Karnataka Times
Trending Stories, Viral News, Gossips & Everything in Kannada

SBI: ಮಹಿಳೆಯರಿಗೆ ಮಾತ್ರ ಗುಡ್ ನ್ಯೂಸ್ ಕೊಟ್ಟ ಸ್ಟೇಟ್ ಬ್ಯಾಂಕ್! ಹೊಸ ಭಾಗ್ಯ

advertisement

ಹಿಂದೆಲ್ಲ ಮಹಿಳೆಯರನ್ನು ಮನೆ ಒಳಗೆ ಅಡುಗೆ ಮಾಡುವ ಸಾಧನ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ ಮಹಿಳೆ ಇಂದು ಪುರುಷರಷ್ಟೇ ಸರಿ ಸಮಾನಳಾಗಿದ್ದು ಜೀವನದ ಎಲ್ಲ ರಂಗದಲ್ಲಿಯೂ ತನ್ನ ಹೆಗ್ಗುರುತು ಪರಿಚಯಿಸುತ್ತಿದ್ದಾಳೆ. ಹೀಗಾಗಿ ಸಾಮಾಜಿಕ, ಆರ್ಥಿಕ , ಸಾಂಸ್ಕೃತಿಕ ಎಲ್ಲ ಕ್ಷೇತ್ರದಲ್ಲೂ ಮಹಿಳೆ ಸಾಧನೆ ಅಪರಿಮಿತ ಎನ್ನಬಹುದು ಈ ನಿಟ್ಟಿನಲ್ಲಿ ಮಹಿಳೆಯರಿಗೆ ಸ್ವ ಉದ್ಯೋಗ ಬೆಂಬಲಿಸುವ ಸಲುವಾಗಿ ಅನೇಕ ಬ್ಯಾಂಕ್ ನಲ್ಲಿ ಸರಕಾರದ ಯೋಜನೆಯ ಅನ್ವಯ ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ನೀಡಲಾಗುತ್ತಿದ್ದು ಇದೀಗ ಹೊಸದೊಂದು ಯೋಜನೆಯ ಮೂಲಕ ಮಹಿಳೆಯರಿಗೆ 20ಲಕ್ಷ ರೂಪಾಯಿ ತನಕ ಸಾಲ ಸೌಲಭ್ಯ ನೀಡಲಾಗುತ್ತಿದ್ದು ಈ ಯೋಜನೆ ಬಗ್ಗೆ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಯಾವುದು ಈ ಯೋಜನೆ:

 

Image Source: Sarkari Yojana Information

 

ಈ ಒಂದು ಯೋಜನೆಯ ಹೆಸರು ಸ್ತ್ರೀ ಶಕ್ತಿ ಎಂದಾಗಿದ್ದು SBI ಬ್ಯಾಂಕಿನಲ್ಲಿ ಮಹಿಳಾ ಗ್ರಾಹಕರಿಗೆ 10,000 ದಿಂದ 20 ಲಕ್ಷ ರೂಪಾಯಿ ವರೆಗೂ ಸಾಲ ಸೌಲಭ್ಯ ನೀಡಲಾಗುತ್ತಿದೆ.ಈ ಹಣ ಬಳಸಿಕೊಂಡು ವ್ಯವಹಾರ ಮಾಡಬಹುದು. ಬಿಸಿನೆಸ್ ಪ್ರೊಫೈಲ್ ಆಧರಿಸಿ ಬಡ್ಡಿದರ ನಿಗಧಿ ಆಗಲಿದ್ದು 1%ನಿಂದ ಬಡ್ಡಿದರ ಆರಂಭ ಆಗಲಿದೆ. ಅದೇ ರೀತಿ 15% ವರೆಗೂ ಕೂಡ ಬಿಸಿನೆಸ್ ಮಾಡುವ ಲೋನ್ ಗೆ ಬಡ್ಡಿದರ ವಿಧಿಸಲಾಗುವುದು.ಈ ಮೂಲಕ ಉದ್ಯಮ ಮಾಡಿ ಆದಾಯ ಗಳಿಸಬೇಕು ಎಂದು ಕನಸ್ಸು ಹೊತ್ತ ಮಹಿಳೆಯರಿಗೆ SBI ಬ್ಯಾಂಕಿನ ಸಾಲ ಸೌಲಭ್ಯ ಬಹಳ ಸಹಕಾರಿ ಆಗುತ್ತದೆ.

