Karnataka Times
Trending Stories, Viral News, Gossips & Everything in Kannada

Suryakumar Yadav: ಕೆಲವೇ ವರ್ಷಗಲ್ಲಿ ಹಿಟ್ ಆದ ಕ್ರಿಕೆಟರ್ ಸೂರ್ಯಕುಮಾರ್ ಆಸ್ತಿ ಎಷ್ಟು ಗೊತ್ತಾ?

advertisement

ಕ್ರಿಕೆಟ್ ಆಟವು ಭಾರತದಲ್ಲಿ ನೆಚ್ಚಿನ ಆಟಗಳ ಸಾಲಿನಲ್ಲಿ ಒಂದಾಗಿದೆ. IPL, ವಿಶ್ವಕಪ್, T20 ಸರಣಿ ಮುಂತಾದಕಡೆ ಅಪಾರ ಮಟ್ಟದಲ್ಲಿ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು. ಹಾಗಾಗಿ ಕ್ರಿಕೆಟ್ ನಲ್ಲಿ ಸಾಧನೆ ಮಾಡಿ ಅನೇಕ ನಾಯಕರು ಮಿಂಚಿದ್ದಾರೆ ಎಂದು ಹೇಳಬಹುದು. ಅಂತಹ ನಾಯಕರ ಸಾಲಿನಲ್ಲಿ ಟೀಂ ಇಂಡಿಯಾದ ಸೂಪರ್ ಬ್ಯಾಟ್ಸ್ ಮೆನ್ ಆದ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಕೂಡ ಒಬ್ಬರು ಎಂದು ಹೇಳಬಹುದು. ಇವರು ಕ್ರಿಕೆಟ್ ನಲ್ಲಿ ಗಣ್ಯ ಸಾಧನೆ ಮಾಡಿದ್ದು ಇವರ ವೈಯಕ್ತಿಕ ವಿಚಾರ ಹಾಗೂ ಒಟ್ಟು ಆಸ್ತಿ ಮೌಲ್ಯದ ಬಗ್ಗೆ ಎಲ್ಲೆಡೆ ಚರ್ಚೆಯಾಗುತ್ತಿದ್ದು ಈ ಬಗ್ಗೆ ಪೂರ್ತಿ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಹಿನ್ನೆಲೆ:

ಸೂರ್ಯ ಕುಮಾರ್ ಯಾದವ್ (Suryakumar Yadav) ಅವರು ಸೆಪ್ಟೆಂಬರ್ 14ರಂದು ಮಹಾರಾಷ್ಟ್ರದಲ್ಲಿ ಜನಿಸಿದರು. ಕ್ರಿಕೆಟ್ ನಲ್ಲಿ ಚಿಕ್ಕಂದಿನಿಂದಲೂ ಅಪಾರ ಆಸಕ್ತಿ ಇದ್ದ ಇವರು ಕ್ರಿಕೆಟ್ ಜೊತೆಗೆ ವಿದ್ಯಾಭ್ಯಾಸದಲ್ಲಿಯೂ ಮುಂಚುಣಿಯಲ್ಲಿದ್ದಾರೆ. ಮುಂಬೈನ ಪಿಳ್ಳೆ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಪದವಿಯನ್ನು ಪಡೆದಿದ್ದಾರೆ. 2010 -2011ರಲ್ಲಿ ರಣಜಿ ಕ್ರಿಕೆಟ್ ಟೂರ್ನಮೆಂಟ್‌ ನಲ್ಲಿ ದೆಹಲಿ ತಂಡದ ವಿರುದ್ಧ ಆಡಿ ಎಲ್ಲರ ಗಮನ ಸೆಳೆದಿದ್ದಾರೆ. ಮುಂಬೈ ಪರವಾಗಿ 73 ರನ್ ಪಡೆದು ಅತ್ಯುತ್ತಮ ಸಾಧನೆ ಮಾಡಿದ್ದರು‌. ಅದರ ಜೊತೆಗೆ 2016ರಲ್ಲಿ ದೇವಿಶ ಶೆಟ್ಟಿ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿದ್ದಾರೆ.

IPL ಅವಕಾಶ:

 

Image Source: InsideSport

 

