Karnataka Times
Trending Stories, Viral News, Gossips & Everything in Kannada

New SIM Card Rules: ಆಧಾರ್ ಪಾನ್ ಲಿಂಕ್ ಮುಗಿತು, ಇದೀಗ ಮತ್ತೊಂದು ಆದೇಶ ಕೊಟ್ಟ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಕ್ಕೂ ಅನ್ವಯ

advertisement

New SIM Card Rules: ಇತ್ತೀಚಿನ ದಿನಮಾನಗಳಲ್ಲಿ ಶಾಲೆಗೆ ಹೋಗುವ ಸಣ್ಣ ಮಕ್ಕಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಮೊಬೈಲ್ ಫೋನ್ ಗಳನ್ನು ಬಳಸುತ್ತಾರೆ, ಸ್ಮಾರ್ಟ್ ಫೋನ್(Smartphone) ಇಲ್ಲದೆ ಜೀವನ ಅಪೂರ್ಣ ಎಂಬ ಹಂತಕ್ಕೆ ನಾವೆಲ್ಲರೂ ತಲುಪಿದ್ದೇವೆ. ಜನರ ಜೀವನಶೈಲಿಯ ಅವಿಭಾಜ್ಯ ಅಂಗವಾಗಿ ಮಾರ್ಪಟ್ಟಿರುವ ಸ್ಮಾರ್ಟ್ ಫೋನ್ಗಳೆಂಬ ದೇಹಕ್ಕೆ ಸಿಮ್ ಎಂಬ ಆತ್ಮ ಬೇಕೇ ಬೇಕು.

WhatsApp Join Now
Telegram Join Now

ಎಂತಹ ಐಷಾರಾಮಿ ಮೊಬೈಲ್ ಫೋನ್ಗಳಾದರೂ ಕೂಡ ಸಿಮ್ ಇಲ್ಲದೆ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಹೀಗಾಗಿ ಲಕ್ಸುರಿ ಶೋರೂಮ್(luxury showroom) ಗಳಲ್ಲಿ ಮೊಬೈಲ್ ಖರೀದಿಸಿ ರಸ್ತೆಯಲ್ಲಿ ಸಿಮ್ ಗಳನ್ನು ಮಾರಾಟ ಮಾಡುವವರ ಬಳಿ ಅತಿ ಕಡಿಮೆ ದರಕ್ಕೆ ಬೇಕಾದಷ್ಟು ಸಿಮ್ ಗಳನ್ನು ಗ್ರಾಹಕರು ಖರೀದಿಸುತ್ತಿದ್ದಾರೆ. ಈ ಕುರಿತು ಟೆಲಿಕಾಂ ಕಂಪನಿಯು(telecom companies) ಹೊಸ ನಿರ್ಧಾರವನ್ನು ಕೈಗೊಂಡಿದ್ದು, ಈ ನಿಯಮವನ್ನು ಪಾಲನೆ ಮಾಡದೆ ಹೋದರೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ಎರಡು ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.

ಅಗತ್ಯಕ್ಕಿಂತ ಹೆಚ್ಚಿನ ಸಿಮ್ ಗಲಿದ್ದರೆ ಭಾರಿ ಮೊತ್ತದ ದಂಡ

ಕಳೆದ ವರ್ಷ 26ರಂದು, ಹೊಸ ಟೆಲಿಕಾಂ ಕಾಯ್ದೆ 2023(New Telecom Act 2023) ಜಾರಿಗೊಳ್ಳುತ್ತದೆ. ಇದರ ನಿಯಮದಂತೆ ಒಬ್ಬ ವ್ಯಕ್ತಿ ಒಂಬತ್ತು ಸಿಮ್ ಕಾರ್ಡ್ ಗಳಿಗಿಂತ ಹೆಚ್ಚಿನ ಸಿಮ್ ಕಾರ್ಡ್ಗಳನ್ನು ಖರೀದಿ ಮಾಡಿದರೆ ಘೋರವಾದ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಟೆಲಿಕಾಂ ಕಾಯ್ದೆ 2023ರ ಪ್ರಕಾರ ಒಬ್ಬ ವ್ಯಕ್ತಿ ಬರೋಬ್ಬರಿ 9 ತಿಂಗಳನ್ನು ಮಾತ್ರ ಖರೀದಿ ಮಾಡಲು ಸಾಧ್ಯ ಅದಕ್ಕಿಂತ ಹೆಚ್ಚಿನ ಸಿಮ್ ಗಳನ್ನು ಖರೀದಿ ಮಾಡಿದರೆ ಅದನ್ನು ಅಪರಾಧವೆಂದು ಪರಿಗಣಿಸಲಾಗುತ್ತದೆ ಹಾಗೂ 50,000 ಇಂದ ಎರಡು ಲಕ್ಷ ರೂಪಾಯಿ ದಂಡವನ್ನು ಪಾವತಿಸಬೇಕಾಗುತ್ತದೆ.

AADHAR SIM LINK
Image Source: Zee Business

advertisement

ಮೋಸದ ವಿಧಾನದಲ್ಲಿ ಸಿಮ್ ಖರೀದಿಸಿದರೆ 50 ಲಕ್ಷ ದಂಡ!

