Karnataka Times
Trending Stories, Viral News, Gossips & Everything in Kannada

OYO, JCB ಮತ್ತು ವೊಡಾಫೋನ್ ಇವುಗಳ ವಿಸ್ಕೃತ ರೂಪ ಏನು ಗೊತ್ತಾ?

advertisement

ಇತ್ತೀಚಿನ ದಿನಮಾನಗಳಲ್ಲಿ ಓಯೋ ಜೆಸಿಬಿ ವೊಡಾಫೋನ್ ಹಾಗೂ ಇನ್ನಿತರ ಪದಗಳನ್ನು ಹೆಚ್ಚಾಗಿ ಕಾಣುತ್ತಲೇ ಇರುತ್ತೇವೆ, ಹೀಗೆ ರಸ್ತೆಗಿಳಿದರೆ, ಅಲ್ಲಿ ಕನಿಷ್ಠ ಒಂದಾದರು ವೊಡಾಫೋನ್ ಸ್ಟೋರ್ (Vodafone Stores) ಅಥವಾ ಓಯೋ ಹೋಟೆಲ್ (OYO Hotels) ಇದ್ದೇ ಇರುತ್ತದೆ. ಇಷ್ಟರ ಮಟ್ಟಕ್ಕೆ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ವೇಗವಾಗಿ ಎಲ್ಲರ ಬಾಯಲ್ಲಿಯೂ ಹರಡುತ್ತಿರುವ ಓಯೋ (OYO), ವೊಡಾಫೋನ್ (Vodafone) ಹಾಗೂ ಜೆಸಿಬಿಯಂತಹ (JCB) ಪದಗಳ ಫುಲ್ ಫಾರ್ಮ್ (Full Form) ಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ. ಈ ಪದಗಳ ಫುಲ್ ಫಾರ್ಮ್ ಹಾಗೂ ಅದರ ಇತಿಹಾಸವೇನೆಂಬ ಮಾಹಿತಿಯನ್ನು ಈ ಲೇಖನದ ಮುಖಾಂತರ ತಿಳಿಸಲಿದ್ದೇವೆ.

WhatsApp Join Now
Telegram Join Now

OYO:

 

Image Source: ThePrint

 

ಓಯೋ ಎಂದರೆ ಆನ್ ಯುವರ್ ಓನ್ ರೂಮ್ಸ್ (On Your Own Rooms) ಎಂದರ್ಥ. ಅತಿ ಕಡಿಮೆ ಅವಧಿಯಲ್ಲಿ ವೇಗವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿರುವ ಓಯೋ ಹೋಟೆಲ್ ರೂಮ್ಗಳು ಈಗಾಗಲೇ ಭಾರತದಾದ್ಯಂತ ದೊಡ್ಡ ಹೋಟೆಲ್ ನೆಟ್ವರ್ಕ್ ಆಗಿ ಬೆಳೆದಿದೆ. 199 ಸಿಟಿಗಳಲ್ಲಿ ತನ್ನ ಬ್ರಾಂಚ್ ಗಳನ್ನು ಹೊಂದಿರುವ ಓಯೊದ ಬಹು ಮುಖ್ಯ ಹೆಡ್ ಕ್ವಾರ್ಟರ್ಸ್ (Headquarters) ಹರಿಯಾಣದ ಗುರುಗಾಮಿನಲ್ಲಿದೆ.

