Karnataka Times
Trending Stories, Viral News, Gossips & Everything in Kannada

DoCA: 10 ವರ್ಷಗಳ ಬಳಿಕ ಬಂತು ಹೊಸ ರೂಲ್ಸ್! ದೇಶಾದ್ಯಂತ ಮೊಬೈಲ್ ಇದ್ದವರಿಗೆ ಗುಡ್ ನ್ಯೂಸ್

advertisement

Telecom Regulatory Authority of India (TRAI): ವೈಯಕ್ತಿಕ ಸಾಲ ಬೇಕಾ, ಈ ಪ್ರಾಡೆಕ್ಟ್ ಅತ್ಯುತ್ತಮವಾಗಿದೆ, ಆಫರ್ ನಲ್ಲಿ ಪ್ರಾಡೆಕ್ಟ್ ಸಿಗುತ್ತದೆ ಎಂದು ದಿನನಿತ್ಯ ಮೊಬೈಲ್ ನಲ್ಲಿ ಕರೆ ಬರುವಾಗ ಕಿರಿ ಕಿರಿ ಅನುಭವ ಆಗಲಿದೆ. ಆದರೆ ಇಂತಹ ಅನಗತ್ಯ ಕರೆಗಳನ್ನು ನಿಗ್ರಹಿಸುವ ಸಲುವಾಗಿ ಕೇಂದ್ರ ಸರಕಾರ ಹೊಸ ಕ್ರಮ ಜಾರಿಗೆ ತರಲು ಮುಂದಾಗುತ್ತಿದ್ದು ಇದರಿಂದಾಗಿ ಮೊಬೈಲ್ ಬಳಕೆದಾರರಿಗೆ ಬಿಗ್ ರಿಲೀಫ್ ಸಿಗುತ್ತದೆ ಎಂದು ಹೇಳಬಹುದು. ಕ್ರೆಡಿಟ್ ಕಾರ್ಡ್,ಸಾಲ ಸೌಲಭ್ಯ, ಪ್ರಾಡೆಕ್ಟ್ ಕಾಲ್ ನಿಂದ ಜನರಿಗೆ ಆಗುವ ತೊಂದರೆ ನಿವಾರಿಸುವ ಸಲುವಾಗಿ ಗ್ರಾಹಕ ವ್ಯವಹಾರಗಳ ಸಚಿವಾಲಯವು ಒಂದು ಕರಡನ್ನು ಸಿದ್ಧಪಡಿಸಿದೆ.

WhatsApp Join Now
Telegram Join Now

ಗ್ರಾಹಕ ವ್ಯವಹಾರಗಳ ಸಚಿವಾಲಯವು ಮೊಬೈಲ್ ಗೆ ಕ್ರೆಡಿಟ್ ಕಾರ್ಡ್, ಸಾಲ ಇತರ ಕರೆಗಳು ಬರುವುದು ಮಾರಾಟಕ್ಕೆ ಸಂಬಂಧ ಪಟ್ಟ ಕರೆ, ವ್ಯಾಪಾರ್ ಪ್ರಚಾರ ಮಾಡುವುದು ಎಲ್ಲವೂ ಕೂಡ ಅನಗತ್ಯ ವ್ಯವಹಾರ ಎಂದು ಪರಿಗಣಿಸಲು ಸಚಿವಾಲಯ ನಿರ್ಧಾರ ಕೈಗೊಂಡಿದೆ. ಈ ಮೂಲಕ ಖಾಸಗಿ ಸಂಸ್ಥೆಗಳಿಂದ ಬರುವ ಅನಪೇಕ್ಷಿತ ಕರೆ ನಿಯಂತ್ರಣ ಮಾಡುವ ಒಂದು ಗುರಿ ಹೊಂದಿದೆ ಎನ್ನಬಹುದು. ಹಾಗಾಗಿ ಇನ್ನು ಮುಂದೆ ಅನಗತ್ಯ ಕರೆಗಳ ಕಾಟ ಇರಲಾರದು ಎನ್ನಬಹುದು.