ಅದೇ ರೀತಿ 1ಲಕ್ಷದಿಂದ 5ಲಕ್ಷ ರೂಪಾಯಿ ವರೆಗೆ ಲೋನ್ ಪಡೆಯುವವರಿಗೆ ಯಾವುದೇ ರೀತಿ ಅಧಿಕ ದಾಖಲೆಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಹಾಗಾಗಿ ನೀವು ಲೋನ್ (Loan) ಅಪ್ಲೈ ಮಾಡುವ ಮುನ್ನ ಅದರ ಬಗ್ಗೆ ಪೂರ್ವ ಪರ ಚಿಂತನೆ ಮಾಡುವುದು ಬಹಳ ಮುಖ್ಯ SBI ಬ್ಯಾಂಕಿನಲ್ಲಿ 1% ನಿಂದ 5% ತನಕ ಪ್ರೊಸೆಸಿಂಗ್ ಶುಲ್ಕ ಇರಲಿದೆ. ಈ ರೀತಿಯ ಸಾಲವನ್ನು ಆನ್ಲೈನ್ ಮತ್ತು ಆಫ್ಲೈನ್ ಎರಡು ಪ್ರಕಾರದಲ್ಲಿ ಪಡೆಯಬಹುದಾಗಿದೆ. SBI ಬ್ಯಾಂಕಿನಲ್ಲಿ ಖಾತೆ ಹೊಂದಿರುವುದು ಅಗತ್ಯವಾಗಿದೆ.

ನೀವು ಆನ್ಲೈನ್ ಅಥವಾ ಆಫ್ಲೈನ್ ನಲ್ಲಿ ಲೋನ್ ಗಾಗಿ ಅಪ್ಲೈ ಮಾಡಿದ್ದ 4 ರಿಂದ 8 ವಾರದ ಒಳಗೆ ನಿಮಗೆ ಲೋನ್ (Loan) ಸಿಗಲಿದೆ. ಅದೇ ರೀತಿ ದೊಡ್ಡ ಮೊತ್ತದ ಲೋನ್ ಪಡೆಯುವ ಹಾಗೆ ಇದ್ದರೆ 8 ರಿಂದ 11ವಾರದಲ್ಲಿ ಲೋನ್ ಮೊತ್ತ ಸಿಗಲಿದೆ. ಮಿನಿಸ್ಟ್ರೀ ಆಫ್ ಇಂಡಿಯಾ ಅಡಿಯಲ್ಲಿ ಸಣ್ಣ ಉದ್ಯಮ ಮಾಡಿಕೊಂಡು ಇದ್ದವರು ಅಥವಾ ಇದ್ದ ಉದ್ದಿಮೆ ಅಭಿವೃದ್ಧಿ ಮಾಡಬೇಕು ಎಂದವರು ಈ ಲೋನ್ ಪಡೆದು ಉದ್ಯಮ ಅಭಿವೃದ್ಧಿ ಮಾಡಬಹುದು.

advertisement

ಉಪ ಕಸುಬಿಗೂ ಸಹಕಾರಿ:

 

Image Source: Rediff.com

 

ಅನೇಕ ಜನರಿಗೆ ಒಂದು ಉದ್ಯೋಗ ಇದ್ದರೂ ಇನ್ನೊಂದು ವ್ಯವಹಾರ ಮಾಡಬೇಕು ಎಂಬ ಕನಸ್ಸು ಇರಲಿದೆ ಹಾಗೆ ಬಿಸ್ನೆಸ್ ಮಾಡಬೇಕು ಎಂದವರು ಕೂಡ ಕೆಲಸದ ಜೊತೆಗೆ ಉಪ ಕಸುಬು ಮಾಡಬೇಕು ಎನ್ನುವವರಿಗೆ ಈ ಒಂದು SBI ಬ್ಯಾಂಕ್ ನಿಂದ ಸಿಗುವ ಸ್ತ್ರೀ ಶಕ್ತಿ ಯೋಜನೆ (Stree Shakti Yojana) ಬಹಳ ಸಹಕಾರಿ ಆಗಲಿದೆ.

