Karnataka Times
Trending Stories, Viral News, Gossips & Everything in Kannada

HSRP: HSRP ಅಲ್ಲ ಈ ವಿಚಾರವಾಗಿ ಸಾರಿಗೆ ಸಚಿವರ ಮಹತ್ವದ ಘೋಷಣೆ, ರಾಜ್ಯಾದ್ಯಂತ ಕಡ್ಡಾಯ

advertisement

ನಿಮಗೆಲ್ಲರಿಗೂ ತಿಳಿದಿರುವ ಹಾಗೆ HSRP ನಂಬರ್ ಪ್ಲೇಟ್ ಅನ್ನು ಸೆಪ್ಟೆಂಬರ್ 15 ರ ಒಳಗೆ ಪ್ರತಿಯೊಂದು ವಾಹನಗಳು ಕೂಡ ಅಳವಡಿಸಿಕೊಳ್ಳಬೇಕು ಎನ್ನುವುದಾಗಿ ಸಾರಿಗೆ ಇಲಾಖೆ ನಿಯಮವನ್ನು ಜಾರಿಗೆ ತಂದಿದ್ದು ಇದು ಕೊನೆಯ ಗಡುವಿನ ದಿನಾಂಕ ಎಂಬುದಾಗಿ ಕೂಡ ತಿಳಿದುಬಂದಿದೆ. ಒಂದು ವೇಳೆ ಈ ರೀತಿ ಮಾಡದೆ ಹೋದಲ್ಲಿ HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳ ಮೇಲೆ ಟ್ರಾಫಿಕ್ ಪೊಲೀಸರು ದಂಡವನ್ನು ವಿಧಿಸುವುದಕ್ಕೆ ಸಿದ್ಧವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಕನಿಷ್ಟ ಪಕ್ಷ 500 ರಿಂದ ಸಾವಿರ ರೂಪಾಯಿಗಳ ಕಟ್ಟಬೇಕಾಗುತ್ತದೆ ಅನ್ನೋದನ್ನ ನೆನಪಿನಲ್ಲಿಟ್ಟುಕೊಳ್ಳಿ.

WhatsApp Join Now
Telegram Join Now

HSRP ನಂಬರ್ ಪ್ಲೇಟ್ ರಿಜಿಸ್ಟರ್ ಮಾಡಿಕೊಳ್ಳುವ ವಿಚಾರದ ಬಗ್ಗೆ ನೋಡೋದಾದ್ರೆ ನಿಮಗೆಲ್ಲರಿಗೂ ತಿಳಿದಿರಲಿ ಇರುವಂತಹ ಎರಡು ಕೋಟಿ ವಾಹನಗಳಲ್ಲಿ ಕೇವಲ ರಿಜಿಸ್ಟರ್ ಆಗಿರೋದು 45 ಲಕ್ಷ ವಾಹನಗಳು ಮಾತ್ರ. ಉಳಿದ ವಾಹನಗಳು ಸೆಪ್ಟೆಂಬರ್ 15 ರ ಒಳಗೆ ರಿಜಿಸ್ಟರ್ ಆಗ್ಬೇಕಾಗಿರೋದು ಅತ್ಯಂತ ಪ್ರಮುಖವಾಗಿದೆ ಆದರೆ ಅದರ ನಡುವೆ ಅದಕ್ಕಿಂತಲೂ ಮಿಗಿಲು ಎನಿಸುವ ರೀತಿಯಲ್ಲಿ ಮತ್ತೊಂದು ನಿಯಮ ಕೂಡ ಜಾರಿಗೆ ಬಂದಿದೆ. ಒಂದು ವೇಳೆ ಈ ರೀತಿ ಮಾಡದೆ ಹೋದಲ್ಲಿ ನಿಮ್ಮ ವಾಹನಗಳನ್ನು ಸೀಸ್ ಮಾಡಬೇಕಾದಂತಹ ಸಾಧ್ಯತೆ ಕೂಡ ಇದೆ ಅನ್ನೋದನ್ನ ನೀವು ತಿಳಿದುಕೊಳ್ಳಿ.

