Karnataka Times
Trending Stories, Viral News, Gossips & Everything in Kannada

RBI: 1000 ರೂಪಾಯಿ ನೋಟು ಮರುಚಲಾವಣೆ ಬರುತ್ತಾ? RBI ತಿಳಿಸಿದ್ದೇನು?

advertisement

ಭಾರತದಲ್ಲಿ ಹಣಕಾಸಿನ ವ್ಯವಸ್ಥೆ ಸುಧಾರಣೆ ಮಾಡಿ ಆಗಾಗ ಬದಲಾವಣೆ ಜಾರಿಗೆ ತರಲಾಗುತ್ತಿದೆ. ಈ ಹಿಂದೆ ಚಾಲ್ತಿಯಲ್ಲಿ ಇದ್ದ ನೋಟು ಹಾಗೂ ನಾಣ್ಯಗಳು ಬಹುತೇಕ ಈಗ ಚಾಲ್ತಿಯಲ್ಲಿ ಇಲ್ಲ ಎಂದು ಹೇಳಬಹುದು. ನೋಟು ಮತ್ತು ನಾಣ್ಯ ಗಳು ಆಗಾಗ ಆವಿಷ್ಕಾರ ಆಗುತ್ತಲಿದ್ದು ಜಾಗತಿಕ ಬದಲಾವಣೆ ದೇಶಿಯ ಕರೆನ್ಸಿ ಮೌಲ್ಯಕ್ಕೆ ತಕ್ಕಂತೆ ಸುಧಾರಣೆ ಆಗುವುದು ಪ್ರತಿಯೊಂದು ದೇಶಕ್ಕೂ ಕೂಡ ಅವಶ್ಯಕವಾಗಿದೆ. ಈ ನಿಟ್ಟಿನಲ್ಲಿ 1000 ಮುಖ ಬೆಲೆಯ ನೋಟಿನ ಮರು ಬಿಡುಗಡೆ ಬಗ್ಗೆ ಮಹತ್ವದ ಮಾಹಿತಿಯನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

WhatsApp Join Now
Telegram Join Now

ನೋಟು ರದ್ಧತಿ:

ಇತ್ತೀಚಿನ ಕೆಲ ವರ್ಷದಲ್ಲೊ ನೋಟು ರದ್ಧತಿ, ಅಯಾನೀಕರಣ ಹಾಗೂ ಹೊಸ ನೋಟು ಬಿಡುಗಡೆ ಅಧಿಕವಾಗುತ್ತಿದ್ದು ಕೆಲವೊಂದು ಅವ್ಯವಸ್ಥೆ ಸರಿಪಡಿಸಲು ಹೀಗೆ ಆಗಾಗ ಮಾಡುತ್ತಲಿರುತ್ತಾರೆ. 1000 ಮುಖ ಬೆಲೆಯ ನೋಟನ್ನು ರದ್ದು ಮಾಡಲಾಗಿದ್ದು ಅದನ್ನು ಈಗ ಮತ್ತೆ ಚಾಲ್ತಿಗೆ ತರಲಾಗುತ್ತದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ನಿಜಕ್ಕೂ ನೋಟು ಮತ್ತೆ ಪುನಃ ಜಾರಿಯಾಗುತ್ತಾ ಹೊಸ ನೋಟ್ ಎಂದು 1000 ಮುಖ ಬೆಲೆಯ ನೋಟ್ ರಿಲೀಸ್ ಆದರೆ 500 ರೂ ಇಲ್ಲ ವಾಗುತ್ತಾ ಎಂಬ ಅನೇಕ ವಿಚಾರದ ಬಗ್ಗೆ ಇಲ್ಲಿ ಪೂರ್ತಿ ಮಾಹಿತಿ ಇದೆ.

ಎರಡು ಸಾವಿರ ಮುಖ ಬೆಲೆಯ ನೋಟು ಏನಾಗಿದೆ?

