ಸಾರ್ವಜನಿಕ ವಲಯದ ಟೆಲಿಕಾಂ ಸಂಸ್ಥೆ ಬಿಎಸ್ಎನ್ಎಲ್ ತನ್ನ ಗ್ರಾಹಕರಿಗಾಗಿ ಎರಡು ಅಗ್ಗದ ಹಾಗೂ ಲಾಭದಾಯಕ ಪ್ರೀಪೇಯ್ಡ್ ಪ್ಯಾಕ್ಗಳನ್ನು ಪರಿಚಯಿಸಿದೆ. ಈ ಪ್ಲಾನ್ಗಳು ಕಡಿಮೆ ವೆಚ್ಚದಲ್ಲಿ ಡೇಟಾ, ಕಾಲಿಂಗ್ ಮತ್ತು ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತವೆ.
BSNL ನಿಂದ ಹೊಸದಾಗಿ ಪರಿಚಯವಾದ ಎರಡು ಪ್ರೀಪೇಯ್ಡ್ ಪ್ಯಾಕ್ಗಳು
₹107 ಪ್ರೀಪೇಯ್ಡ್ ಪ್ಲಾನ್:
-
ವ್ಯಾಲಿಡಿಟಿ: 35 ದಿನಗಳು
-
ಕಾಲಿಂಗ್: ಒಟ್ಟು 200 ನಿಮಿಷ (ಯಾವುದೇ ನೆಟ್ವರ್ಕ್ಗೆ)
-
ಡೇಟಾ: 3 ಜಿಬಿ
-
ಹೆಚ್ಚುವರಿ ಸೌಲಭ್ಯ: 50 ದಿನಗಳ ಬಿಎಸ್ಎನ್ಎಲ್ ಟ್ಯೂನ್ಸ್
ಈ ಪ್ಲಾನ್ ಕಡಿಮೆ ಬಳಕೆದಾರರಿಗೆ ಅಂದರೆ ಸೀಮಿತ ಕರೆ ಮತ್ತು ಡೇಟಾ ಬೇಕಾದವರಿಗೆ ಅನುಕೂಲಕರವಾಗಿದೆ.ಬೇಸಿಕ್ ಫೋನ್ ಬಳಕೆದಾರರಿಗೆ ಅತ್ಯುತ್ತಮ.
₹153 ಪ್ರೀಪೇಯ್ಡ್ ಪ್ಲಾನ್:
-
ವ್ಯಾಲಿಡಿಟಿ: 28 ದಿನಗಳು
-
ಅನಿಯಮಿತ ಕರೆ: ಎಲ್ಲ ನೆಟ್ವರ್ಕ್ಗಳಿಗೆ ಉಚಿತ (ರೋಮಿಂಗ್ ಸಹಿತ)
-
ಡೇಟಾ: ದಿನಕ್ಕೆ 1 ಜಿಬಿ ವೇಗದ ಡೇಟಾ, ನಂತರ 40 Kbps ವೇಗ
-
SMS: ಪ್ರತಿ ದಿನ 100 ಉಚಿತ ಎಸ್ಎಂಎಸ್
-
ಹೆಚ್ಚುವರಿ ಸೌಲಭ್ಯ: 28 ದಿನಗಳ ಟ್ಯೂನ್ಸ್ ಮತ್ತು 18 ದಿನಗಳ Zing ಆ್ಯಪ್ ಸಬ್ಸ್ಕ್ರಿಪ್ಷನ್
ಇದು ಹೆಚ್ಚು ಡೇಟಾ ಮತ್ತು ಕರೆ ಸೇವೆ ಬೇಕಾದ ಬಳಕೆದಾರರಿಗೆ ಹೆಚ್ಚು ಲಾಭದಾಯಕ.