Karnataka Times
Trending Stories, Viral News, Gossips & Everything in Kannada

Loan: ಸ್ವಯಂ ಉದ್ಯೋಗ ನೇರ ಸಾಲಕ್ಕಾಗಿ ಅರ್ಜಿ ಆಹ್ವಾನ

advertisement

ಇಂದು‌ ಪ್ರತಿಯೊಂದು ವ್ಯಕ್ತಿಗೂ ಉದ್ಯೋಗ ಅನ್ನೋದು ಬಹಳ ಮುಖ್ಯವಾಗಲಿದೆ. ಸರಿಯಾದ ಉದ್ಯೋಗ ಇದ್ದರೆ ಮಾತ್ರ ಜೀವನ ಸುಲಭ.ಇಂದು ಎಷ್ಟೇ ಶಿಕ್ಷಣ ವಂತರು ಆಗಿದ್ದರೂ ಕೂಡ ನಮಗೆ ಬೇಕಾದ ಕೆಲಸ ಸಿಗುವುದು ಕಷ್ಟವೇ. ಹಾಗಾಗಿ ಹೆಚ್ಚಿನ ಯುವಕ ಯುವತಿಯರು ಸ್ವ ಉದ್ಯಮ ದತ್ತ ಆಕರ್ಷಣೆ ವಹಿಸಿದ್ದಾರೆ. ಸರಕಾರ ಕೂಡ ನಿರುದ್ಯೋಗ ಯುವಕ ಯುವತಿಯರಿಗೆ ಆರ್ಥಿಕ ಬೆಂಬಲ ನೀಡುತ್ತಿದ್ದು ಇದೀಗ ಸ್ವ ಉದ್ಯೋಗ ಮಾಡುವವರಿಗೆ ಸಹಾಯ ಧನ (Subsidy) ನೀಡಲು ಮುಂದಾಗಿದೆ.

WhatsApp Join Now
Telegram Join Now

ಈ ನಿಗಮದಿಂದ ಪಡೆಯಬಹುದು:

ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಸ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಯೋಜನೆಯ ಅಡಿಯಲ್ಲಿ ವಿವಿಧ ಯೋಜನೆ ಅನುಷ್ಠಾನ ಮಾಡಿದೆ. ಇದರಲ್ಲಿ ಸ್ವಯಂ ಉದ್ಯೋಗ ನೇರ ಸಾಲ (Self Employment Direct Loan) ಸೌಲಭ್ಯ ನೀಡುತ್ತಿದ್ದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸ ಬಹುದಾಗಿದೆ.

ಎಷ್ಟು ಸಾಲ ಪಡೆಯಬಹುದು?

 

Image Source: IndiaTimes

 

advertisement

ಈ ಯೋಜನೆ ಮೂಲಕ ಕನಿಷ್ಠ ರೂ.50,000 ಗಳಿಂದ ಗರಿಷ್ಠ ರೂ .1,00,000 ಗಳ ಸಾಲ (Loan) ಸೌಲಭ್ಯ ಒದಗಿಸಲಿದ್ದು ಈ ಮೊತ್ತದಲ್ಲಿ ಶೇಕಡ.20 ರಷ್ಟು ಸಹಾಯಧನ ಹಾಗೂ ಶೇಕಡ.80 ರಷ್ಟು ಸಾಲವನ್ನು ಒದಗಿಸಲಾಗುತ್ತದೆ. ಹೊಸ ಉದ್ಯಮಿಗಳಿಗೆ ಹಾಗೂ ಬಡವರು‌ ಸ್ವ ಉದ್ಯಮ ಕೈಗೊಳ್ಳಲು ಒಂದು ಲಕ್ಷದ ವರೆಗೆ ವಾರ್ಷಿಕ 4ರ ಕಡಿಮೆ ಬಡ್ಡಿ ದರದಲ್ಲಿ ಹಣ ನೀಡಲಿದೆ.

ಅರ್ಜಿ ಹಾಕಲು ಅರ್ಹತೆ ಏನು?

  • ಆರ್ಯ ವೈಶ್ಯ ಸಮುದಾಯಕ್ಕೆ ಸೇರಿದ್ದವರು ಅರ್ಜಿ ಹಾಕಬಹುದು.
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಕಡ್ಡಾಯ ವಾಗಿ ಇರಬೇಕು.
  • ಕರ್ನಾಟಕ ರಾಜ್ಯದಲ್ಲಿ ಇದ್ದವರು ಮಾತ್ರ ಅರ್ಜಿ ಹಾಕಬಹುದು‌.
  • ಅರ್ಜಿದಾರರು ತಮ್ಮ ಆಧಾರ್ ಸಂಖ್ಯೆಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡಿರಬೇಕು.
  • ಒಂದು ಕುಟುಂಬದಲ್ಲಿ ಒಬ್ಬರು ಮಾತ್ರ ಸಾಲ ಸೌಲಭ್ಯ ಪಡೆಯಲು ಅರ್ಹರು.

ಈ ದಾಖಲೆ ಬೇಕು

  • ಆಧಾರ್ ಕಾರ್ಡ್
  • ರೇಷನ್ ಕಾರ್ಡ್
  • ವಿಳಾಸದ ಪುರಾವೆ ಪತ್ರ
  • ಜಾತಿ ಪ್ರಮಾಣ ಪತ್ರ
  • ಆದಾಯ ಪ್ರಮಾಣ ಪತ್ರ
  • ಫೋಟೋ
  • ಬ್ಯಾಂಕ್ ಖಾತೆಯ ವಿವರ
  • ಮೊಬೈಲ್ ನಂಬರ್ ಇತ್ಯಾದಿ.

ಅದೇ ರೀತಿ ಅರಿವು ಶೈಕ್ಷಣಿಕ ಸಾಲ ಯೋಜನೆಯ ಮೂಲಕ ಸಿ.ಇ.ಟಿ. ಅಥವಾ ನೀಟ್ ಪ್ರವೇಶ ಪಡೆದ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಒಂದು ವರ್ಷಕ್ಕೆ ಒಂದು ಲಕ್ಷ ಶೇ.2ರ ಬಡ್ಡಿ ದರದಲ್ಲಿ ಸಾಲ ಕೂಡ ನೀಡಲಿದೆ. ಹಾಗಾಗಿ ಶಿಕ್ಷಣ ದ ಜೊತೆಗೆ ಸ್ವಯಂ ಉದ್ಯಮಕ್ಕೂ ಬೆಂಬಲ ವನ್ನು ನೀಡುತ್ತಿದೆ.

advertisement

Leave A Reply

Your email address will not be published.