Karnataka Times
Trending Stories, Viral News, Gossips & Everything in Kannada

SIM cards: ನೂತನ ಸರ್ಕಾರದ ಹೊಸ ಆದೇಶ! 2 ಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಬಳಸುವವರಿಗೆ ಹೊಸ ಸೂಚನೆ

advertisement

How many SIM cards are allowed per person in India?: ಇಂದು ಈ ಆಧುನಿಕ ಯುಗದಲ್ಲಿ ಮೊಬೈಲ್ ಅನ್ನೋದು ಅತೀ ಅಗತ್ಯ ವಾದ ವಸ್ತು ವಾಗಿದ್ದು ಇದರ ಉಪಯೋಗ ಬಹಳಷ್ಟು ಇರಲಿದೆ ಎಂದು ಹೇಳಬಹುದು.ಹೌದು ವ್ಯಕ್ತಿ ಸಂವಹನ ದಿಂದ ಹಿಡಿದು ಮಾಹಿತಿ ರವಾನೆ, ಹಣ ಡೆಬೆಟ್, ಹಣ ಕ್ರೆಡಿಟ್ ಇತ್ಯಾದಿ ಹಲವು ಕೆಲಸಗಳಿಗೆ ಮೊಬೈಲ್ ಅನ್ನೇ ಅವಲಂಭಿತ ವಾಗಿದೆ. ಈ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬಹಳಷ್ಟು ಅವಶ್ಯಕ ವಾಗಿರಲಿದ್ದು ಇದಕ್ಕೆ ಸರಿ ಹೊಂದುವ ಸಿಮ್ ಕೂಡ ಅಗತ್ಯ ವಾಗಿ ಬೇಕಾಗಿದೆ.ಇಂದು ಮೊಬೈಲ್‌ ಚೆಂಜ್ ಮಾಡುವುದು, ಮೊಬೈಲ್‌ ನಂಬರ್‌ ಚೆಂಜ್ ಮಾಡುವುದು ಸಾಮಾನ್ಯ ವಾಗಿದ್ದು ನಿಮ್ಮ ಹೆಸರಿನಲ್ಲಿ ನೀವು ಎಷ್ಟು ಸಿಮ್ ಮಾಡಬಹುದು ಎಂಬ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಸಿಮ್ ವಂಚನೆ ಹೆಚ್ಚಳ
ಇಂದು ಸಿಮ್ ಮೂಲಕ ಮೋಸ ವಂಚನೆಗಳು ಬಹಳಷ್ಟು ಹೆಚ್ಚಾಗಿದೆ.ಇದಕ್ಕಾಗಿ ಸಿಮ್ ಖರೀದಿಗೂ ಸರಕಾರ ಹೊಸ ನಿಯಮ‌ ಜಾರಿಗೆ ತಂದಿದೆ. ಇಂದು ಇತರರ ಹೆಸರಿನಲ್ಲಿ ಸಿಮ್ ತೆರೆದು ಮೋಸ ಮಾಡಿದ ಪ್ರಕರಣ ತಿಳಿದು ಬಂದಿದ್ದು ಹೀಗಾಗಿ ಅಸ್ತಿತ್ವದಲ್ಲಿರುವ ಫೋನ್ ಸಂಖ್ಯೆಗಳಿಗೆ ಸಿಮ್ ಕಾರ್ಡ್‌ಗಳನ್ನು ಖರೀದಿಸುವಾಗ ತಮ್ಮ ಆಧಾರ್ ಮತ್ತು ಡೇಟ್‌ ಆಫ್‌ ಬರ್ತ್‌ ಮಾಹಿತಿಯನ್ನು ನೀಡಬೇಕಾಗುತ್ತದೆ.ಹಾಗೆಯೇ ಸಾಮಾನ್ಯ ಬಳಕೆದಾರರು ಒಂದು ಐಡಿಯಲ್ಲಿ 9 ಸಿಮ್ ಕಾರ್ಡ್‌ಗಳನ್ನು ಮಾತ್ರ ಪಡೆಯಬಹುದಾಗಿದ್ದು SIM ಕಾರ್ಡ್‌ನ ಬಳಕೆಯನ್ನು ನಿಲ್ಲಿಸಿದ 90 ದಿನಗಳ ಸಮಯದ ನಂತರ ಮಾತ್ರವಷ್ಟೇ ಅದೇ ಸಂಖ್ಯೆಯು ಇನ್ನೊಬ್ಬ ವ್ಯಕ್ತಿಗೆ ಅನ್ವಯಿಸುತ್ತದೆ.

