Karnataka Times
Trending Stories, Viral News, Gossips & Everything in Kannada

BSNL Plans: ಕೇವಲ 6 ರೂಪಾಯಿ ಖರ್ಚಿನಲ್ಲಿ 395 ದಿನಗಳ ರಿಚಾರ್ಜ್ ಘೋಷಿಸಿದ BSNL ! ಅಂಬಾನಿಗೆ ಆತಂಕ

advertisement

ಏರ್ಟೆಲ್, ಜಿಯೋ ಹಾಗೂ ವೊಡಾಫೋನ್ನಂತ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಅತಿ ಕಡಿಮೆ ದರದಲ್ಲಿ ಗ್ರಾಹಕರಿಗೆ ರೀಚಾರ್ಜ್ ಪ್ಲಾನನ್ನು ಒದಗಿಸುವಂತಹ ಬಿಎಸ್ಎನ್ಎಲ್ ಕಂಪನಿಯು(BSNL Company) ಸದ್ಯ ವೇಗವಾಗಿ ಬೆಳೆಯುತ್ತಿರುವ ಟೆಲಿಕಾಂ ಕಂಪನಿಯಾಗಿದೆ. ಅತಿ ಕಡಿಮೆ ದರದಲ್ಲಿ ಎಲ್ಲಾ ರೀತಿಯ ಪ್ಲಾನ್ ಗಳನ್ನು ಬಳಕೆದಾರರಿಗೆ ಒದಗಿಸುವ ಭಾರತ ಸಂಚಾರ ನಿಗಮ್ ಲಿಮಿಟೆಡ್ ಆಗಾಗ ಅತ್ಯಾಕರ್ಷಕ ಕೊಡುಗೆಗಳನ್ನು(Amazing Offer) ನೀಡುವ ಮೂಲಕ ತನ್ನ ಗ್ರಾಹಕರ ಹರುಷವನ್ನು ಮತ್ತಷ್ಟು ಹೆಚ್ಚಿಸುತ್ತಿರುತ್ತಾರೆ. ಹೀಗಿರುವಾಗ ಅನಿಯಮಿತ ಕರೆ ಹಾಗೂ ಡೇಟಾ ಸೌಲಭ್ಯ(Unlimited Calls And Data)ವನ್ನು ನೀಡುವ ಸಲುವಾಗಿ ಬಿಎಸ್ಎನ್ಎಲ್ 395 ದಿನಗಳ ವಿಶೇಷ ಪ್ಲಾನ್ ಒಂದನ್ನು ಬಿಡುಗಡೆ ಮಾಡಿದ್ದಾರೆ.

WhatsApp Join Now
Telegram Join Now

395 ದಿನಗಳ ಪ್ರಿಪೇಯ್ಡ್ ಪ್ಲಾನ್ ದಿನಕ್ಕೆ ಕೇವಲ 6 ರೂಪಾಯಿ

ಬಿಎಸ್ಎನ್ಎಲ್ ದೀರ್ಘಾವಧಿ ಮಾನ್ಯತೆಯನ್ನು ಪಡೆದಿರುವ ಸಾಕಷ್ಟು ರಿಚಾರ್ಜ್ ಪ್ಲಾನ್ ಗಳನ್ನು ಗ್ರಾಹಕರಿಗೆ ನೀಡಿದೆ ಆದರೆ ಈ 395 ದಿನಗಳ ಪ್ಲಾನ್ ನಿಂದ ಬಳಕೆದಾರರು ಅನಿಯಮಿತ ಕರೆ ಸೌಲಭ್ಯ, ಡೇಟಾ ವ್ಯವಸ್ಥೆಯನ್ನು ಪಡೆಯಬಹುದು.

₹2399 ರೂಗಳಿಗೆ ದೊರಕುವಾ ರಿಚಾರ್ಜ್ ಪ್ಲಾನ್ ಇದಾಗಿದ್ದು, ಇದರಲ್ಲಿ ಉಚಿತ ರಾಷ್ಟ್ರೀಯ Roaming  ಸೌಲಭ್ಯ(National Roaming Facility), ಪ್ರತಿದಿನ 2GB Data  100 SMS ಸಂದೇಶಗಳು ಹಾಗೂ ಅನಿಯಮಿತ ಕರೆ ಸೌಲಭ್ಯವನ್ನು ಒದಗಿಸಿಕೊಡುತ್ತದೆ. ಇನ್ನು ಪ್ರತಿದಿನಕ್ಕೆ 6 ರು ವೆಚ್ಚದಲ್ಲಿ ಈ ಪ್ಲಾನ್ ನಿಮ್ಮದಾಗಲಿದೆ.

