Karnataka Times
Trending Stories, Viral News, Gossips & Everything in Kannada

Gruha Lakshmi Yojana: ವಾಟ್ಸಾಪ್ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕೋದು ಹೇಗೆ..?

advertisement

ಹಿಂದಿನ ಕಾಲದಲ್ಲಿ ಮಹಿಳೆಯರು ಬರೀ ಮದುವೆ ಯಾಗಿ ಅಡುಗೆ ಕೆಲಸಕ್ಕೆ ಮಾತ್ರ ಸಿಮೀತ ಎನ್ನಲಾಗಿತ್ತು. ಆದರೆ ಈಗ ಹಾಗಲ್ಲ ಮಹಿಳೆಯರು ಕೂಡ‌ ಪುರುಷರಂತೆ ಸಮಾನರು‌.ಎಲ್ಲಾ ಕ್ಷೇತ್ರದಲ್ಲು ಕೂಡ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.ಸರಕಾರ ಕೂಡ ಮಹಿಳೆಯರನ್ನು ಪ್ರೋತ್ಸಾಹಿಸುತ್ತಲೇ ಬಂದಿದ್ದು ವಿವಿಧ ರೀತಿಯ ಸೌಲಭ್ಯ ಗಳನ್ನು ಘೋಷಣೆ ಮಾಡುತ್ತಿದೆ. ಈ ಭಾರಿ ರಾಜ್ಯ ಸರಕಾರವೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದು ಅದರಲ್ಲಿ ಗೃಹಲಕ್ಷ್ಮಿ (Gruha Lakshmi) ಮತ್ತು ಶಕ್ತಿ‌ಯೋಜನೆ ಬಹಳಷ್ಟು ಫೇಮ್ ಕ್ರಿಯೇಟ್ ಮಾಡಿಕೊಂಡಿದ್ದು ಇದೀಗ ಈ ಯೋಜನೆ ಮೂಲಕ ಹಲವಷ್ಟು ಮಹಿಳೆಯರಿಗೆ ಆರ್ಥಿಕ ಸಹಾಯ ಸಿಕ್ಕಂತೆ ಆಗಿದೆ.

WhatsApp Join Now
Telegram Join Now

ಎರಡು ಸಾವಿರ ಜಮೆ?

 

Image Source: iStock

 

ಈ ಯೋಜನೆಗೆ ಅರ್ಜಿ ಸಲ್ಲಿಸಿದ ಕೋಟ್ಯಂತರ ಮಹಿಳೆಯರಲ್ಲಿ‌ ಸಾಕಷ್ಟು ಜನ ಈ ಯೋಜನೆಯಿಂದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ, ಈಗಾಗಲೇ ಫಲಾನುಭವಿಗಳಿಗೆ ಹತ್ತು ಕಂತಿನ ವರೆಗೆ ಹಣ ಜಮೆ ಯಾಗಿದ್ದು ಮಹಿಳೆಯರು ತಮಗೆ ಬೇಕಾದ ವಸ್ತುಗಳನ್ನು ಕೂಡ ಖರೀದಿ ಮಾಡಿದ್ದಾರೆ. ಆದರೆ ಈ ಯೋಜನೆಯ ಹಣ ಕೆಲವು ಮಹಿಳೆಯರಿಗೆ ಇನ್ನೂ ಕೂಡ ಈ ಯೋಜನೆಗೆ ಅರ್ಜಿ ಹಾಕಲು ಅವಕಾಶ ಕೂಡ ಇರಲಿದೆ.

ಯಾಕೆ ಹಣ ಬಂದಿಲ್ಲ:

advertisement

ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಹಣ ಸಿಗಲು ಕೆಲವೊಂದು ತಾಂತ್ರಿಕ ಸಮಸ್ಯೆ ಉಂಟಾಗುತ್ತಿದೆ. ಹಣ ಬಾರದೆ ಇದ್ದರೆ, ಫಲಾನುಭವಿಗಳ ಬ್ಯಾಂಕ್ ಖಾತೆ, ಆಧಾರ್ ಜೋಡಣೆ, ತಾಂತ್ರಿಕ ಸಮಸ್ಯೆ,ರೇಷನ್ ಕಾರ್ಡ್ ಇತ್ಯಾದಿ ಸಮಸ್ಯೆ ಯಾಗಿದ್ದು ದಾಖಲೆ ಸರಿಪಡಿಸಿ ಮತ್ತೆ ಅರ್ಜಿ ಹಾಕಬಹುದು.

ವಾಟ್ಸಾಪ್ ಮೂಲಕ ಕೂಡ ಅರ್ಜಿ ಸಲ್ಲಿಸಬಹುದು:

ಇದೀಗ ನೀವು ವಾಟ್ಸಾಪ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು ವಾಟ್ಸಾಪ್​ ಚಾಟ್‌ಬಾಟ್ (WhatsApp Chatbot) ಸಹಾಯದಿಂದ ಮಹಿಳೆಯರು ಅರ್ಜಿ ಸಲ್ಲಿಸಬಹುದಾಗಿದೆ. ವಾಟ್ಸಾಪ್ ನಂಬರ್ 8147500500ಗೆ ನಿಮ್ಮ ವಿವರ ಕಳಿಸಬೇಕು. ಚಾಟ್‌ಬಾಟ್ ಅರ್ಜಿ‌ ಸಲ್ಲಿಕೆ‌ ಪೂರ್ಣಗೊಳಿಸಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ನಿಮ್ಮ ಎಲ್ಲಾ ದಾಖಲೆ ಸಿದ್ಧಪಡಿಸಿ ಇಟ್ಟುಕೊಂಡಿದ್ದರೆ, ಮೂರೇ ನಿಮಿಷದಲ್ಲಿ ಅರ್ಜಿ ಯನ್ನು ಹಾಕಬಹುದು.

ಇ-ಗವರ್ನೆನ್ಸ್ ಸರ್ವೀಸಸ್ ಇಲಾಖೆಗೆ ಸಿಗಲಿದೆ:

ಚಾಟ್‌ಬಾಟ್ ಫಲಾನುಭವಿಗಳ ಅರ್ಜಿಯನ್ನು ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಗ್ರಾಮ ಒನ್ ಕಚೇರಿಗಳಿಗೆ ವರ್ಗಾಯಿಸುತ್ತದೆ. ಅಲ್ಲಿ ದಾಖಲೆಗಳ ಪರಿಶೀಲಿಸಿದ ನಂತರ ಅರ್ಜಿ ಸ್ವೀಕಾರ ಮಾಡಿ, ಈ ಮಾಹಿತಿ ಇ-ಗವರ್ನೆನ್ಸ್ ಸರ್ವೀಸಸ್ ಇಲಾಖೆಗೆ ದೊರೆಯಲಿದ್ದು ಈ ಮೂಲಕ ನೀವು ಕೂತಲ್ಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.ಹಾಗಾಗಿ ಈ ಯೋಜನೆಗೆ ಇನ್ನು ಅರ್ಜಿ ಹಾಕಿಲ್ಲ ಅಂದಾದರೆ ಸುಲಭ ವಾಗಿ ವಾಟ್ಸಾಪ್ ಮೂಲಕ ಅರ್ಜಿ ಹಾಕಬಹುದು.

advertisement

Leave A Reply

Your email address will not be published.