ಮೋಸದ ವಿಧಾನದಲ್ಲಿ ಸಿಮ್ ಖರೀದಿ ಮಾಡುವಂತಹ ವ್ಯಕ್ತಿಗೆ ಮೂರು ವರ್ಷಗಳ ಶಿಕ್ಷೆಯನ್ನು ವಿಧಿಸುವುದರ ಜೊತೆಗೆ 50 ಲಕ್ಷ ರೂಪಾಯಿಗಳವರೆಗೂ ದಂಡವನ್ನು ಹಾಕುತ್ತಾರೆ. ಹೀಗಾಗಿ ಉಚಿತವಾಗಿ ಸಿಮ್(Free SIM cards) ಗಳನ್ನು ನೀಡುತ್ತಾರೆ ಎಂದ ಮಾತ್ರಕ್ಕೆ ನಿಮ್ಮ ಆಧಾರ್ ಕಾರ್ಡ್ ಗಳನ್ನು ನೀಡಿ ಸಿಮ್ ಕಾರ್ಡ್ಗಳನ್ನು ಖರೀದಿಸಿ ಉಪಯೋಗಿಸಬೇಡಿ, ಮೊದಲಿಗೆ ಟೆಲಿಕಾಂ ಸಂಸ್ಥೆಯ ಹೊಸ ನೀತಿ ನಿಯಮಗಳ ಕುರಿತು ಮಾಹಿತಿ ತಿಳಿದು ಆನಂತರ ಸಿಮ್ ಕಾರ್ಡ್ಗಳನ್ನು ಖರೀದಿಸುವುದು ಉತ್ತಮ.

ನಿಮ್ಮ ಆಧಾರ್ನೊಂದಿಗೆ ಎಷ್ಟು ಸಿಮ್ ಕಾರ್ಡ್ಗಳ ಸಂಪರ್ಕವಿದೆ?

ನಿಮ್ಮ ಆಧಾರ್ ಕಾರ್ಡ್ ಮುಂದೆ ಎಷ್ಟು ಸಿಮ್ ಕಾರ್ಡ್ ಗಳು ಸಂಪರ್ಕ ಹೊಂದಿದೆ ಹಾಗೂ ಉಪಯೋಗಿಸಿದ ಸಿಮ್ ಕಾರ್ಡ್ ಗಳ ಸಂಪರ್ಕವನ್ನು ಸಂಪೂರ್ಣವಾಗಿ ಕಡೆತಗೊಳಿಸುವುದು ಹೇಗೆ ಎಂಬುದರ ವಿವರ ತಿಳಿದುಕೊಂಡು ಕೂಡಲೇ ಆ ಸಿಮ್ ಕಾರ್ಡ್ಗಳನ್ನು ನಿಷ್ಕ್ರಿಯೆಗೊಳಿಸುವುದು ಉತ್ತಮ. ಇಲ್ಲವಾದಲ್ಲಿ ಅತಿ ಹೆಚ್ಚು ಸಿಮ್ ಕಾರ್ಡ್ ಗಳು ಹೊಂದಿರುವ ಕಾರಣ ದಂಡ ಅಥವಾ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಡಿಒಟಿಯ ಹೊಸ ವೆಬ್ಸೈಟ್ ಬಳಸಿ ನಿಮ್ಮ ಆಧಾರ್ ಕಾರ್ಡ್ ಗೆ ಎಷ್ಟು ಸಿಮ್ ಗಳು ಲಿಂಕ್ ಆಗಿವೆ ಎಂಬ ಮಾಹಿತಿಯನ್ನು ಕೆಲವೇ ಕೆಲವು ಸೆಕೆಂಡುಗಳಲ್ಲಿ ತಿಳಿದುಕೊಳ್ಳಬಹುದು.AADHAR SIM LINK

ಈ ಪ್ರಕ್ರಿಯೆ ಮೂಲಕ ಕ್ಷಣಾರ್ಧದಲ್ಲಿ ಬೇಡದಿರುವ ಸಿಂಳನ್ನು ನಿಷ್ಕ್ರಿಯಗೊಳಿಸಿ!

ತಂತ್ರಜ್ಞಾನ ಇಲಾಖೆ(DOT) ಸಂಚಾರಿ ವೇದಿಕೆಯನ್ನು ಪರಿಚಯಿಸಿದ್ದು, ಇದರಿಂದಾಗಿ ಬಳಕೆದಾರರು ತಮ್ಮ ಆಧಾರ್ ಕಾರ್ಡ್(AADHAR CARD) ನೊಂದಿಗೆ ಸಂಪರ್ಕ ಹೊಂದಿರುವ ಎಲ್ಲಾ ಮೊಬೈಲ್ ಸಂಖ್ಯೆಗಳನ್ನು ಪರಿಶೀಲಿಸಬಹುದು. ಈ ಪ್ರಕ್ರಿಯೆಯನ್ನು ಮಾಡಲು sancharsathi.gov.in ಎಂಬ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಸರಿಯಾದ ಕ್ರಮದಲ್ಲಿ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ, ಓಟಿಪಿ ಸ್ವೀಕರಿಸಿ ಓಟಿಪಿ ಹಾಕಿದ ನಂತರ ನಿಮ್ಮ ಆಧಾರ್ ಸಂಖ್ಯೆಯೊಂದಿಗೆ ಸಂಪರ್ಕ ಹೊಂದಿರುವ ಎಲ್ಲ ಮೊಬೈಲ್ ಸಂಖ್ಯೆಗಳು ಪ್ರದರ್ಶನವಾಗುತ್ತದೆ. ಜೊತೆಗೆ ಅಲ್ಲಿಗೆ ನೀವು ಹಲವು ದಿನಗಳಿಂದ ನಿಷ್ಕ್ರಿಯೆಗೊಳಿಸಿರುವ ಸಿಮ್ ಕಾರ್ಡ್ ಅಥವಾ ಬಳಸದೆ ಇರುವ ಸಿಮ್ ಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಅವಕಾಶವಿದ್ದು, ನಿಮಗೆ ಬೇಡವಾದ ಸಿಮ್ ಕಾರ್ಡ್ ಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ.

advertisement

Leave A Reply

Your email address will not be published.