ಹೀಗೆ ಭಾರತದ 6500 ಹೆಚ್ಚಿನ ಹೋಟೇಲ್ಗಳನ್ನು ಹೊಂದಿರುವ ಓಯೋ ಅತಿ ಹೆಚ್ಚು ಗ್ರಾಹಕರಿಂದ ಪ್ರಶಂಸೆ ಪಡೆದಿರುವ ಬ್ರಾಂಡ್ ಹೋಟೆಲ್ ಅಂದರೆ ತಪ್ಪಾಗಲಾರದು. 2017ರಲ್ಲಿ ರಿತೇಶ್ ಅಗರ್ವಾಲ್ (Ritesh Agarwal) ಎಂಬುವವರು ಸಣ್ಣ ಬಿಸಿನೆಸ್ ಒಂದನ್ನು ಪ್ರಾರಂಭಿಸಬೇಕೆಂಬ ಉದ್ದೇಶದಿಂದ ಅತಿ ಕಡಿಮೆ ಬೆಲೆಗೆ ಹೋಟೆಲ್ ರೂಮ್ ಗಳನ್ನು ಜನರಿಗೆ ಒದಗಿಸುವ ಕಾರ್ಯಕ್ರಮಕ್ಕೆ ಮುಂದಾಗುತ್ತಾರೆ, ಅದರಂತೆ ಈ ಉದ್ಯೋಗದಲ್ಲಿ ವ್ಯಾಪಕ ಯಶಸ್ಸನ್ನು ಕಂಡಿದ್ದಾರೆ.

Joseph Cyril Bamford – JCB:

 

advertisement

Image Source: Financial Times

 

1945 ರಲ್ಲಿ ಜೋಸೆಫ್ ಸಿರಿಲ್ ಬಂಫರ್ಡ್ (Joseph Cyril Bamford) ಅವರು ತಯಾರು ಮಾಡಿದ ಅಗೆಯುವ ಅಥವಾ ಟೆಲಿ ಹ್ಯಾಂಡಲ್ ಯಂತ್ರ ಇದಾಗಿದ್ದು ಇದನ್ನು ಮನೆ ನಿರ್ಮಾಣ ಮಾಡುವ ಸಮಯದಲ್ಲಿ ಅಥವಾ ಮಣ್ಣನ್ನು ಅಗೆದು ಒಂದು ಕಡೆಯಿಂದ ಮತ್ತೊಂದು ಕಡೆಗೆ ಎತ್ತಿ ಹಾಕಲು ಉಪಯೋಗಿಸಲಾಗುತ್ತದೆ.

ಯುರೋಪ್ ಏಷ್ಯಾ ಹಾಗೂ ಅಮೆರಿಕದಾದ್ಯಂತ ಕಾರ್ಖಾನೆಗಳೊಂದಿಗೆ ಜಾಗತಿಕ ಕಂಪನಿಯಾಗಿ JCB ಬೆಳದಿದೆ. ಸದ್ಯ ಜೆಸಿಬಿ ಕಂಪನಿಯು ನಿರ್ಮಾಣ ಯಂತ್ರಗಳನ್ನು ತಯಾರಿಸುವ ವಿಶ್ವದ ಅತಿ ದೊಡ್ಡ ಕಂಪನಿಗಳಲ್ಲಿ ಒಂದಾಗಿ ಹಾಗೂ ಪ್ರಪಂಚದಾದ್ಯಂತ ಭಾರಿ ಪ್ರಖ್ಯಾತಿಯನ್ನು ಪಡೆದುಕೊಂಡಿದೆ.

Vodafone:

 

Image Source: Financial Times

 

ವಾಯ್ಸ್ ಡೇಟಾ ಫೋನ್ (Voice Data Fone) ಎಂಬ ಇಂಗ್ಲಿಷ್ ಪದಗಳಿಂದ ವೊಡಾಫೋನ್ ಎಂಬ ಹೆಸರನ್ನು ಆಯ್ದುಕೊಳ್ಳಲಾಗಿದೆ. ಮೊಬೈಲ್ ಫೋನ್ಗಳ ಮೂಲಕ ಧ್ವನಿ ಮತ್ತು ಡೇಟ್ (Voice and Data) ಆಫ್ ಸೇವೆಗಳನ್ನು ಒದಗಿಸುವುದನ್ನು ಪ್ರತಿಬಿಂಬಿಸಲು ಕಂಪನಿಯು ಈ ಹೆಸರನ್ನು ಆಯ್ಕೆ ಮಾಡಿಕೊಂಡಿದೆ.

advertisement

Leave A Reply

Your email address will not be published.