ಕಳೆದ ವರ್ಷದಲ್ಲಿ ಎರಡು ಸಾವಿರ ಮುಖ ಬೆಲೆಯ ನೋಟನ್ನು ಹಿಂದಿರುಗಿಸುವಂತೆ RBI ತಿಳಿಸಿದ್ದು ಈಗಾಗಲೇ ಬಹುತೇಕ ಎರಡು ಸಾವಿರ ಮುಖ ಬೆಲೆಯ ನೋಟು ವಾಪಾಸ್ಸು ಆಗಿದೆ ಎಂದು ಹೇಳಬಹುದು. ಹಾಗೆ ಈಗ ಅಧಿಕ ಮೌಲ್ಯದ ಹಣ ರಂದರೆ ಅದು 500 ರೂಪಾಯಿ ಆಗಿದ್ದು ಬಹುತೇಕ ಎಲ್ಲ ವ್ಯವಹಾರಕ್ಕೂ 500 ರೂಪಾಯಿ ನೋಟಿನ ಸಂಗ್ರಹ ಇರುವುದನ್ನು ನಾವು ಕಾಣಬಹುದು.ಹಾಗಾಗಿ ಈಗ ಮತ್ತೆ 1000 ಮುಖ ಬೆಲೆ ನೋಟು ಚಾಲ್ತಿಗೆ ಬರುತ್ತೆ ಎಂದು ಹೇಳಲಾಗುತ್ತಿದೆ.

advertisement

ವೈರಲ್ ಆಯ್ತು ನೋಟಿನ ಚಿತ್ರ:

 

Image Source: The Economic Times

ಇತ್ತೀಚೆಗಷ್ಟೇ ಹೊಸ ಮುಖಬೆಲೆಯ ನೋಟು ಎಂದು 1000 ನೋಟಿನ ಒಂದು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಹಸಿರುಬಣ್ಣದಲ್ಲಿ ನೋಟು ಕಂಗೊಳಿಸಿದ್ದು ಈ ಹಿಂದೆ ಒಂದು ಸಾವಿರ ನೋಟು ಹೇಗೆ ಇದೆಯೋ ಅದೆ ರೀತಿ ಈ ನೋಟು ಕೂಡ ಇದೆ. ಎರಡು ಸಾವಿರ ಮುಖ ಬೆಲೆಯ ನೋಟು ಸಂಪೂರ್ಣ ವಾಪಾಸ್ಸಾಗುತ್ತಿರುವ ಕಾರಣ ಸದ್ಯದಲ್ಲೇ RBI ಈ ಹೊಸ ಒಂದು ಸಾವಿರ ಮಖ ಬೆಲೆ ನೋಟು ಜಾರಿಗೆ ತರುತ್ತದೆ ಎಂದು ಹೇಳಲಾಗುತ್ತದೆ.

RBI ಸ್ಪಷ್ಟನೆ:

ಈ ಬಗ್ಗೆ ಎಲ್ಲ ಕಡೆ ಮಾಹಿತಿ ವೈರಲ್ ಆಗುತ್ತಿದ್ದಂತೆ RBI ಗೆಪ್ರಶ್ನೆಗಳ ಸುರಿಮಳೆ ಎದುರಾಗಿದೆ ಎನ್ನಬಹುದು. ಹಾಗಾಗಿ RBI ಈ ಮಾಹಿತಿ ನಿಜ ಅಥವಾ ಸುಳ್ಳು ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದೆ. ಈಗಾಗಲೇ 2000 ಮುಖ ಬೆಲೆಯ ನೋಟು ಹಿಂಪಡೆದಿರುವುದು ಸತ್ಯ ಆದರೆ 1000 ಸಾವಿರ ಮುಖ ಬೆಲೆಯ ನೋಟು ಜಾರಿಗೆ ತರುವ ಬಗ್ಗೆ ಇದುವರೆಗೆ ಯಾವುದೆ ಯೋಜನೆ ಹೊಂದಿಲ್ಲ ಎಂದು ಸ್ಪಷ್ಟೀಕರಣ ಕೂಡ ನೀಡಿದೆ.

advertisement

Leave A Reply

Your email address will not be published.