advertisement

ಸೂರ್ಯ ಕುಮಾರ್ ಯಾದವ್ (Suryakumar Yadav) ಅವರು ಮುಂಬೈ ನಲ್ಲಿ ಆಟ ಆಡಿದ್ದೆ ಅವರಿಗೆ ಪ್ಲಸ್ ಪಾಯ್ಟ್ ಆಗಿದೆ. 2011ರಲ್ಲಿ IPL ಸರಣಿ ಆರಂಭ ಆಗುವಾಗ ಮುಂಬೈ ಇಂಡಿಯನ್ಸ್ IPL ಒಪ್ಪಂದದ ಅನ್ವಯ ಸೂರ್ಯ ಕುಮಾರ್ ಯಾದವ್ ಅವರನ್ನು ತಮ್ಮ ತಂಡದ ಜೊತೆಗೆ ಸೇರಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್, ಮುಂಬೈ, ಇಂಡಿಯಾ ಎ, ಮುಂಬೈ ಎ, ವೆಸ್ಟ್ ಝೋನ್, ಕೋಲ್ಕತಾ ನೈಟ್ ರೈಡರ್ಸ್, ಇಂಡಿಯಾ ಎ ಟಿ20, ಇಂಡಿಯಾ ಎ, ಇಂಡಿಯಾ ಬ್ಲೂ, ಇಂಡಿಯಾ ರೆಡ್, ಇಂಡಿಯಾ ಸಿ, ಟ್ರಯಂಪ್ಸ್ ನೈಟ್ ಎಂಎನ್ ಇ, ಇಂಡಿಯಾ, ಇಂಡಿಯನ್ಸ್ ತಂಡದಲ್ಲಿ ಅವರು ಆಟ ಆಡಿದ್ದಾರೆ.

T20, IPL ಸಾಧನೆ:

ಸೂರ್ಯ ಕುಮಾರ್ ಯಾದವ್ (Suryakumar Yadav) ಅವರು T20 ಸರಣಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ ಎಂದು ಹೇಳಬಹುದು. ಹಾಗಾಗಿ ಇವರು ಫಿಲ್ಡ್ ನಲ್ಲಿ ಶ್ರೇಷ್ಠ ಸ್ಥಾನ ಹೊಂದಿದ್ದರೆ ಎನ್ನಬಹುದು. ಮುಂಬೈ ತಂಡದ ಮೂಲಕ IPL ಲಗ್ಗೆ ಇಟ್ಟಾಗ ಎರಡು ಬಾರಿ ಚಾಂಪಿಯನ್ ಶಿಪ್ ಪಡೆಯಲು ಇವರು ಮುಖ್ಯ ಪಾತ್ರ ವಹಿಸಿದ್ದಾರೆ. ಕೋಲ್ಕತಾ ತಂಡದಲ್ಲಿ ಇದ್ದಾಗ ಕೂಡ ಚಾಂಪಿಯನ್ ಪಟ್ಟದ ಜೊತೆಗೆ ಇತರ ಪ್ರಶಸ್ತಿಯನ್ನು ಪಡೆದಿದ್ದಾರೆ. ಸೂರ್ಯ ಕುಮಾರ್ ಯಾದವ್ ಅವರು T20 ಸರಣಿಯಲ್ಲಿ 189 ಇನ್ನಿಂಗ್ಸ್ ನಲ್ಲಿ 4724 ರನ್ ಅನ್ನು ಸಹ ಗಳಿಸಿದ್ದಾರೆ.

ಆಸ್ತಿ ಎಷ್ಟು ಇದೆ?

 

Image Source: IndiaTimes

 

ಸೂರ್ಯ ಕುಮಾರ್ ಯಾದವ್ ಬಳಿ ಎಷ್ಟು ಆಸ್ತಿ ಇರಬಹುದು ಎಂಬ ಬಗ್ಗೆ ಎಲ್ಲೆಡೆ ವೈರಲ್ ಆಗುತ್ತಿದೆ.ಇವರಿಗೆ BCCI ವಾರ್ಷಿಕ ವೇತನ 3ಕೋಟಿ ರೂಪಾಯಿ, IPL ಪ್ರತಿ ಸೀಸನ್ ಗೆ 8ಕೋಟಿ ರೂಪಾಯಿ, ಅದರ ಜೊತೆಗೆ ಜಾಹಿರಾತು , ಓಪನಿಂಗ್ ಸೇರಿದಂತೆ ವಿವಿಧ ಮೂಲದಿಂದ ಸೂರ್ಯ ಕುಮಾರ್ ಯಾದವ್ ಅವರಿಗೆ ಆದಾಯ ಸಿಗಲಿದೆ. ಸೂರ್ಯ ಕುಮಾರ್ ಯಾದವ್ (Suryakumar Yadav) ಅವರ ನಿವ್ವಳ ಆಸ್ತಿ ಮೌಲ್ಯ 45-50 ಕೋಟಿ ರೂಪಾಯಿ, ಇವರ ಬಳಿ ಮರ್ಸಿಡಿಎಸ್ ಕಾರು ಇದೆ ಅದರ ಬೆಲೆ 2.15 ಕೋಟಿ ರೂಪಾಯಿ, ನಿಸ್ಸನ್ ಜೊಂಗಾ ಕಾರು 15 ಲಕ್ಷ, ಹಾಗೂ ರೇಂಜ್ ರೋವರ್ 90ಲಕ್ಷ, BMW RD ಕಾರು ಇದೆ. ಅದರೊಂದಿಗೆ ಮುಂಬೈ ನಲ್ಲಿ ಐಷಾರಾಮಿ ಬಂಗಲೆಯನ್ನು ಸಹ ಕೂಡ ಹೊಂದಿದ್ದಾರೆ.

advertisement

Leave A Reply

Your email address will not be published.