ನಿಮ್ಮ ವಾಹನದಲ್ಲಿ ಇದ್ದಿದ್ರೆ ಶಿಕ್ಷೆ ಅಥವಾ ದಂಡದಲ್ಲಿ ಒಂದು ಫಿಕ್ಸ್!

advertisement

ಇತ್ತೀಚಿನ ದಿನಗಳಲ್ಲಿ ಹೆದ್ದಾರಿಯಲ್ಲಿ ವಾಹನಗಳ ಅಪಘಾತ ಹೆಚ್ಚಾಗಿ ಕಂಡುಬರುತ್ತದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಇದೇ ಕಾರಣಕ್ಕಾಗಿ ಟ್ರಾಫಿಕ್ ಇಲಾಖೆಯ ಎಡಿಜಿಪಿ ಆಗಿರುವಂತಹ ಅಲೋಕ್ ಕುಮಾರ್ ಅವರು ಕಠಿಣ ನಿರ್ಧಾರವನ್ನ ಈ ಜುಲೈ ತಿಂಗಳಿನಿಂದಲೇ ತಂದಿದ್ದಾರೆ. ಯಾವುದೇ ಕಾರಣಕ್ಕೂ ವಾಹನಗಳಲ್ಲಿ ಎದುರುಗಡೆ ಬರುವವರ ಕಣ್ಣು ಕುಕ್ಕುವ ರೀತಿಯಲ್ಲಿ ಲೈಟ್ ಅನ್ನು ಅಳವಡಿಸುವ ಹಾಗೆ ಇಲ್ಲ ಎನ್ನುವಂತಹ ನಿಯಮವನ್ನು ಜಾರಿಗೆ ತರಲಾಗಿದ್ದು ಈಗಾಗಲೇ ಈ ವಿಚಾರದಲ್ಲಿ 1500ಕ್ಕೂ ಹೆಚ್ಚಿನ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂಬುದಾಗಿ ತಿಳಿದುಬಂದಿದೆ.

ಈಗಾಗಲೇ ಪ್ರತಿಯೊಂದು ಹೆದ್ದಾರಿಗಳಲ್ಲಿ ಕೂಡ ಈ ರೀತಿಯ ಘಟನೆಗಳು ನಡೆಯದೇ ಇರೋ ರೀತಿಯಲ್ಲಿ ನಿಗಾ ವಹಿಸಬೇಕು ಎನ್ನುವ ಕಾರಣಕ್ಕಾಗಿ ಹೆಚ್ಚಿನ ಟ್ರಾಫಿಕ್ ಪೊಲೀಸರನ್ನು ಅಳವಡಿಸಲಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಇದು ಅಳವಡಿಸಿಕೊಳ್ಳುವವರಿಗೆ ಬೇಕಾದ ಶೋಕಿ ಆಗಿರಬಹುದು ಆದರೆ ಎದುರುಗಡೆ ಬರುತ್ತಿರುವಂತಹ ಪ್ರಯಾಣಿಕರಿಗೆ ಅದು ಯಮನ ಆಹ್ವಾನ ಆಗಿದೆ ಅಂದ್ರು ಕೂಡ ತಪ್ಪಾಗಲ್ಲ.

RTO decision about HSRP number plate

ಹೀಗಾಗಿ ಈ ರೀತಿಯ ಲೈಟ್ಗಳನ್ನು ಅಳವಡಿಸಿಕೊಂಡಿದ್ದರೆ ನೀವು ಆದಷ್ಟು ಬೇಗ ತೆಗೆದು ಹಾಕುವುದು ಒಳ್ಳೆಯದು. ಇಲ್ಲವಾದರೆ ಟ್ರಾಫಿಕ್ ಪೊಲೀಸರು ನಿಮಗೆ ಸಿಕ್ಕರೆ ಮಾತ್ರ ನಿಮ್ಮ ವಾಹನವನ್ನು ಜಪ್ತು ಮಾಡುವುದರಿಂದ ಹಿಡಿದು ದೊಡ್ಡ ಮೊತ್ತದ ದಂಡವನ್ನು ಕೂಡ ವಿಧಿಸಬಹುದಾಗಿದೆ. ಹೀಗಾಗಿ ಈ ಶಿಕ್ಷೆಯನ್ನು ತಪ್ಪಿಸಿಕೊಳ್ಳುವುದಕ್ಕೆ ಪ್ರಾಮಾಣಿಕ ಪ್ರಯತ್ನದ ರೂಪದಲ್ಲಿ ಆ ರೀತಿಯ ಕಣ್ಣು ಕುಕ್ಕುವಂಥ ಲೈಟ್ ಗಳನ್ನು ರಿಮೂವ್ ಮಾಡಿ.

advertisement

Leave A Reply

Your email address will not be published.