣಿಕರಿಗೆ ಲಘು ವಿರಾಮ ಸೇರಿದಂತೆ ಬೇರೆ ಬೇರೆ ರೀತಿಯ ಅವಕಾಶಗಳನ್ನು ಮಾಡಿ ಕೊಡುವ ಬಗ್ಗೆ ಮಾತನಾಡಿದ್ದಾರೆ.

WhatsApp Join Now
Telegram Join Now

ಪ್ರಯಾಣ ಆರಂಭವಾದ ಎರಡು ಗಂಟೆಯ ನಂತರ ಅಥವಾ 80 ರಿಂದ 100 ಕಿಲೋಮೀಟರ್ ಆದ ನಂತರ ಪ್ರಯಾಣಿಕರಿಗೆ ಆಯಾಸ ಆಗಿದ್ರೆ ನೈಸರ್ಗಿಕ ಕರೆ ಗಾಗಿ 15 ನಿಮಿಷಗಳ ಸಮಯಾವಕಾಶಕ್ಕಾಗಿ ಬಸ್ಸನ್ನು ನಿಲ್ಲಿಸಲಾಗುತ್ತದೆ. ಈ ಸಂದರ್ಭದಲ್ಲಿ ಲಘು ಫಲಹಾರ ಮಾಡುವುದಕ್ಕಾಗಿ ಸರಿಯಾದ ಶೌಚಾಲಯ ವ್ಯವಸ್ಥೆ ಇರುವಂತ ಹೋಟೆಲ್ ಮುಂಭಾಗದಲ್ಲಿ ನಿಲ್ಲಿಸಲಾಗುತ್ತದೆ ಎಂಬುದನ್ನು ಕೂಡ ಸ್ಪಷ್ಟಪಡಿಸಲಾಗಿದೆ.

 

Image Source: Mangalore Today

 

ಇನ್ನು ಈ ರೀತಿಯ ಉತ್ತಮ ಶೌಚಾಲಯ ಹಾಗೂ ಒಳ್ಳೆಯ ಕ್ವಾಲಿಟಿ ಹೊಂದಿರುವಂತಹ ಆಹಾರವನ್ನು ಹೊಂದಿರುವ ಫಲಹಾರ ಮಂದಿರವನ್ನು ಆಯ್ಕೆ ಮಾಡುವ ವಿಚಾರದಲ್ಲಿ ಕೂಡ ಕೆಎಸ್ಆರ್ಟಿಸಿ (KSRTC) ನಿಗಮ ಸಾಕಷ್ಟು ಆಯ್ಕೆಗಳನ್ನ ಪರಿಗಣನೆಗೆ ತೆಗೆದುಕೊಂಡಿದೆ.

ಇನ್ನು ಇಂತಹ ಫಲಹಾರ ಮಂದಿರವನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಅವುಗಳು ಎಡ ಭಾಗಕ್ಕೆ ಇರಬೇಕು ಹಾಗೂ ವಾಹನದ ಪಾರ್ಕಿಂಗ್ ವ್ಯವಸ್ಥೆ ವಿಶಾಲವಾಗಿರಬೇಕು ಎನ್ನುವ ನಿಯಮಗಳನ್ನು ಕೂಡ ಪರೀಕ್ಷಿಸಲಾಗುತ್ತಿದೆ. ವಿಭಾಗಿಯ ನಿಯಂತ್ರಣ ಅಧಿಕಾರಿಗಳು ಈ ಆಯ್ಕೆ ಮಾಡುವಂತಹ ಹೋಟೆಲ್ಗಳಲ್ಲಿ ಇರುವಂತಹ ಬೆಲೆಯ ಬಗ್ಗೆ ಕೂಡ ಪರೀಕ್ಷೆ ನಡೆಸಿ ಅವುಗಳು ಒಪ್ಪಿಗೆ ಆದಲ್ಲಿ ಮಾತ್ರ ಆ ಹೋಟೆಲ್ಗಳಲ್ಲಿ ನಿಲ್ಲಿಸುವುದಕ್ಕೆ ಕೆಎಸ್ಆರ್ಟಿಸಿ ಬಸ್ಸುಗಳಿಗೆ ಅನುಮತಿ ಸಿಗುತ್ತದೆ.

 

advertisement

Image Source: UoD System

 

ಒಟ್ಟಾರೆಯಾಗಿ ಪ್ರಯಾಣಿಕರಿಗೆ ಸರ್ವ ರೀತಿಯಲ್ಲಿ ಕೂಡ ಉತ್ತಮ ಸೌಕರ್ಯಗಳು ದೂರ ಪ್ರಯಾಣದ ಸಂದರ್ಭದಲ್ಲಿ ಸಿಗಬೇಕು ಎನ್ನುವ ಕಾರಣಕ್ಕಾಗಿ ಕೆಎಸ್ಆರ್ಟಿಸಿ ಈ ಹೊಸ ನಿಯಮಗಳಲ್ಲಿ (KSRTC New Rules) ಈ ಎಲ್ಲಾ ವಿಚಾರಗಳನ್ನು ಪರೀಕ್ಷಿಸಲಿದೆ.

ಇನ್ನು ಈ ಫಲಹಾರ ಮಂದಿರಗಳು ನಿಗಮದಿಂದ ಮಾನ್ಯತೆ ಪಡೆದಿರುವಂತಹ ಪಾಲಕಗಳನ್ನು ಹೊಂದಿರಬೇಕು ಅನ್ನೋದನ್ನ ಕೂಡ ನೀವು ಇಲ್ಲಿ ತಿಳಿದುಕೊಳ್ಳಬೇಕಾಗುತ್ತದೆ.

ಈ ಮೂಲಭೂತ ಸೌಕರ್ಯಗಳು ಇರಲೇಬೇಕು:

  • ಫಲಹಾರ ಮಂದಿರಗಳು ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿರುವಂತಹ ಸ್ವಚ್ಚವಾಗಿರುವ ಶೌಚಾಲಯವನ್ನು ಹೊಂದಿರಬೇಕಾಗಿರುತ್ತದೆ.
  • ಇಲ್ಲಿ ಶೌಚಾಲಯಕ್ಕೆ ಯಾವುದೇ ರೀತಿಯ ಹಣವನ್ನು ವಸೂಲು ಮಾಡುವ ಹಾಗಿಲ್ಲ ಹಾಗೂ ಆ ಫಲಹಾರ ಮಂದಿರದಲ್ಲಿ ಕನಿಷ್ಠಪಕ್ಷ ನೂರು ಜನರು ಕುಳಿತುಕೊಳ್ಳುವಂತಹ ಆಸನದ ವ್ಯವಸ್ಥೆ ಇರಬೇಕು.
  • ಕಡಿಮೆ ಸಮಯದಲ್ಲಿ ಊಟೋಪಚಾರಗಳನ್ನು ಉತ್ತಮ ಕ್ವಾಲಿಟಿಯಲ್ಲಿ ಗ್ರಾಹಕರಿಗೆ ನೀಡಬೇಕು. ಇನ್ನು ಫಲಹಾರ ಬಂಧನಗಳಲ್ಲಿ ಭದ್ರತಾ ಸಿಬ್ಬಂದಿಗಳು ಕೂಡ ಇರಬೇಕಾಗಿರುವುದು ಅಗತ್ಯವಾಗಿರುತ್ತದೆ ಎನ್ನುವಂತಹ ನಿಯಮಗಳನ್ನು ಹೊಸದಾಗಿ ಹೇಳಲಾಗಿದೆ.

advertisement

Leave A Reply

Your email address will not be published.