Karnataka Times
Trending Stories, Viral News, Gossips & Everything in Kannada

Amul: ಅಮುಲ್ ಬ್ರಾಂಡ್ ಜೊತೆಗೆ ಪಾರ್ಟ್ನರ್ ಆಗಿ ಬಿಸಿನೆಸ್ ಮಾಡೋಕೆ ರೆಡಿ ಇದ್ದೀರಾ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ನೋಡಿ ಅವಕಾಶ.

advertisement

ಒಂದು ವೇಳೆ ನೀವು ನಿಮ್ಮದೇ ಆಗಿರುವಂತಹ ಸ್ವಂತ ವಾದ ಉದ್ಯಮವನ್ನು ವ್ಯಾಪಾರವನ್ನು ಪ್ರಾರಂಭ ಮಾಡಬೇಕು ಎನ್ನುವಂತಹ ಆಸೆ ಇದ್ರೆ ಅಮುಲ್ ಬ್ರಾಂಡಿನ ಫ್ರಾಂಚೈಸಿ ಅನ್ನು ನೀವು ಪ್ರಾರಂಭ ಮಾಡುವಂತಹ ಅವಕಾಶವನ್ನು ಅಮೂಲ್ (Amul) ಈಗ ಮಾಡಿಕೊಡುತ್ತಿದೆ. ಅಮೂಲ್ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತ ದೇಶದ ಅತ್ಯಂತ ದೊಡ್ಡ ಡೈರಿ ಬ್ರಾಂಡ್ ಆಗಿದೆ. ಇದರ ಜೊತೆಗೆ ಫ್ರಾನ್ಚೈಸಿಯನ್ನು ಪಡೆದುಕೊಂಡು ವ್ಯಾಪಾರ ಮಾಡೋದು ಖಂಡಿತವಾಗಿ ನಿಮಗೆ ಲಾಭದಾಯಕ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ.

WhatsApp Join Now
Telegram Join Now

ಅಮೂಲ್ ಫ್ರಾಂಚೈಸಿ ಅಂದ್ರೆ ಏನು?

 

Image Source: Bhaskar

 

ಅಮುಲ್ ಫ್ರಾಂಚೈಸಿ (Amul Franchise) ಅಂದ್ರೆ ಅಮುಲ್ ಸಂಸ್ಥೆಯ ಪ್ರಾಡಕ್ಟ್ಗಳಾಗಿರುವಂತಹ ಚೀಸ್ ಹಾಲು ಮೊಸರು ಹಾಗೂ ಇನ್ನಿತರ ಡೈರಿ ವಸ್ತುಗಳನ್ನ ಒಂದು ನಿರ್ದಿಷ್ಟ ಲೊಕೇಶನ್ ನಲ್ಲಿ ಅಮುಲ್ ಸಂಸ್ಥೆಯ ಹೆಸರಿನಲ್ಲಿ ಮಾರಾಟ ಮಾಡುವುದಾಗಿದೆ.

