Karnataka Times
Trending Stories, Viral News, Gossips & Everything in Kannada

Maruti Suzuki Eeco: ಅತಿ ಕಡಿಮೆ ಬೆಲೆಗೆ ಸಿಗಲಿದೆ ಮಾರುತಿ ಕಂಪನಿಯ 7 ಸೀಟರ್ ಕಾರು, ಬೆಂಕಿ ಲುಕ್!

advertisement

ಇಂದು ಮದ್ಯಮ ವರ್ಗಕ್ಕೂ ಕೂಡ ಕಾರು ಖರೀದಿ ಮಾಡಬೇಕು, ಪ್ರಯಾಣ ಬೆಳೆಸಬೇಕು, ಸ್ವಂತ ವಾಹನವೇ ಇರಬೇಕು ಎಂಬ ಆಸೆ ಇರುತ್ತದೆ.‌ ಅದೇ ರೀತಿ ಮಾರು ಕಟ್ಟೆಗೂ ಆಧುನಿಕ ಸ್ಪರ್ಶ ನೀಡುವ ವೈಕಲ್ ಗಳು ವಾಹನ ಪ್ರೀಯರನ್ನು ಸೆಳೆಯುತ್ತಲೆ ಬಂದಿದೆ. ಹಾಗಾಗಿ ಸಾಲ ಮಾಡಿಯಾದರೂ ವಾಹನ ಖರೀದಿ ಗೆ ಆಸಕ್ತಿ ವಹಿಸುತ್ತಾರೆ.

ಆಧುನಿಕ ಸ್ಪರ್ಶ

ಮಾರುತಿ ಕಂಪನಿಯು ಮಾರುಕಟ್ಟೆಯಲ್ಲಿ ಪ್ರತಿಷ್ಟಿತ ಎನಿಸಿಕೊಂಡಿದೆ. ವಾಹನ ವಿತರಣೆಯಲ್ಲಿ ಪ್ರಬಲ್ಯ ಎಂದೆನಿಸಿಕೊಂಡಿದೆ. ವಾಹನ‌ಪ್ರೀಯರಿಗಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ನೀಡುತ್ತಲೆ ಬಂದಿದ್ದು ಕೈಗೆಟುಕುವ ಬೆಲೆಯಲ್ಲಿಯು ಮಾರಾಟ ಮಾಡುತ್ತಿದೆ. ಅದರಲ್ಲಿ ಮಾರುತಿ ಇಕೋ ಕೂಡ ಅತ್ಯಂತ ಜನಪ್ರಿಯ ಮಾಡೆಲ್ ಗಳಲ್ಲಿ ಒಂದಾಗಿದ್ದು 7 ಸೀಟರ್ ಕಾರು ಇದಾಗಿದೆ. ಈಗಾಗಲೇ 2010 ರಲ್ಲಿ ಮಾರುತಿ ಇಕೋ ಬಿಡುಗಡೆಯಾಗಿದ್ದು ಇಲ್ಲಿಯವರೆಗೆ ಸುಮಾರು 10 ಲಕ್ಷ ಯುನಿಟ್‌ಗಳು ಮಾರಾಟವಾಗಿವೆ.

ಹೊಸ ಮಾದರಿಯ ಕಾರು ಎಂಟ್ರಿ

advertisement

ಇದೀಗ ಹೊಸ ಮಾರುತಿ ಸುಜುಕಿ Eeco MPV (Maruti Suzuki Eeco)ಇನ್ನಷ್ಟು ಸೌಕರ್ಯ ದೊಂದಿಗೆ ಮಾರುಕಟ್ಟೆ ಗೆ ಬರಲಿದೆ. ಇದರಲ್ಲಿ , ಕ್ಯಾಬಿನ್ ಏರ್ ಫಿಲ್ಟರ್, ಡೋಮ್ ಲ್ಯಾಂಪ್ ಮತ್ತು ಹೊಸ ಬ್ಯಾಟರಿ ಉಳಿಸುವ ಸಾಮರ್ಥ್ಯ ದ ವೈಶಿಷ್ಟ್ಯ ಒಳಗೊಳ್ಳಲಿದೆ.

  • ಕಾರಿನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೊಸ ಸ್ಟೀರಿಂಗ್ ವೀಲ್ ಮತ್ತು AC ಮತ್ತು ಹೀಟರ್‌ಗಾಗಿ ರೋಟರಿ ನಿಯಂತ್ರಣ ಅಳವಡಿಕೆ ಮಾಡಲಿದೆ.
  • ಇದರಲ್ಲಿ ಫ್ರಂಟ್ ಸೀಟ್‌ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್‌ಗಳು ಇರಲಿದೆ.
  • ಮಾರುತಿ ಸುಜುಕಿ ಇಕೋ ಮುಂಭಾಗದ ಸೀಟ್, ಕ್ಯಾಬಿನ್ ಏರ್ ಫಿಲ್ಟರ್ ವ್ಯವಸ್ಥೆ ಹೊಂದಿದೆ.
  • ಇದು ಸಾಲಿಡ್ ವೈಟ್, ಪರ್ಲ್ ಮಿಡ್ನೈಟ್ ಬ್ಲಾಕ್, ಮೆಟಾಲಿಕ್ ಸಿಲ್ವರ್ ಗ್ರೇ ಮತ್ತು ಮೆಟಾಲಿಕ್ ಗ್ಲಿಸ್ಟೆನಿಂಗ್ ಗ್ರೇನಲ್ಲೂ ಹೊಸ ಇಕೊ ಲಭ್ಯವಿದೆ ಎನ್ನಲಾಗಿದೆ.
  • Eeco ವೇಗ ಎಚ್ಚರಿಕೆ ವ್ಯವಸ್ಥೆಯನ್ನು ಸಹ ಹೊಂದಿದ್ದು ಟೂರ್ ವಿ ಟ್ರಿಮ್‌ನಲ್ಲಿ, ಈ ವೈಶಿಷ್ಟ್ಯವನ್ನು ಸ್ಪೀಡ್ ಲಿಮಿಟರ್‌ನೊಂದಿಗೆ ಲಭ್ಯವಿದೆ.

ಬೆಲೆ ಹೇಗಿದೆ?

ನವೀಕರಿಸಿದ ಮಾರುತಿ ಸುಜುಕಿ ಇಕೋ ಈಗ ರೂ 5.55 ಲಕ್ಷಗಳಲ್ಲಿ ಮಾರಾಟ ಪ್ರಾರಂಭ ವಾಗಲಿದೆ ಎನ್ನಲಾಗಿದೆ. ಒಟ್ಟಿನಲ್ಲಿ ಆಧುನಿಕ ಸ್ಪರ್ಶ ದೊಂದಿಗೆ ಮಾರುಕಟ್ಟೆ ಗೆ ಎಂಟ್ರಿ ನೀಡಲಿದೆ.

advertisement

Leave A Reply

Your email address will not be published.