Karnataka Times
Trending Stories, Viral News, Gossips & Everything in Kannada

ಬುಲೆಟ್ ಹಾಗೂ ಜಾವಾ ಬೈಕ್ ಇನ್ಮೇಲೆ ಲೆಕ್ಕಕಿಲ್ಲ! ಕಡಿಮೆ ಬೆಲೆಗೆ ಇನ್ನೊಂದು ಬೈಕ್ ಎಂಟ್ರಿ

advertisement

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಸಾಕಷ್ಟು ಐಕಾನಿಕ್ ವಾಹನ ತಯಾರಿಕಾ ಕಂಪನಿಗಳು ಪ್ರತಿ ವರ್ಷವೂ ಹೊಸ ಹೊಸ ಬೈಕ್ ಹಾಗೂ ಕಾರುಗಳನ್ನು ಬಿಡುಗಡೆ ಮಾಡುತ್ತಾ ಸುದ್ದಿಯಲ್ಲಿರುತ್ತದೆ.ಅದರಂತೆ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ರಾಯಲ್ ಎನ್ಫೀಲ್ಡ್ (Royal Enfield) ಮತ್ತು ಜಾವಾ (Java bike)ದಂತಹ ಬೈಕ್ಗಳಿಗೆ ನೇರವಾದ ಸ್ಪರ್ಧೆ ನೀಡಲು ಮಹೇಂದ್ರ ಕಂಪನಿಯು ಕೊಚ್ಚಹೊಸ ಕ್ಲಾಸಿಕ್ ಬೈಕನ್ನು ಪರಿಚಯಿಸುವ ತಯಾರಿಯಲ್ಲಿದ್ದಾರೆ. ಇದರ ಅಮೋಘ ವೈಶಿಷ್ಟ್ಯತೆಗಳು ನೋಟ ಇಂಧನ ವ್ಯವಸ್ಥೆ (Fuel System) ಹಾಗೂ ಮೈಲೇಜ್ ಕೆಪ್ಯಾಸಿಟಿಗೆ ಮನಸೋತ ಬೈಕ್ ಪ್ರೀಯರು ಯಾವಾಗ ಲಾಂಚ್ ಆಗಲಿದೆ ಎಂಬುದನ್ನು ಎದುರು ನೋಡುತ್ತಿದ್ದಾರೆ.

WhatsApp Join Now
Telegram Join Now

ಸದ್ಯದಲ್ಲೇ ಮಾರುಕಟ್ಟೆಯಲ್ಲಿ ಆರ್ಭಟಿಸಲಿದೆ ಗೋಲ್ಡ್ ಸ್ಟಾರ್!

 

Image Source: Autocar India

 

ನೋಡಲು ಬಹಳನೇ ರಗಡಾಗಿರುವ ಮಹಿಂದ್ರ BSA ಗೋಲ್ಡ್ ಸ್ಟಾರ್ 650 (Mahindra BSA Gold Star 650) ಬೈಕ್ ಸದ್ಯದಲ್ಲೇ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗುತ್ತಿದೆ. ಈಗಾಗಲೇ ಕ್ರೂಸರ್ ಸೆಗ್ಮೆಂಟ್ ನಲ್ಲಿ ಅಬ್ಬರಿಸುತ್ತಿರುವ ರಾಯಲ್ ಎನ್ಫೀಲ್ಡ್ ಬೈಕ್ ಗೆ ನೇರವಾದ ಸ್ಪರ್ಧೆ ನೀಡಲು ಗೋಲ್ಡ್ ಸ್ಟಾರ್ 650 ತಯಾರಾಗುತ್ತಿದ್ದು, ಹಸಿರು ಮತ್ತು ಕಪ್ಪು ಬಣ್ಣದಲ್ಲಿ ಬರಲಿರುವ ಬೈಕ್ ನೋಡಲು ಬಹಳ ರಗಡಗಿದ್ದು, ನೂತನ ತಂತ್ರಜ್ಞಾನ ಹಾಗೂ ಶೈಲಿಯನ್ನು ಅನುಸರಿಸಿ ಬೈಕನ್ನು ತಯಾರಿಸಲಾಗಿದೆ. ಕೆಲವೇ ಕೆಲವು ತಿಂಗಳುಗಳಲ್ಲಿ ಮಾರುಕಟ್ಟೆಯ ಗ್ರಾಹಕರನ್ನು ಆಕರ್ಷಿಸಲು ಬೈಕ್ ಸಜ್ಜಾಗಿದೆ.

