Karnataka Times
Trending Stories, Viral News, Gossips & Everything in Kannada

Honda Stylo 160: ನೂತನ ಹೋಂಡಾ ಸ್ಟೈಲೋ 160 ಸ್ಕೂಟರ್ ಎಂಟ್ರಿ, ಉತ್ತಮ ಫೀಚರ್ಸ್ ಹಾಗೂ ಕಡಿಮೆ ಬೆಲೆ!

advertisement

ಇಂದು ಪ್ರತಿಯೊಬ್ಬರಿಗೂ ವಾಹನಗಳ ಅವಶ್ಯಕತೆ ಹೆಚ್ಚು ಇದ್ದೆ ಇದೆ. ಯಾಕಂದ್ರೆ ತಮ್ಮದೆ ಆದ ಸ್ವಂತ ವಾಹನ ಇದ್ದರೆ ಸಮಯವು ಉಳಿಯುತ್ತದೆ. ಬಸ್ ಗಾಗಿ ಕಾಯುವ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಇಂದು ಪ್ರತಿಯೊಬ್ಬರು ಬೈಕ್, ಸ್ಕೂಟರ್, ಕಾರು ಖರೀದಿಗೆ ಆಸಕ್ತಿ ವಹಿಸುತ್ತಾರೆ. ಅದರಲ್ಲಿ ದಿನನಿತ್ಯದ ಬಳಕೆಗೆ ಸ್ಕೂಟರ್ ಬಳಕೆ ಹೆಚ್ಚು ಅವಶ್ಯಕ ‌ಇದ್ದು ಇಂದು ಮಾರುಕಟ್ಟೆ ಗೂ ನನಾ ರೀತಿಯ ಸ್ಕೂಟರ್ ಎಂಟ್ರಿ ನೀಡಿದ್ದು ಮಾರುಕಟ್ಟೆ ಯಲ್ಲಿ ಸಂಚಲನ ಮೂಡಿಸಿದೆ.

Honda Stylo 160:

 

 

ಇದೀಗ ಹೊಸ ಸ್ಕೂಟರ್ ಮಾರುಕಟ್ಟೆ ‌ಯಲ್ಲಿ ಸಂಚಲನ ಮೂಡಿಸಿದ್ದು ಈ ಹೊಸ Honda Stylo 160 ಸ್ಕೂಟರ್ ಆಧುನಿಕ ವೈಶಿಷ್ಟ್ಯಗಳನ್ನು ಹೊಂದಿದ್ದು ಯುವಕರಿಗೆ ಕ್ರೇಜ್ ಹೆಚ್ಚು ಮಾಡಿದೆ. ಸ್ಟೈಲೋ 160 ನಲ್ಲಿ ಡಿಜಿಟಲ್ ಡಿಸ್ಪ್ಲೇ, ಯುಎಸ್ಬಿ ಚಾರ್ಜಿಂಗ್, ಕೀಲೆಸ್ ಸ್ಟಾರ್ಟ್ ಮತ್ತು ಎಬಿಎಸ್ ಸಿಬಿಎಸ್ ಆಯ್ಕೆಗಳು ಇದ್ದು ರೈಡ್ ಮಾಡಲು ಉತ್ತಮ ಅನುಭವ ಸಹ ನೀಡಲಿದೆ.

advertisement

Honda Stylo 160 Features:

 

 

  • ಈ ಸ್ಕೂಟರ್ 16bhp ಗರಿಷ್ಠ ಶಕ್ತಿ ಮತ್ತು 15Nm ಟಾರ್ಕ್ ಅನ್ನು ನೀಡಲಿದ್ದು ಇತರ ಸ್ಕೂಟರ್ ಗಳಿಗೆ ಪೈಪೋಟಿ ನೀಡಲಿದೆ.
  • ಈ ಸ್ಕೂಟರ್ ನಲ್ಲಿ ಎಲ್‌ಇಡಿ ಲೈಟಿಂಗ್‌ನಿಂದ ಹಿಡಿದು ಬ್ರೇಕಿಂಗ್ ಸಿಸ್ಟಮ್ ಉತ್ತಮ ಕ್ವಾಲಿಟಿ ವೈಶಿಷ್ಟ್ಯ ಗಳನ್ನು ವಿನ್ಯಾಸಗೊಳಿಸಲಾಗಿದೆ.
  • ಹೋಂಡಾ ಸ್ಟೈಲೋ 12 ಇಂಚಿನ ಮಿಶ್ರಲೋಹದ ಚಕ್ರಗಳು, ಉತ್ತಮ ಕ್ವಾಲಿಟಿ ಟೈರ್‌ಗಳು, ಡಿಸ್ಕ್ ಬ್ರೇಕ್‌ಗಳು, ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಒಳಗೊಳ್ಳಲಿದೆ.
  • ಈ ಸ್ಕೂಟರ್ ಆರು ಬಣ್ಣಗಳಲ್ಲಿ ಬರಲಿದ್ದು ರಾಯಲ್ ಗ್ರೀನ್, ರಾಯಲ್ ಮ್ಯಾಟ್ ವೈಟ್, ರಾಯಲ್ ಮ್ಯಾಟ್ ಬ್ಲ್ಯಾಕ್, ಗ್ಲ್ಯಾಮ್ ರೆಡ್, ಗ್ಲ್ಯಾಮ್ ಬ್ಲ್ಯಾಕ್ ಮತ್ತು ಗ್ಲಾಮ್ ಬೀಜ್ ಬಣ್ಣದಲ್ಲಿ ಬರಲಿದೆ.
  • ಸದ್ಯ ಈ ಹೋಂಡಾ ಸ್ಟೈಲೋ 160 ಅನ್ನು ಇಂಡೋನೇಷ್ಯಾದಲ್ಲಿ ಮಾರಾಟ ಮಾಡುತ್ತಿದೆ.

Honda Stylo 160 Price:

ಇದೀಗ, ಈ ಸ್ಟೈಲೋ 160 ಇಂಡೋನೇಷ್ಯಾದಲ್ಲಿ ಲಭ್ಯವಿದ್ದು ಅಲ್ಲಿನ ಜನರು ಖರೀದಿಗೆ ಬಹಳಷ್ಟು ಆಕರ್ಷಿತ ರಾಗಿದ್ದಾರೆ. ಇದು ಏಷ್ಯಾ, ಯುರೋಪ್ ಮತ್ತು ಯುಎಸ್‌ನ ಇತರ ಭಾಗಗಳಲ್ಲಿ ಬಹಳಷ್ಟು ಬೇಡಿಕೆ ಉಂಟು ಮಾಡಲಿದೆ. ಇದರ ಬೆಲೆ 85,000 ರಿಂದ 1,25,000ರೂ. ಆಗಲಿದೆ ಎಂದು ವಿವಿಧ ಮೂಲಗಳಿಂದ ‌ತಿಳಿದು ಬಂದಿದೆ.

advertisement

Leave A Reply

Your email address will not be published.