Karnataka Times
Trending Stories, Viral News, Gossips & Everything in Kannada

Mobile Tips: ಮೊಬೈಲ್ ಹಿಂದೆ ಹಣ ಇಟ್ಟುಕೊಳ್ಳುವವರು ಕೂಡಲೇ ಈ ಮಾಹಿತಿ ತಪ್ಪದೆ ಓದಿ

advertisement

ಇಂದು ಮೊಬೈಲ್ ಹೊಂದಿಲ್ಲದೆ ಇದ್ದವರ ಸಂಖ್ಯೆ ತೀರ ಕಡಿಮೆ ಇದೆ ಎಂದು ಹೇಳಬಹುದು. ಒಬ್ಬೊಬ್ಬರ ಕೈಯಲ್ಲಿ ನಾಲ್ಕೈದು ಮೊಬೈಲ್ ಫೋನ್ ಇರುವುದನ್ನು ಸಹ ನಾವು ಈಗ ಕಾಣುತ್ತೇವೆ. ಮೊಬೈಲ್ ಫೋನ್ (Mobile Phone) ಬಳಕೆ ಮಾಡುವವರ ಸಂಖ್ಯೆ ಹೆಚ್ಚಾದಂತೆ ಹೊಸ ಹೊಸ ಬ್ರ್ಯಾಂಡ್ ಫೋನ್ ಕೂಡ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಈ ಹೊಸ ಬ್ರ್ಯಾಂಡ್ ಎಷ್ಟೇ ಬಂದರೂ ಅದರ ಹಿಂಬದಿಯಲ್ಲಿ ಹಣ ಇಡುವವರು ಅದರ ಬ್ರ್ಯಾಂಡ್ ಕಾಣದಂತೆ ಕೂಡ ಮಾಡಿ ಬಿಡುತ್ತಾರೆ.

WhatsApp Join Now
Telegram Join Now

ನಾವು ಮೊಬೈಲ್ ಫೋನ್ ಮೂಲಕ ಹಣವನ್ನು ವರ್ಗಾಯಿಸುವುದು ಸುಲಭ ಹಾಗಿದ್ದರೂ ಎಷ್ಟೊ ಸಲ ನೆಟ್ವರ್ಕ್ ಸಮಸ್ಯೆ, ಹಣಕಾಸಿನ ವರ್ಗಾವಣೆ ಕೆಲ ತಾಂತ್ರಿಕ ಸಮಸ್ಯೆ ಇತ್ಯಾದಿಗಳು ಬಂದಾಗ ತುರ್ತು ಸಂದರ್ಭಕ್ಕೆ ಎಟಿಎಂ ಕಾರ್ಡ್ (ATM Card), ಕ್ರೆಡಿಟ್ ಕಾರ್ಡ್ (Credit Card) ಹೊಂದಿರಬೇಕು. ಇದು ಬಹಳ ಕಷ್ಟ ಹಾಗಾಗಿ ಅನೇಕ ಜನರು ತಮ್ಮ ಮೊಬೈಲ್ ಪೌಚ್ ನ ಹಿಂಭಾಗದಲ್ಲಿ ಕ್ಯಾಶ್ ಅಥವಾ ಕಾರ್ಡ್ ಇಡುವ ಸಾಧ್ಯತೆ ಇದೆ ಆದರೆ ನೀವು ಹೀಗೆ ಮಾಡಿದರೆ ಅಪಾಯ ಆಗುವ ಸಾಧ್ಯತೆ ಸಹ ಇದೆ.

ಬಹಳ ಅಪಾಯಕಾರಿ:

ಅನೇಕ ಜನರು ಎಟಿಎಂ, ಬಸ್ ಪಾಸ್, ಹಣ, ಚಿಲ್ಲರೆ, ಟಿಕೆಟ್, ಸಣ್ಣ ಕೀ ಎಲ್ಲವನ್ನು ಮೊಬೈಲ್ ಪೌಚ್ (Mobile Cover) ನ ಹಿಂಭಾಗಕ್ಕೆ ಹಾಕುತ್ತಾರೆ ಇದು ನೀವು ಕೂಡ ಮಾಡಿದರೆ ಇಂದೆ ಈ ಹವ್ಯಾಸ ನಿಲ್ಲಿಸಿ ಇಲ್ಲವಾದರೆ ಅಪಾಯ ಎದುರಿಸಬೇಕಾಗಿ ಬರಲಿದೆ. ನಿಮ್ಮ ಫೋನ್ ಆಗಾಗ ಬಿಸಿ ಆಗುತ್ತಲಿದ್ದರೆ ಆಗ ಅದಕ್ಕೆ ಇಂತಹ ಕಾಗದ ಮತ್ತು ಪ್ಲಾಸ್ಟಿಕ್ ಅಂಶಗಳು ಬೆಂಕಿ ಉತ್ಪಾದನೆ ಮಾಡಲು ಸಹಕರಿಸಲಿದ್ದು ಮೊಬೈಲ್ ಸ್ಫೋಟ ಆಗುವ ಸಾಧ್ಯತೆ ಇರುತ್ತದೆ.

