Karnataka Times
Trending Stories, Viral News, Gossips & Everything in Kannada

Amit Shah: ಸಿದ್ದರಾಮಯ್ಯ ಒತ್ತಾಯಕ್ಕೆ ಮಣಿದ ಅಮಿತ್ ಷಾ! ರಾಜ್ಯದ ಜನತೆಗೆ ಸಿಹಿಸುದ್ದಿ

advertisement

Amit Shah: ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಜನತೆಯ ಸದುದ್ದೇಶಕ್ಕಾಗಿ ಅನೇಕ ಯೋಜನೆ ಪರಿಚಯಿಸಲು ಮುಂದಾಗುತ್ತಿದ್ದರು ಕೇಂದ್ರದ ಸರಿಯಾದ ಸಹಕಾರ ಸಿಗದೆ ಅನೇಕ ಯೋಜನೆ ಜಾರಿಯಾಗಲು ವಿಳಂಬ ಆಗುತ್ತಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವರಾದ ಅಮೀತ್ ಶಾ ಅವರನ್ನು ಭೇಟಿ ಆಗಿದ್ದಾರೆ. ಈ ಮೂಲಕ ರಾಜ್ಯದ 5 ನಗರದಲಿ ಸೇಫ್ ಸಿಟಿ ಯೋಜನೆ ಜಾರಿಗೊಳಿಸಬೇಕು ಎಂಬ ತಮ್ಮ ಪ್ರಸ್ತಾಪನೆಯನ್ನು ಕೇಂದ್ರ ಗೃಹಸಚಿವರ ಮುಂದಿಟ್ಟು ಮನವಿ ಮಾಡಿದ್ದಾರೆ. ಅದರ ಜೊತೆಗೆ ಪೊಲೀಸ್ ವಸತಿ ಗೃಹ, ಕ್ಯಾಂಟೀನ್ ಸೌಲಭ್ಯ, ವಿಧಿ ವಿಜ್ಞಾನ ಪ್ರಯೋಗಾಲಯ ಇತ್ಯಾದಿಗಳ ದುರಸ್ತಿ ಕಾರ್ಯಕ್ಕೆ ಅನುದಾನ ಕೋರಿ ಸಿಎಂ ಅವರು ಕೇಂದ್ರ ಗೃಹ ಸಚಿವರ ಬಳಿ ಮನವಿ ಮಾಡಿದ್ದಾರೆ.

WhatsApp Join Now
Telegram Join Now

ಇತ್ತೀಚಿನ ದಿನದಲ್ಲಿ ಅಪರಾಧ ಹಾಗೂ ಅಪಘಾತ ಪ್ರಮಾಣ ಅಧಿಕ ಆಗುತ್ತಿದೆ. ಕಳ್ಳತನ , ಸುಲಿಗೆ , ದರೋಡೆ, ಕೊಲೆ, ಜೂಜು, ಅತ್ಯಾಚಾರ ಇನ್ನು ಅನೇಕ ಪ್ರಕರಣಗಳು ದೈನಿಕ ನಡೆಯುತ್ತಲೇ ಇದ್ದು ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ‌. ನಗರ ಪ್ರದೇಶದಲ್ಲಿ ಓಡಾಡುವುದೆ ಕಷ್ಟಕರವಾಗಿದ್ದು ಪೊಲೀಸ್ ರಕ್ಷಣಾ ವ್ಯವಸ್ಥೆ ಮೊರೆ ಹೋಗುವಂತಾಗಿದೆ. ಸಿಸಿ ಕ್ಯಾಮರಾ, ಕಂಟ್ರೋಲ್ ನಂಬರ್ ಸ್ವಾಸ್ಥ್ಯ ಇತ್ಯಾದಿ ಅಗತ್ಯ ಮನಗಂಡು ರಾಜ್ಯದ ಪ್ರಮುಖ 5 ನಗರದಲ್ಲಿ ಸೇಫ್ ಸಿಟಿ ಯೋಜನೆ ಜಾರಿಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ‌.