ಮಹಿಂದ್ರ ಬಿಎಸ್ಎ ಓಲ್ಡ್ ಸ್ಟಾರ್ 650 ಬೈಕಿನ-ಇಂಧನ ವ್ಯವಸ್ಥೆ!

advertisement

652cc ಸಿಂಗಲ್ ಸಿಲಿಂಡರ್ ಅಳವಡಿಸಿ ತಯಾರು ಮಾಡಲಾಗಿರುವ ಮಹಿಂದ್ರ ಗೋಲ್ಡ್ ಸ್ಟಾರ್ 650 (Mahindra BSA Gold Star 650) ಬೈಕ್ 44bhp ಶಕ್ತಿ ಮತ್ತು 55 nm ಪೀಕ್ ಟರ್ಕ್ ಉತ್ಪಾದಿಸುತ್ತದೆ. ಇದರ ಶಕ್ತಿಯುತ ಇಂಧನ ವ್ಯವಸ್ಥೆಗೆ ಐದು ಸ್ಪೀಡ್ ಗೇರ್ ಬಾಕ್ಸ್ ನ ಸಂಪರ್ಕವನ್ನು ನೀಡಲಾಗಿದ್ದು, ಇದರಿಂದಾಗಿ ಬೈಕ್ ಅತ್ಯುತ್ತಮ ಮೈಲೇಜ್ ನೀಡಲಿದೆ. 12 ಲೀಟರ್ ಇಂಧನ ಸಾಮರ್ಥ್ಯವನ್ನು (12 l Fuel Capacity) ಹೊಂದಿರುವ ಮಹಿಂದ್ರ ಗೋಲ್ಡ್ ಸ್ಟಾರ್ 650 ಯಲ್ಲಿ ಫ್ರಂಟ್ ಬ್ರೇಕ್ ಡಿಸ್ಕ್ & ರೇರ್ ಬ್ರೇಕ್ ಡಿಸ್ಕ್ ಗಳನ್ನು ಅಳವಡಿಸಲಾಗಿದೆ.

ಪ್ರೀಮಿಯಂ ವೈಶಿಷ್ಟ್ಯತೆಗಳು:

 

Image Source: Autocar India

 

ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಈಗಿನ ಜನರೇಶನ್ಗೆ ಸರಿದೂಗುವಂತಹ ಬೈಕನ್ನು ತಯಾರು ಮಾಡುವ ನಿಟ್ಟಿನಿಂದ ಮಹೇಂದ್ರ ಕಂಪನಿಯು ಪ್ರೀಮಿಯಂ ಫೀಚರ್ಸ್ ಗಳಾದ ಚಾರ್ಜಿಂಗ್ ಪಾಯಿಂಟ್, ಡುಯಲ್ ಚೆನಲ್ ಎಪಿಎಸ್, ಸ್ಪೀಡೋಮೀಟರ್, ಡಿಜಿಟಲ್ ಟಚೋಮೀಟರ್ ಹಾಲೊಜನ್ ಅಳವಡಿಸಿ ಮಾಡಲಾಗಿರುವ ಹೆಡ್ ಲೈಟ್ (Halogen Headlight) ಹಾಗೂ ನೂತನ ಎಲ್ಇಡಿ ಆಧಾರಿತ ಟೇಲ್ ಲೈಟ್ ಮತ್ತು ಟ್ಯೂಬ್ಲೆಸ್ ಟೈಯರ್ ನಂತಹ ವಿಶಿಷ್ಟ ವೈಶಿಷ್ಟ್ಯತೆಗಳೊಂದಿಗೆ ಬೈಕ್ ತಯಾರಾಗುತ್ತಿದೆ.

ಆಕರ್ಷಕ ಬೆಲೆ

ಬುಲೆಟ್ ಹಾಗೂ ಜಾವಾ ಬೈಕ್ಗಳಿಗೆ (Bullet and Java Bike) ನೇರವಾಗಿ ಸ್ಪರ್ಧೆ ನೀಡಲು ಮಾರುಕಟ್ಟೆಗೆ ಇಳಿಯುತ್ತಿರುವ ಗೋಲ್ಡ್ ಸ್ಟಾರ್ 650 (Mahindra BSA Gold Star 650) ಬೈಕ್ ಬೆಲೆಯನ್ನು ಮುಂದಿದ್ದು 3.5 ರಿಂದ 6 ಲಕ್ಷದ ಎಕ್ಸ್ ಶೋರೂಮ್ ಬೆಲೆಯಲ್ಲಿ ದೊರಕಲಿದೆ. ಬೆಲೆಯಲ್ಲಿ ರಾಯಲ್ ಎನ್ಫೀಲ್ಡ್ ಗಿಂತ ಕೊಂಚ ಹೆಚ್ಚಿದ್ದರೂ ಕೂಡ ಇದರ ಅತ್ಯಾಕರ್ಷಕ ಫೀಚರ್ಸ್ಗಳು, ಮೈಲೇಜ್, ಲುಕ್ ಹಾಗೂ ವಿನ್ಯಾಸ ಎಂತವರನ್ನು ಮನಸೋತು ಖರೀದಿಸುವಂತೆ ಮಾಡಿಬಿಡುತ್ತದೆ.

advertisement

Leave A Reply

Your email address will not be published.