 

advertisement

Image Source: Arya TV

ಫೋನ್ ಬಳಕೆ ಅಧಿಕ:

ನೀವು ನಿಮ್ಮ ಫೋನ್ ಅನ್ನು ಅತಿಯಾಗಿ ಬಳಕೆ ಮಾಡುವಾಗ ಅದರ ಬ್ಯಾಟರಿ ಡೆಡ್ ಎಂಡ್ ಗೆ ಬಂದು ತಲುಪಲಿದೆ ಆಗ ಮತ್ತೆ ಅದು ರಿಕವರಿ ಆಗಲು ಸಮಯ ಸಹ ಬೇಕಾಗಲಿದೆ. ಅತಿಯಾಗಿ ಫೋನ್ ಬಳಸಿದರೆ ಚಾರ್ಜ್ ಖಾಲಿ ಆಗುವ ಜೊತೆಗೆ ಮೊಬೈಲ್ ಹೀಟ್ ಸಹ ಆಗುತ್ತದೆ. ಬ್ಯಾಟರಿಯಿಂದ ಫೋನ್ ಬಿಸಿ ಆದರೆ ಸ್ಫೋಟ ಆಗುವ ಸಾಧ್ಯತೆ ಹೆಚ್ಚು. ಹಾಗಾಗಿ ಅಂತಹ ಸಂದರ್ಭದಲ್ಲಿ ಫೋನ್ ಹಿಂದುಗಡೆ ಬೆಂಕಿ ಪ್ರಚೋದಿಸುವ ವಸ್ತುಗಳನ್ನು ಇಡುವುದು ಅಪಾಯಕಾರಿ ಆಗಿದೆ. ಹಾಗಾಗಿ ಈ ಹವ್ಯಾಸ ಕೂಡಲೇ ಬದಲಾಯಿಸಿರಿ.

ಈ ಸಲಹೆ ಪಾಲಿಸಿ

  • ಫೋನ್ ನನ್ನು ಚಾರ್ಜ್ ಇಟ್ಟು ಬಳಕೆ ಮಾಡುವುದು ಅಪಾಯಕಾರಿ ಆಗಿದೆ.
  • ಅತಿಯಾಗಿ ಫೋನ್ ಬಿಸಿ ಯಾದರೆ 10 ನಿಮಿಷದ ತನಕ ಏರೋಪ್ಲೇನ್ ಮೂಡ್ ಅಥವಾ ಡಾಡಾ ಆಫ್ ಮಾಡಿ ಬದಿಗೆ ಇರಿಸಿ ಮತ್ತರ ಬಳಕೆ ಮಾಡಿ.
  • ಫೋನ್ ಹಿಂಭಾಗದಲ್ಲಿ ಹಣ , ಟಿಕೆಟ್, ಬಸ್ ಪಾಸ್ ಇಡಬೇಡಿ ಅದು ಕೂಡ ಅಪಾಯಕಾರಿ ಆಗಿದೆ.
  • ಫೋನ್ ನಲ್ಲೊ ಅನಗತ್ಯ ಆ್ಯಪ್ ಬಳಕೆ ಮಾಡುವುದು ನಿಮ್ಮ ಫೋನ್ ಸಿಸ್ಟಂ ಹಾಳಾಗುವ ಸಾಧ್ಯತೆ ಇದೆ.
  • ಫೋನ್ ನಲ್ಲಿ ಕವರ್ ಬಳಕೆ ಮಾಡುವಾಗ ಸೂರ್ಯನ ತಾಪಮಾನ ಹೀರುವ ಕಪ್ಪು ಬಣ್ಣ ಆಯ್ಕೆ ಮಾಡದಿರಿ. ಬಿಳಿ, ಇತರ ಕಲರ್ ಫುಲ್ ಪೌಚ್ ಬಳಸಬಹುದು.
  • ಫೋನ್ ಗೆ ತುಂಬಾ ಟೈಟ್ ಆಗುವ ಕವರ್ ಬಳಕೆ ಅಪಾಯಕಾರಿ ಆಗಿದೆ ಈ ಬಗ್ಗೆ ಮೊದಲೇ ಗಮನಿಸಿ.
  • ಹೆಚ್ಚಾಗಿ ಕಂಪೆನಿಯ ಪೌಚ್ ಬಳಸುವುದು ಬಹಳ ಉತ್ತಮ ವಿಧಾನ ಕೂಡ ಆಗಿದೆ.

advertisement

Leave A Reply

Your email address will not be published.