Karnataka Times
Trending Stories, Viral News, Gossips & Everything in Kannada

Maruti Suzuki: ಎಲ್ಲರನ್ನೂ ಆಕರ್ಷಿಸುತ್ತದೆ ಮಾರುತಿ ಕಂಪನಿಯ ಈ ಕಾರು, 35 ಕಿ.ಮೀ ಮೈಲೇಜ್!

advertisement

ದೇಶದಲ್ಲಿ ಅತಿದೊಡ್ಡ ಕಾರು ತಯಾರಕ ಕಂಪನಿಯಾಗಿ ಮಾರುತಿ ಸುಜುಕಿ (Maruti Suzuki) ಜನಪ್ರಿಯವಾಗಿದೆ. ಇತ್ತೀಚಿಗೆ ನಡೆದ ಜಪಾನೀಸ್ ಮೊಬಿಲಿಟಿ ಶೋನಲ್ಲಿ ಸುಜುಕಿ 4ನೇ ತಲೆಮಾರಿನ ಸ್ವಿಫ್ಟ್ ಕಾರನ್ನು ಪ್ರದರ್ಶನ ಮಾಡಿತ್ತು. ಅಂದಿನಿಂದ ಈ ಕಾರಿಗೆ ಭಾರತದಲ್ಲಿಯೂ ಭಾರೀ ಬೇಡಿಕೆಗಳು ಹೆಚ್ಚಾಗಿವೆ.

ಅಷ್ಟಕ್ಕೂ ಈ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರ್ ದೇಶೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷದ ಅಂದರೆ 2024 ರ ಆರಂಭದಲ್ಲಿ ಬಹುತೇಕ ಬಿಡುಗಡೆಗೆ ಸಿದ್ಧವಾಗುತ್ತದೆ. ಈಗಾಗಲೇ ಹಲವು ಭಾರೀ ನಮ್ಮ ರಸ್ತೆಗಳಲ್ಲಿ ಪ್ರಾಯೋಗಿಕ ಸಂಚಾರ ನಡೆಸಿದೆ. ಇತ್ತೀಚೆಗೆ ಸಂಪೂರ್ಣವಾಗಿ ಕವರ್ ಮಾಡಲಾದ ನೂತನ ಸ್ವಿಫ್ಟ್ ಕಾರ್ ಟೆಸ್ಟ್ ವೇಳೆ ಕಾಣಿಸಿಕೊಂಡಿದ್ದು, ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾದ ಈ ವಿಡಿಯೋದಲ್ಲಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರಿನ ರೇರ್ ಪ್ರೊಫೈಲ್ ಅಂದರೆ ಹಿಂಭಾಗವನ್ನು ನೋಡಬಹುದಾಗಿದೆ. ಮಾರುತಿ ಕಂಪನಿಯು ಭಾರತದಲ್ಲಿ ಈ ಕಾರಿನ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ಇನ್ನು ಬಹಿರಂಗಪಡಿಸಲ್ಲ. ಆದರೂ ಜಾಗತಿಕವಾಗಿ ಅನಾವರಣಗೊಳಿಸಲಾದ ಮಾದರಿಯಂತೆಯೇ ಈ ಕಾರ್ ಇದೆ ಎಂಬುದೇ ಈ ಕಾರ್ ನ ವಿಶೇಷತೆ ಆಗಿದೆ. ಇನ್ನು ಈ ವೀಡಿಯೋ ವನ್ನು ನೀವು ನೋಡಿದರೆ ಸ್ವಿಫ್ಟ್ ಹೊಸ ಕಾರ್ ಹಿಂಭಾಗದ ಬಂಪರ್‌ ಮತ್ತು ಟೈಲ್ ಲ್ಯಾಂಪ್‌ ನವೀನ ವಿನ್ಯಾಸವನ್ನು ಹೊಂದಿರುವುದನ್ನು ಸುಲಭವಾಗಿ ಗುರುತಿಸಬಹುದು.

advertisement

ಅಲ್ಲದೆ, ನೂತನ ಸ್ವಿಫ್ಟ್, ಮರು – ವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ನವೀನವಾದ ಕಪ್ಪು ಬಣ್ಣದ ಗ್ರಿಲ್, ಆಕರ್ಷಕ ಎಲ್ಇಡಿ ಹೆಡ್‌ಲ್ಯಾಂಪ್‌, ಡ್ಯುಯಲ್ – ಟೋನ್ ವೀಲ್ಸ್ ಕೂಡ ಹೊಂದಿದೆ. ಇದನ್ನು ಎಲ್ಲೆಡೆ ಪ್ರದರ್ಶಿಸಲಾದ ಮಾದರಿಯಲ್ಲಿ ನೋಡಬಹುದಾಗಿದೆ. ಸುರಕ್ಷತೆಯ ಸಲುವಾಗಿ ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆನ್ಸ್ ಸಿಸ್ಟಮ್ಸ್( ADAS) ವೈಶಿಷ್ಟ್ಯದೊಂದಿಗೆ ಈ ಕಾರ್ ಲಾಂಚ್ ಆಗಬಹುದು ಎಂದು ಹೇಳಲಾಗುತ್ತಿದೆ.

ಮುಂಬರಲಿವ ಈ ಕಾರು, 1.2 – ಲೀಟರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹಾಗೂ ಇ – ಸಿವಿಟಿ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಗ್ರಾಹಕರಿಗೆ ಖರೀದಿಗೆ ಸಿಗುವ ಸಾಧ್ಯತೆಗಳಿವೆ. 30 – 35 kmpl ಮೈಲೇಜ್ ನೀಡಬಹುದು ಎನ್ನಲಾಗುತ್ತಿದೆ. ಮತ್ತೊಂದು, ನಾನ್ ಹೈಬ್ರಿಡ್ 1.2 – ಲೀಟರ್ 3 – ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಆಯ್ಕೆಯೊಂದಿಗೂ ಖರೀದಿದಾರಿಗೆ ಲಭ್ಯವಾಗಬಹುದು ಎಂದು ಹೇಳಲಾಗುತ್ತಿದೆ.

ಹೊಸ ತಲೆಮಾರಿನ ಮಾರುತಿ ಸುಜುಕಿ ಸ್ವಿಫ್ಟ್, ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಒಳಗೊಂಡಿರಲಿದೆ. ಈ ಕಾರು, ಆಕರ್ಷಕ ಇನ್ಫೋಟೈನ್‌ಮೆಂಟ್ ಸಿಸ್ಟಮ್‌, ವೈರ್‌ಲೆಸ್ ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಕನೆಕ್ಟ್ ಕಾರ್ ಕಾರ್ ಟೆಕ್, ಸ್ಟೀರಿಂಗ್-ಮೌಂಟೆಡ್ ಕಂಟ್ರೋಲ್, ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, 360 – ಡಿಗ್ರಿ ಕ್ಯಾಮೆರಾ ಏರ್ ಬ್ಯಾಗ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಹೊಂದಿದೆ.

advertisement

Leave A Reply

Your email address will not be published.