ಈ ಒಂದು ಯೋಜನೆಗೆ 18 ರಿಂದ 60 ವರ್ಷದ ಒಳಗಿನ ವಯೋಮಿತಿ ಹೊಂದಿದ್ದವರು ಲೋನ್ ಗೆ ಅಪ್ಲೈ ಮಾಡಬಹುದು. EDP ನಲ್ಲಿ ಪಾಲ್ಗೊಂಡಿದ್ದು ವ್ಯವಹಾರ ಜ್ಞಾನ ಹೊಂದಿರಬೇಕಾದ್ದು ಬಹಳ ಮುಖ್ಯವಾಗಿದೆ. EDP ಅಂದರೆ Employment Development projects ಎಂದು ಬರಲಿದ್ದು ಜನರನ್ನು ಕೌಶಲ್ಯ ಅಭಿವೃದ್ಧಿ ಮಾಡುವ ಮುಖ್ಯ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನೇಕ ತರಬೇತಿ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದು ಅದರ ಜ್ಞಾನ ಇದೆಯೇ ಎಂದು ನೋಡಿ ಲೋನ್ ನೀಡಲಾಗುವುದು.

ಯಾವೆಲ್ಲ ಬಿಸಿನೆಸ್ ಮಾಡಬಹುದು?

ಈ ಒಂದು ಸ್ಕೀಂ ನ ಒಳಗೆ ಲೋನ್ ಪಡೆಯಲು ಆಧಾರ್ ಕಾರ್ಡ್ (Aadhaar Card) ಪಾನ್ ಕಾರ್ಡ್ (PAN Card) ಬೇಕಾಗಲಿದೆ, ಮತದಾರರ ಗುರುತು ಚೀಟಿ, ಡಿಎಲ್, ಪಾಸ್ ಪೋರ್ಟ್, ವಾಸ್ತವ್ಯ ಪುರಾವೆಯಾಗಿ ಮನೆ ವಿದ್ಯುತ್ ಬಿಲ್ ನೀಡಬೇಕು ಹಾಗೂ ಬಿಸಿನೆಸ್ ಡಿಟೇಲ್ ಇರುವ ಮಾಹಿತಿ, ಹಾಗೂ ITR ರಿಟರ್ನಿಂಗ್ ಇದ್ದರೆ ಅದನ್ನು ಕೂಡ ನೀಡಬೇಕು. ಹೊಟೇಲ್, ಟೈಲರಿಂಗ್, ಬ್ಯುಟಿಶಿಯನ್, ಮೊಬೈಲ್ ಶಾಪ್, ಕಿರಣಿ ಅಂಗಡಿ, ಹಾಲಿನ ಉತ್ಪನ್ನ ಮಾರಾಟ ಮಳಿಗೆ ಮಾಡಬಹುದಾಗಿದೆ. ಸೀರೆ ತಯಾರಿ, ಸೋಪ್ ತಯಾರಿ, ಚಾಕಲೇಟ್ ಮಾಡುವುದು ಹೀಗೆ ಯಾವ ತರದ ಬಿಸಿನೆಸ್ ಕೂಡ ಮಾಡಬಹುದು. ಇದಕ್ಕೆ ಕೆಲವು ತೆರಿಗೆ ವಿನಾಯಿತಿ, ಬಡ್ಡಿದರದ ವಿನಾಯಿತಿ ಕೂಡ ಸಿಗಲಿದೆ. ಇಲ್ಲಿ ಆದಷ್ಟು ಕಡಿಮೆ ಬಡ್ಡಿದರದಲ್ಲಿ ಲೋನ್ ಸೌಲಭ್ಯ ಕೂಡ ನೀಡಲಾಗುವುದು.

advertisement

Leave A Reply

Your email address will not be published.