CM Siddaramaiah & Amit shah
Image Source: The Federal News

advertisement

ಗೃಹ ಸಚಿವರಿಗೆ ಮನವಿ
ಕೇಂದ್ರ ಗೃಹ ಸಚಿವರಾದ ಅಮೀತ್ ಶಾ ಅವರಿಗೆ ಸಿಎಂ ಸಿದ್ದರಾಮಯ್ಯ ಅವರು ಸೇಫ್ ಸಿಟಿ ಯೋಜನೆಗೆ ಅನುಮೋದನೆ ನೀಡಿ ಅನುದಾನಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಸಾರ್ವಜನಿಕರಿಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ಅನುದಾನ ಒದಗಿಸುವಂತೆ ಹಲವು ಪ್ರಸ್ತಾಪನೆಯನ್ನು ಮುಂದಿಡಲಾಗಿದೆ. ರಾಜ್ಯದಲ್ಲಿ ಪೊಲೀಸ್ ಠಾಣೆಗಳು ಶಿಥಿಲಾವಸ್ಥೆಯಲ್ಲಿ ಇದ್ದು ಅದರ ದುರಸ್ತಿ ಕಾರ್ಯ ಬಾಕಿ ಇದೆ. 100 ಪೊಲೀಸ್ ಠಾಣೆಗೆ ಹೊಸ ಕಟ್ಟಡ ಅಗತ್ಯವಿದೆ. ಹಾಗಾಗಿ 300ಕೋಟಿ ಅನುದಾನ ನೀಡಲು ಮನವಿ ಮಾಡಲಾಗಿದೆ.

ಬಳ್ಳಾರಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಎರಡು ಬೆಟಾಲಿಯನ್ ಸ್ಥಾಪನೆಗೆ ಮನವಿಮಾಡಲಾಗಿದೆ. ಅದರ ಜೊತೆಗೆ body worn camera ಅಗತ್ಯವಿದ್ದು 58,546 ಕ್ಯಾಮರಾ ಖರೀದಿ ಮಾಡುವುದು ಅಗತ್ಯವಿದ್ದು ಅದಕ್ಕೆ 175 ಕೋಟಿ ಆಗಲಿದೆ. ಹಾಗಾಗಿ 100 ಕೋಟಿ ನೆರವು ನೀಡುವಂತೆ ಮನವಿ ಮಾಡಲಾಗಿದೆ.CM Siddaramaiah & Amit shah

ನಿರ್ಭಯಾ ನಿಧಿಯಡಿಯಲ್ಲಿ ಬೆಂಗಳೂರಿನಲ್ಲಿ ಇರುವ ಹೆಚ್ಚುವರಿ ರಕ್ಷಣಾ ವ್ಯವಸ್ಥೆ ಇರುವಂತೆ ಮೈಸೂರು, ಮಂಗಳೂರು , ಧಾರವಾಡ, ಬೆಳಗಾವಿ, ಹುಬ್ಬಳ್ಳಿಯಲ್ಲಿ ಜಾರಿಗೆ ತರಬೇಕು ಅಲ್ಲಿ ಸೇಫ್ ಸಿಟಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಕ್ಕೆ ಬಂದ ನಂತರ ರಾಜ್ಯದ ಇತರ ಕಡೆಯಲ್ಲಿ ಜಾರಿಗೆ ತರಬೇಕು ಎಂದು ಸರಕಾರ ಚಿಂತನೆ ನಡೆಸಿದೆ. ಇದಕ್ಕೆ ತಲಾ 200 ಕೋಟಿ ಅನುದಾನ ಅಗತ್ಯ ಇದ್ದು ಒಟ್ಟು 1000 ಕೋಟಿ ಅನುಮೋದನೆ ನೀಡುವಂತೆ ಕೇಂದ್ರ ಸರಕಾರ ಬೇಡಿಕೆ ಇಡಲಾಗಿದೆ. ಹಾಗಾಗಿ ಸೇಫ್ ಸಿಟಿ ಯೋಜನೆಗೆ ಸಿಎಂ ಅವರು ಮುನ್ನುಡಿ ಇಟ್ಟಿದ್ದು ಕೇಂದ್ರದಿಂದ ನೆರವು ಬರಬಹುದು ಎಂದು ಕೂಡ ನಿರೀಕ್ಷಿಸಲಾಗಿದೆ.

advertisement

Leave A Reply

Your email address will not be published.