advertisement

  • ನೀವು ಇದನ್ನು ಎಷ್ಟು ಕಡಿಮೆ ಬೆಲೆಗೆ ಪ್ರಾರಂಭ ಮಾಡಬಹುದು ಎಂದರೆ ಕೇವಲ 2 ಲಕ್ಷ ರೂಪಾಯಿಗಳ ಹೂಡಿಕೆಯ ಜೊತೆಗೆ ಅಮೂಲ್ ಫ್ರಾಂಚೈಸಿಯನ್ನು ನೀವು ಪ್ರಾರಂಭ ಮಾಡಬಹುದಾಗಿದೆ.
  • ಇದು ಎಷ್ಟು ಲಾಭದಾಯಕವಾಗಿದೆ ಎಂದರೆ ಅಮುಲ್ ಪ್ರಾಡಕ್ಟ್ ಗಳನ್ನ ನೀವು ಮಾರಾಟ ಮಾಡುವುದರಿಂದ ಅದರ ಮೇಲೆ ಎರಡು ಪಾಯಿಂಟ್ 5 ರಿಂದ 20 ಪ್ರತಿಶತ ಲಾಭವನ್ನು ಕಮಿಷನ್ ರೂಪದಲ್ಲಿ ಪಡೆದುಕೊಳ್ಳಬಹುದು.
  • ಅಮೂಲ್ ಈಗಾಗಲೇ ಭಾರತ ದೇಶದ ತುಂಬೆಲ್ಲ ಜನಪ್ರಿಯವಾಗಿರುವ ಬ್ರಾಂಡ್ ಆಗಿರುವ ಕಾರಣದಿಂದಾಗಿ ಜನರು ನಿಮ್ಮನ್ನು ಗುರುತಿಸುವುದಕ್ಕೆ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ ಹಾಗೂ ಅಮೂಲ್ ಸಂಸ್ಥೆ ಕೂಡ ಈ ಮೂಲಕ ನಿಮಗೆ ಟ್ರೈನಿಂಗ್ ಮಾರ್ಕೆಟಿಂಗ್ ಮತ್ತು ಕಸ್ಟಮರ್ ಸರ್ವಿಸ್ ವಿಚಾರದಲ್ಲಿ ಸಹಾಯ ಮಾಡುತ್ತದೆ.

ಫ್ರಾಂಚೈಸಿಯನ್ನು ಪಡೆದು ಕೊಳ್ಳುವುದು ಹೇಗೆ?

  • ಮೊದಲಿಗೆ ನೀವು ಭಾರತೀಯ ಆಗಿರಬೇಕು ಹಾಗೂ ಕನಿಷ್ಠ ಪಕ್ಷ 2 ಲಕ್ಷ ರೂಪಾಯಿಗಳ ಬಂಡವಾಳವನ್ನು ಹೊಂದಿರಬೇಕು.
  • ಫ್ರಾಂಚೈಸಿ ಓಪನ್ ಮಾಡೋದಕ್ಕೆ ಉತ್ತಮವಾದ ಲೊಕೇಶನ್ ಇರಬೇಕು. FSSAI ಲೈಸೆನ್ಸ್ ಅನ್ನು ಪ್ರಮುಖವಾಗಿ ಹೊಂದಿರಲೇ ಬೇಕಾಗುತ್ತದೆ.

ಇನ್ನು ಇದರಿಂದ ಎಷ್ಟು ಹಣವನ್ನು ದುಡಿಯಬಹುದೇನೋ ಇದರ ಬಗ್ಗೆ ಮಾತನಾಡುವುದಾದರೆ ಇದು ಮಾರಾಟ ಆಗುವಂತಹ ಪ್ರಾಡಕ್ಟ್ ಹಾಗು ನೀವು ಎಲ್ಲಿ ಇದನ್ನು ಪ್ರಾರಂಭ ಮಾಡಿಸಿದ್ದೀರಿ ಎನ್ನುವಂತಹ ಸ್ಥಳದ ಮೇಲೆ ಕೂಡ ನಿರ್ಧಾರಿತವಾಗಿರುತ್ತದೆ. ಆದರೆ ಸಾಮಾನ್ಯವಾಗಿ 2.5 ರಿಂದ 20 ಪ್ರತಿಶತ ಕಮಿಷನನ್ನು ನೀವು ಇದರ ಮೇಲೆ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಕೂಡ ಆಸಕ್ತಿಯನ್ನು ಹೊಂದಿದ್ದರೆ ಇದನ್ನು ಯಾವ ರೀತಿಯಲ್ಲಿ ನಿರ್ದಿಷ್ಟ ಮಾಡಿಕೊಳ್ಳಬೇಕು ಎನ್ನುವಂತಹ ವಿಚಾರವನ್ನು ಅಧಿಕೃತ ವೆಬ್ಸೈಟ್ ಮೂಲಕ ತಿಳಿದು ಮುಂದುವರೆಯಬಹುದಾಗಿದೆ.

advertisement

Leave A Reply

Your email address will not be published.