Karnataka Times
Trending Stories, Viral News, Gossips & Everything in Kannada

Govt Schemes: ಫಿಕ್ಸಿಡ್ ಡೆಪಾಸಿಟ್ ಕಿಂತ ಹೆಚ್ಚಿನ ರಿಟರ್ನ್ ನೀಡುತ್ತವೆ ಈ ಐದು ಸರಕಾರಿ ಯೋಜನೆಗಳು!

advertisement

ಸಾಮಾನ್ಯವಾಗಿ ಉಳಿತಾಯ ಅಥವಾ ಹೂಡಿಕೆ ವಿಚಾರಕ್ಕೆ ಬಂದರೆ ಪ್ರತಿಯೊಬ್ಬರು ಕೂಡ ದೀರ್ಘಕಾಲಿಕ ಹೂಡಿಕೆ ಆಗಿರುವಂತಹ ಫಿಕ್ಸೆಡ್ ಡೆಪಾಸಿಟ್ (Fixed Deposit) ನಲ್ಲಿ ಹೂಡಿಕೆ ಮಾಡುವಂತಹ ವಿಚಾರ ಮಾಡುತ್ತಾರೆ ಆದರೆ ಅದಕ್ಕಿಂತಲೂ ಹೆಚ್ಚಿನ ಲಾಭವನ್ನು ನೀಡಬಲ್ಲಂತಹ 5 ಸರ್ಕಾರಿ ಪೋಸ್ಟ್ ಆಫೀಸ್ ಯೋಜನೆಗಳ (5 Govt Post Office Schemes) ಬಗ್ಗೆ ನಾವು ನಿಮಗೆ ಇವತ್ತಿನ ಈ ಲೇಖನದ ಮೂಲಕ ಹೇಳುವುದಕ್ಕೆ ಹೊರಟಿದ್ದೇವೆ ಬನ್ನಿ.

WhatsApp Join Now
Telegram Join Now

ಲಾಭವನ್ನು ನೀಡುವಂತಹ 5 ಸರ್ಕಾರಿ ಸೇವಿಂಗ್ ಯೋಜನೆಗಳು:

Senior Citizen Savings Scheme:

 

Image Source: The Economic Times

 

60 ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ಮಾತ್ರ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದೆ ಹಾಗೂ ಇದರಲ್ಲಿ ಸಿಗುವಂತಹ ರಿಟರ್ನ್ 8.2% ವಾರ್ಷಿಕ ಬಡ್ಡಿದರ ಪಡೆದುಕೊಳ್ಳಬಹುದಾಗಿದೆ. ಸಾವಿರ ರೂಪಾಯಿಗಳ ಮಲ್ಟಿಪ್ಲೈ ನಲ್ಲಿ ಹಣವನ್ನು ಹೂಡಿಕೆ ಮಾಡಬಹುದಾಗಿದ್ದು, ಮ್ಯಾಕ್ಸಿಮಮ್ 30 ಲಕ್ಷ ರೂಪಾಯಿಗಳ ಹಣವನ್ನ ಹೂಡಿಕೆ ಮಾಡಬಹುದಾಗಿದೆ. ಇನ್ಕಮ್ ಟ್ಯಾಕ್ಸ್ ಆಕ್ಟ್ 80 ಸಿ ಪ್ರಕಾರ ಈ ಯೋಜನೆಯಲ್ಲಿ ನೀವು ಟ್ಯಾಕ್ಸ್ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

Kisan Vikas Patra Scheme:

 

Image Source: Bank of Baroda

 

ಕಿಸಾನ್ ವಿಕಾಸ್ ಪತ್ರ ಯೋಜನೆ (Kisan Vikas Patra Scheme) ಇದರಲ್ಲಿ ಯಾವುದೇ ರೀತಿಯ ಟ್ಯಾಕ್ಸ್ ರಿಯಾಯಿತಿ ಸಿಗುವುದಿಲ್ಲ ಆದರೆ ವಾರ್ಷಿಕವಾಗಿ ನೀವು ಈ ಯೋಜನೆಯಲ್ಲಿ 7.5% ಬಡ್ಡಿದರವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯಲ್ಲಿ ಒಂಬತ್ತು ವರ್ಷ 7 ತಿಂಗಳುಗಳ ಕಾಲ ಹಣವನ್ನು ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿರುವಂತಹ ಹಣ ಡಬಲ್ ಆಗುತ್ತದೆ.