Image Source: Prune.co.in

advertisement

ಹಳೆಯ ಸಿಮ್ ಬಳಕೆ ಬಗ್ಗೆ ಎಚ್ಚರ
ಕೆಲವೊಮ್ಮೆ ನಾವುಹಳೆಯ ಸಿಮ್ ಗಳ ಬಗ್ಗೆ ಕ್ಯಾರೇ ಮಾಡುವುದಿಲ್ಲ. ಹೊಸ ಸಿಮ್ ಮಾಡಿದ ನಂತರ ಹಳೆಯ ಸಿಮ್ ನಂಬರ್‌ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನಾವು ಬಳಸಿದ ಸಿಮ್, ಈಗ ಬೇರೆ ವ್ಯಕ್ತಿ ಬಳಸುತ್ತಿದ್ದು, ಆತ ಏನಾದ್ರೂ ನಮ್ಮ ಮಾಹಿತಿ ಬಳಸಿಕೊಂಡರೆ ನಮಗೆ ತೊಂದರೆ ಯಾಗಲಿದೆ.ಇದಕ್ಕಾಗಿ ನೀವು ಎಚ್ಚರಿಕೆ ವಹಿಸುವುದು ಕೂಡ ಬಹಳ ಮುಖ್ಯ ವಾಗಲಿದೆ. ಇದಕ್ಕಾಗಿ ಸರಕಾರ ನಿಮಗೆ ಹೊಸ ಅವಕಾಶ ಮಾಡಿಕೊಟ್ಟಿದ್ದು ನಿಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಿಮ್ ,ನಂಬರ್‌ ಗಳಿವೆ ಎಂದು ಪರಿಶೀಲಿಸಬಹುದು. ನಿಮ್ಮ ನಂಬರ್ ಆಕ್ಟಿವ್ ಇದ್ದರೆ ಅದನ್ನು ತಿಳಿಯಲು ಸಹ ಸರ್ಕಾರ ಅವಕಾಶ ಕಲ್ಪಿಸಿದೆ.

ಹೀಗೆ ಮಾಡಿ
ಮೊದಲಿಗೆ ನೀವು Sancharsaathi.gov.in ಈ ಲಿಂಕ್ ಗೆ ಭೇಟಿ ನೀಡಿ, ಇದರಲ್ಲಿ Know your mobile connection ಆಪ್ಚನ್ ಬರಲಿದ್ದು ಇಲ್ಲಿ ನಿಮ್ಮ ಹೆಸರಿನಲ್ಲಿ ಇರುವ ಮೊಬೈಲ್ ನಂಬರ್‌ಗಳನ್ನು ಹಾಕಿ. ನಂತರ ಕ್ಯಾಪ್ಚಾ ಕೋಡ್ ಹಾಕಿ. ಬಳಿಕ ನಿಮ್ಮ ಸಂಖ್ಯೆಗೆ ಬರುವ OTP ಯನ್ನು ನಮೂದಿಸಿ ಲಾಗಿನ್ ಆಗಬಹುದು.ಇಲ್ಲಿ ನಿಮ್ಮದಲ್ಲದ ಮೊಬೈಲ್ ಸಂಖ್ಯೆಯ ಮುಂದೆ ಮಾರ್ಕ್ ಮಾಡಿದರೆ ಆಯಿತು.ನಂತರ Not My Number ಅಥವಾ Not Required ಎಂಬ ಆಪ್ಚನ್ ಮೇಲೆ ಕ್ಲಿಕ್ ಮಾಡಿ ರಿಪೋರ್ಟ್ ಕೊಡಿ.ಇನ್ನೂ ರಿಪೋರ್ಟ್ ಮಾಡಲಾದ ಮೊಬೈಲ್ ನಂಬರ್ ಗಳನ್ನು ರಿ ವೇರಿಫಿಕೇಷನ್ ಮಾಡಿ ಬಳಿಕ‌ ದೂರ ಸಂಪರ್ಕ ಇಲಾಖೆಯು ಈ ಬಗ್ಗೆ ಸೂಕ್ತ ಕ್ರಮ ತೆಗೆದು ಕೊಳ್ಳಲಿದೆ.

Image Source: NDTV

advertisement

Leave A Reply

Your email address will not be published.