Image Source: India TV News

advertisement

ಏರ್ಟೆಲ್ ಜೊತೆಗೆ ನೇರ ಪೈಪೋಟಿಗೆ ನಿಂತ BSNL

ಬಿಎಸ್ಎನ್ಎಲ್ ನ ಸಾಕಷ್ಟು ರಿಚಾರ್ಜ್ ಪ್ಲಾನ್(BSNL recharge plan) ಗಳು ಏರ್ಟೆಲ್ ಟೆಲಿಕಾಂ ಕಂಪನಿಗೆ ಸೆಡ್ ಹೊಡೆಯುವಂತಿದ್ದು, ಅದಕ್ಕಿಂತ ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಪ್ಲಾನ್ ಗಳನ್ನು ಅಳವಡಿಕೆ ಮಾಡಿ ಬಿಎಸ್ಎನ್ಎಲ್ ಕಂಪನಿ ಗ್ರಾಹಕರನ್ನು ಸೆಳೆಯುವಲ್ಲಿ ಮುಂದಿದೆ.

ಸದ್ಯದಲ್ಲೇ BSNL 4G ಹಾಗೂ 5G ಸೇವೆಗಳು ಪ್ರಾರಂಭ!

ಬಿಎಸ್ಎನ್ಎಲ್ ಭಾರತದ ಅತ್ಯಂತ ಹಳೆಯ ಮತ್ತು ಸರ್ಕಾರಿ ಟೆಲಿಕಾಂ ಕಂಪನಿ ಇದಾಗಿದ್ದು, ಗ್ರಾಹಕರಿಗೆ 4G & 5G ಸೇವೆಗಳನ್ನು ಒದಗಿಸಿಕೊಡಲು ಸಾಕಷ್ಟು ಹೂಡಿಕೆ ಮೂಲಕ ಏರ್ಟೆಲ್ ಹಾಗೂ ಜಿಯೋ ಗೆ ಪೈಪೋಟಿಗಳಿದಿದೆ. ಮೂಲಗಳ ಮಾಹಿತಿಯ ಪ್ರಕಾರ, ಬಿಎಸ್ಎನ್ಎಲ್ ಟೆಲಿಕಾಂ ಕಂಪನಿಯು ಕಳೆದ ಕೆಲವು ತಿಂಗಳ ಹಿಂದಷ್ಟೇ ತನ್ನ ನೆಟ್ವರ್ಕ್ ಸೇವೆಗಳನ್ನು ಹಾಗೂ ಟವರನ್ನು ಅಪ್ಗ್ರೇಡ್ ಮಾಡುವ ಸಲುವಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದು, ಇದರಿಂದ ಆಗಸ್ಟ್ ತಿಂಗಳ ವೇಳೆಗೆ ಬಿಎಸ್ಎನ್ಎಲ್ 4G ಸೇವೆಯನ್ನು ಮರುಸ್ಥಾಪಿಸಬಹುದೆಂಬ ಮಾಹಿತಿ ಇದೆ.

Image Source: Gadgets 360

ಪಂಜಾಬ್ ಹಾಗೂ ದಕ್ಷಿಣ ಭಾರತದ ಪ್ರದೇಶಗಳಲ್ಲಿ ಈಗಾಗಲೇ ಬಿಎಸ್ಎನ್ಎಲ್ ಕಂಪನಿಯ ಪ್ರಾಯೋಗಿಕವಾಗಿ 4G ಸೇವೆಗಳನ್ನು ಪ್ರಾರಂಭ ಮಾಡಿದ್ದು, ಯಾವುದೇ ನೆಟ್ವರ್ಕ್ ಸಮಸ್ಯೆ ಇಲ್ಲದೆ ಅಲ್ಲಿನ ಜನರು ಬಿಎಸ್ಎನ್ಎಲ್ ಸಿಮ್ ಗಳನ್ನು ಉಪಯೋಗಿಸಲು ಪ್ರಾರಂಭಿಸಿದ್ದಾರೆ ಇದರೊಂದಿಗೆ ಅಗ್ಗದ ಬೆಲೆಯ ರಿಚಾರ್ಜ್ ಪ್ಲಾನ್ಗಳನ್ನು ನೀಡುವ ಮೂಲಕ ಬಳಕೆದಾರರನ್ನು ಸೆಳೆಯಲು ಮುಂದಾಗಿರುವ ಬಿಎಸ್ಎನ್ಎಲ್ ಇತ್ತೀಚಿಗಷ್ಟೇ ಹೊಸ ಹೊಸ ಪ್ಲಾನ್ ಗಳನ್ನು ಅಳವಡಿಕೆ ಮಾಡಿದೆ.

advertisement

Leave A Reply

Your email address will not be published.