advertisement

Post Office Monthly Income Scheme Scheme: 

 

Image Source: Business League

 

ಈ ಯೋಜನೆಯಲ್ಲಿ ನೀವು 1500 ರೂಪಾಯಿಗಳಿಂದ ಪ್ರಾರಂಭಿಸಿ 9 ಲಕ್ಷ ರೂಪಾಯಿಗಳ ವರೆಗೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ. ಜಾಯಿಂಟ್ ಅಕೌಂಟ್ ನಲ್ಲಿ ಈ ಲಿಮಿಟ್ 15ಲಕ್ಷ ರೂಪಾಯಿಗಳ ವರೆಗೆ ಇರುತ್ತದೆ. 7.4% ಬಡ್ಡಿದರವನ್ನು ಈ ಯೋಜನೆ ಮೇಲೆ ನೀವು ಪಡೆದುಕೊಳ್ಳಬಹುದಾಗಿದೆ ಹಾಗೂ ಈ ಆದಾಯವನ್ನು ಪ್ರತಿ ತಿಂಗಳು ನೀವು ನಿಮ್ಮ ಖಾತೆಗೆ ಕ್ರೆಡಿಟ್ ಮಾಡಿಕೊಳ್ಳಬಹುದಾಗಿದೆ. ಇನ್ನು ಯಾವುದೇ ಕಾರಣಕ್ಕೂ ನಿಮಗೆ ಯೋಜನೆಯಲ್ಲಿ ಟ್ಯಾಕ್ಸ್ ರಿಯಾಯಿತಿ ಸಿಗೋದಿಲ್ಲ.

National Savings Certificate Scheme:

 

Image Source: India TV News

 

ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಯೋಜನೆಯಲ್ಲಿ ವಾರ್ಷಿಕ 7.7% ಬಡ್ಡಿ ದರವನ್ನು ನಿಮಗೆ ನಿಗದಿಪಡಿಸಲಾಗುತ್ತದೆ. ಸಾವಿರ ರೂಪಾಯಿಗಳಿಂದ ನಿಮ್ಮ ಹೂಡಿಕೆಯನ್ನು ಪ್ರಾರಂಭ ಮಾಡಬಹುದಾಗಿದ್ದು ಮ್ಯಾಕ್ಸಿಮಮ್ ಯಾವುದೇ ಲಿಮಿಟ್ ಇರುವುದಿಲ್ಲ. ಈ ಯೋಜನೆಯಲ್ಲಿ ಎಷ್ಟು ಖಾತೆಯನ್ನು ಬೇಕಾದ್ರೂ ಕೂಡ ಓಪನ್ ಮಾಡಬಹುದಾಗಿದೆ ಹಾಗೂ ಟ್ಯಾಕ್ಸ್ ರಿಯಾಯಿತಿಯ ಲಾಭ ಕೂಡ ಸಿಗುತ್ತೆ.

Mahila Samman Certificate Scheme:

 

Image Source: Probus Insurance

 

ಮಹಿಳಾ ಸಮ್ಮಾನ್ ಸರ್ಟಿಫಿಕೇಟ್ ಯೋಜನೆಯನ್ನು ವಿಶೇಷವಾಗಿ ಮಹಿಳೆಯರಿಗೆ ಜಾರಿಗೆ ತಂದಿರುವಂತಹ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಇದರಲ್ಲಿ ಯಾವುದೇ ರೀತಿಯ ಟ್ಯಾಕ್ಸ್ ರಿಯಾಯಿತಿ ಇರೋದಿಲ್ಲ. 7.5% ಬಡ್ಡಿದರವನ್ನು ನೀವು ಈ ಯೋಜನೆಯ ಮೇಲಿನ ಹೂಡಿಕೆಗೆ ಪಡೆದುಕೊಳ್ಳಬಹುದಾಗಿದೆ. ಇಲ್ಲಿ ಮೂರು ತಿಂಗಳಿಗೊಮ್ಮೆ ಬಡ್ಡಿಯನ್ನು ನೀಡಲಾಗುತ್ತದೆ.

advertisement

Leave A Reply

Your email address will not be published.