No more unwanted loan, credit card calls; government working on new guidelines
Image Source: vipmobilenumbers.co.uk

advertisement

ವೈಯಕ್ತಿಕ ಕರೆ ನಿಯಮ
ಈ ಬಗ್ಗೆ ಸೂಚನೆ ನೀಡಿದ್ದ ಗ್ರಾಹಕ ವ್ಯವಹಾರಗಳ ಸಚಿವಾಲಯವು ವಸ್ತುಗಳ ಪ್ರಚಾರ , ಮಾರಾಟ ಇತರ ಉದ್ದೇಶಕ್ಕೆ ಕೊಳ್ಳಲು ಪ್ರೋತ್ಸಾಹಿಸುವುದು ಅವುಗಳೆಲ್ಲ ವ್ಯವಹಾರಿಕ ಕರೆ ಎಂದು ಪರಿಗಣಿಸಲಾಗುವುದು ಇವುಗಳಲ್ಲಿ ಯಾವುದೇ ವೈಯಕ್ತಿಕ ಕರೆಗಳು ಎಂಬುದು ಇರಲಾರದು. ಗ್ರಾಹಕರನ್ನು ತಮ್ಮ ಉದ್ದೇಶಕ್ಕಾಗಿ ಇಂತ ಕರೆಗಳು ಬಳಸಿ ಉತ್ತೇಜನೆ ಮಾಡಲಾಗುವುದು. ಹಾಗಾಗಿ ವ್ಯವಹಾರ ಸಂವಹನಕ್ಕೆ ನಿರ್ಬಂಧ ಇರಲಿದ್ದು ವೈಯಕ್ತಿಕ ಸಂವಹನಕ್ಕೆ ಯಾವುದೇ ನಿರ್ಬಂಧ ಇರಲಾರದು ಎಂದು ತಿಳಿಸಿದೆ.

ವ್ಯಕ್ತಿ ಹಾಗೂ ಕಂಪೆನಿ ಜವಾಬ್ದಾರಿ
ಈ ಬಗ್ಗೆ ಸಾರ್ವಜನಿಕರಿಂದ ಕೂಡ ಸಲಹೆ ಸೂಚನೆ ಪಡೆಯಲಾಗುವುದು. ಗ್ರಾಹಕರಿಗೆ ಕರೆ ಮಾಡಿದ್ದ ವ್ಯವಹಾರಿಕ ಕರೆಗಳಿಗೆ ಸಂಬಂಧ ಪಟ್ಟ ವ್ಯಕ್ತಿ ಮತ್ತು ಕಂಪೆನಿ ಜವಾಬ್ದಾರಯುತವಾಗಲಿದೆ. ಇಂತಹ ಕರೆ ಮಾಡುವಾಗ ಗ್ರಾಹಕರ ಸಚಿವಾಲಯದಲ್ಲಿ ನೋಂದಣಿ ಮಾಡಬೇಕು ನೋಂದಣಿ ಮಾಡದೆ ಕರೆ ಮಾಡಿದರೆ ಸರಕಾರದ ನಿಯಮ ಉಲ್ಲಂಘನೆ ಮಾಡಿದ್ದ ಅನಪೇಕ್ಷಿತ ಕರೆ ಎಂದು ಪರಿಗಣಿಸುವುದಾಗಿ ಗ್ರಾಹಕರ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

No more unwanted loan, credit card calls; government working on new guidelines
Image Source: TechStory

ಒಟ್ಟಾರೆಯಾಗಿ ಇಂತಹ ಕರೆಗಳನ್ನು ಸಂಪೂರ್ಣ ಹತೋಟಿಗೆ ತರುವ ಮೂಲಕ ಗ್ರಾಹಕರನ್ನು ಎಚ್ಚರಿಸುವ ಹಾಗೂ ಅನಗತ್ಯವಾಗಿ ಮೋಸ ಹೋಗದಂತೆ ಗ್ರಾಹಕರನ್ನು ರಕ್ಚಿಸುವ ಗುರಿ ಹೊಂದಿದ್ದು ಇದಕ್ಕಾಗಿ ಟೆಲಿಕಾಂ ಮಾರ್ಕೆಟಿಂಗ್ ವ್ಯವಸ್ಥೆ ಮೇಲೆ ಕೂಡ ನಿಗಾ ಇಡಲು ಸಚಿವಾಲಯವು ನಿರ್ಧಾರ ಕೈಗೊಂಡಿದೆ ಎನ್ನಬಹುದು. ಹಾಗಾಗಿ ಅನಗತ್ಯ ಕರೆಗಳು ಇನ್ನು ಮುಂದೆ ಬರಲಾರದು ಒಂದು ವೇಳೆ ಬಂದರು ಅದು ಎಲ್ಲಿನ ಕರೆ ಎಂದು ಸ್ಕ್ರೀನ್ ಮೇಲೆ ಮೊದಲೇ ಕಾಣಲಿದೆ ಎಂದು ಈ ಮೂಲಕ ಕೂಡ ಹೇಳಬಹುದು.

advertisement

Leave A Reply

Your email address will not be published.