Karnataka Times
Trending Stories, Viral News, Gossips & Everything in Kannada

Yulu Wynn: ಕೇವಲ 55ಸಾವಿರ ರೂಪಾಯಿಗೆ 68Km ರೇಂಜ್ ಕೊಡುವ ಎಲೆಕ್ಟ್ರಿಕ್ ಬೈಕ್ ಬಿಡುಗಡೆ, ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲ!

advertisement

ಇಂದು ವಾಹನಗಳ ಬೇಡಿಕೆಯಂತೂ ದಿನದಿಂದ ದಿನಕ್ಕೆ ಹೆಚ್ಚಳವಾಗಿದೆ.‌ ಅದರಲ್ಲೂ ಇಂದು ಎಲೆಕ್ಟ್ರಿಕ್ ವಾಹನಗಳ ಹವಾ ಜೋರು, ಎಲೆಕ್ಟ್ರಿಕ್ ಸ್ಕೂಟರ್ ಗಳು ಮಾರುಕಟ್ಟೆಯಲ್ಲಿಯು ತಮ್ಮ ಬೇಡಿಕೆ ಸಹ ಹೆಚ್ಚಿಸಿಕೊಳ್ಳುತ್ತಿದೆ. ಪೆಟ್ರೋಲ್ ,ಡಿಸೇಲ್ ಬೆಲೆ ಏರಿಕೆಯಿಂದ ಅನೇಕ ಜನರು ಇಂದು ಎಲೆಕ್ಟ್ರಿಕ್ ಸ್ಕೂಟರ್‌ಗಳತ್ತ ಮುಖ ಮಾಡುತ್ತಿದ್ದು ಕಡಿಮೆ ಹಣದಲ್ಲಿಯು ಖರೀದಿ ಮಾಡಬಹುದಾಗಿದೆ.ಪರಿಸರ ಸಂರಕ್ಷಣಾ ದೃಷ್ಟಿಯಿಂದಲೂ ಒಳಿತು ಅದರ ಜೊತೆ ಹಣವು ಕೂಡ ಉಳಿತಾಯ ವಾಗುತ್ತದೆ.ಅದೇ ರೀತಿ‌ನೀವು ಇಂದು ಸಬ್ಸಿಡಿ ದರದಲ್ಲಿ ಕೂಡ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಬಹುದು. ಇಂದು ಹಲವು ಪ್ರತಿಷ್ಟಿತ ಕಂಪನಿಗಳ ಸ್ಕೂಟರ್ ಗಳು ಓಲಾ, ಈಥರ್, ಹೀರೋ ಎಲೆಕ್ಟ್ರಿಕ್, ಮೋಟರ್‌ನಂತಹ ಕಂಪನಿಗಳು ಮಾರಾಟದಲ್ಲಿ ಬೆಳವಣಿಗೆ ಕೂಡ ಸಾಧಿಸುತ್ತಿವೆ.

Yulu Wynn ಸ್ಕೂಟರ್ ಗೆ ನೊಂದಣಿ ಅಗತ್ಯವಿಲ್ಲ

ಯುಲು ವೈನ್ ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಯುವಕರಲ್ಲಿ ಆಸಕ್ತಿ ಹೆಚ್ಚಾಗಿದೆ. ಇದರ ಫೀಚರ್ಸ್ ‌ಕೂಡ ವಿಭಿನ್ನ ವಾಗಿದ್ದು ಈ Yulu Wynn ಮೋಟಾರು ವಾಹನ ನಿಯಮಗಳ ಪ್ರಕಾರ ಕಡಿಮೆ ವೇಗದ ವರ್ಗಕ್ಕೆ ಸೇರಿದೆ. ಹಾಗಾಗಿ ರೈಡ್ ಮಾಡಲು ಹೆಲ್ಮೆಟ್ ಅಥವಾ ಡ್ರೈವಿಂಗ್ ಲೈಸೆನ್ಸ್ ಅಥವಾ ನೋಂದಣಿ ಅಗತ್ಯವಿಲ್ಲ.

advertisement

Yulu Wynn ಫೀಚರ್ಸ್ ಹೇಗಿದೆ?

  • ಈ ಸ್ಕೂಟರ್ 15 ವೋಲ್ಟ್ 19.3Ah ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿದ್ದು ಒಂದೇ ಚಾರ್ಜ್‌ನಲ್ಲಿ 68 ಕಿಲೋ ಮೀಟರ್‌ಗಳವರೆಗೆ ಚಲಿಸಲಿದೆ.
  • ಅದೇ ರೀತಿ ಇದರಲ್ಲಿ ಬಳಕೆ ಮಾಡಿರುವ ಮೋಟರ್ ಹಬ್ ಮೌಂಟೆಡ್ ಯುನಿಟ್ ಇರಲಿದ್ದು 25km/h ಟಾಪ್ ಸ್ವೀಡ್ ಹೊಂದಿದೆ.
  • ಸಿಂಗಲ್ ಸೀಟ್ ಹೊಂದಿರುವ ಈ ಸ್ಕೂಟರ್ ಸರಿ ಸುಮಾರು 100 ಕಿಲೋಗ್ರಾಂ ಸಾಗಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ.
  • ಅದೇ ರೀತಿ ಇದರಲ್ಲಿ BLDC ಎಲೆಕ್ಟ್ರಿಕ್ ಮೋಟಾರ್ ಅನ್ನು ಬಳಸಲಾಗಿದ್ದು, ಇದರ ಗರಿಷ್ಠ ವೇಗ ಗಂಟೆಗೆ 24.9 ಕಿಲೋಮೀಟರ್.
  • ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಸಸ್ಪೆನ್ಷನ್ ಮತ್ತು ಹಿಂಭಾಗದಲ್ಲಿ ಸ್ಪ್ರಿಂಗ್ ಕಾಯಿಲ್ ಸಸ್ಪೆನ್ಷನ್ ಹೊಂದಿದೆ.
  • ಇದರಲ್ಲಿ ಫ್ರಂಟ್, ರೇರ್, 110ಎಂಎಂ ಡ್ರಮ್ ಬ್ರೇಕ್ ಇರಲಿದ್ದು , 12 ಇಂಚಿನ ಅಲಾಯ್ ವೀಲ್ಸ್, ಕೂಡ ಇದೆ

Yulu Wynn ಬೆಲೆ ಹೇಗಿದೆ?

ಯುಲು (Yulu) ಕಂಪನಿ ಈ ಎಲೆಕ್ಟ್ರಿಕ್ ಸ್ಕೂಟರ್‌ನ್ನು ರೂ.55,555 ಬೆಲೆಗೆ ಬಿಡುಗಡೆಗೊಳಿಸಿದ್ದು, ರೂ.999 ಮುಂಗಡ ಹಣ ಪಾವತಿಸಿ, ಬುಕಿಂಗ್ ಮಾಡಲು ಅವಕಾಶ ಕೂಡ ಇದೆ. ಹಾಗಾಗಿ ಸುತ್ತಲಿನ ಪ್ರದೇಶದಲ್ಲಿ ರೈಡ್ ಮಾಡಲು ಈ ಸ್ಕೂಟರ್ ಉತ್ತಮ ಆಯ್ಕೆ ಯಾಗಿದೆ.

advertisement

Leave A Reply

Your email address will not be published.