Karnataka Times
Trending Stories, Viral News, Gossips & Everything in Kannada

BMW ಲುಕ್ ಇರುವ ಈ ಬೈಕ್ 35 km ಮೈಲೇಜ್ ಜೊತೆಗೆ ಅತೀ ಕಡಿಮೆ ಬೆಲೆಗೆ

advertisement

ಭಾರತೀಯ ಆಟೋಮೊಬೈಲ್ ಮಾರುಕಟ್ಟೆಗೆ ಪ್ರತಿದಿನ ಒಂದಲ್ಲ ಒಂದು ವಿಶೇಷ ಬೈಕ್ ಗಳು ಪ್ರವೇಶವನ್ನು ಪಡೆಯುತ್ತಲೇ ಇರುತ್ತದೆ. ಹೀಗೆ ಗ್ರಾಹಕರ ಅನುಕೂಲಕ್ಕೆ ತಕ್ಕ ಹಾಗೆ ವಾಹನ ತಯಾರಿಕಾ ಕಂಪನಿ (Vehicle Manufacturing Companies) ಗಳು ಬೈಕ ಹಾಗೂ ಕಾರುಗಳನ್ನು ತಯಾರಿಸುವ ಸ್ಪರ್ಧೆಯಲ್ಲಿ ಮುಂದಿದೆ. ಅದರಂತೆ ಟಿವಿಎಸ್ ಕಂಪನಿ ಸ್ಟಾರ್ಮಿ ಲುಕ್ಕನ್ನು ಹೊಂದಿರುವ TVS Apache RTR 310 ಬೈಕನ್ನು ಪರಿಚಯಿಸಿದ್ದಾರೆ. ಸ್ಪೋರ್ಟ್ಸ್ ನೆಕ್ ಸೆಗ್ಮೆಂಟ್ (Sports Neck Segment) ನಲ್ಲಿ ಬಿಡುಗಡೆ ಮಾಡಲಾಗಿರುವ ಈ ಬೈಕಿನಲ್ಲಿ ಸಾಕಷ್ಟು ಆಧುನಿಕ ಫೀಚರ್ಸ್ ಗಳನ್ನು ಅಳವಡಿಸಲಾಗಿದ್ದು, ಇದರ ಆಕರ್ಷಕ ಡಿಸೈನ್ ವಿನ್ಯಾಸ ಹಾಗೂ ಬಣ್ಣಗಳು ಈಗಿನ ಯುವಕರನ್ನು ಸೆಳೆಯುತ್ತಿದೆ.

WhatsApp Join Now
Telegram Join Now

ಸ್ಟೈಲಿಶ್ ಡಿಸೈನ್ ಮತ್ತು ಶಕ್ತಿಯುತ ಇಂದನ ವ್ಯವಸ್ಥೆ:

 

Image Source: BikeWale

 

ನೋಡಲು ಬಹಳನೇ ರಾಗಡಾಗಿ ಕಾಣುವ ಟಿವಿಎಸ್ ಅಪಾಚಿ ಆರ್ ಟಿ ಆರ್ ಬೈಕಿನಲ್ಲಿ ನೂತನ ಡಿಸೈನ್ ಗಳಾದ, ಎಲ್ಇಡಿ ಹೆಡ್ ಲೈಟ್, ಮಸ್ಕುಲಾರ್ ಇಂಧನದ ಟ್ಯಾಂಕರ್ ಹಾಗೂ ಶಾರ್ಪ್ ಟೈಲ್ ಲೈಟ್ (Sharp tail light) ವ್ಯವಸ್ಥೆಯಿದೆ. ಹಲವು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿರುವ ಟಿವಿಎಸ್ ಅಪಾಚಿ ಆರ್ ಟಿ ಆರ್ ನೋಡಲು ಮಾತ್ರ ಆಕರ್ಷಕವಲ್ಲ, ಇದರ ಕಾರ್ಯವೈಖರಿ ಅದಕ್ಕಿಂತ ಒಂದು ಹೆಜ್ಜೆ ಮುಂದಿದೆ.

ಫುಲ್ ಸ್ಪೀಡ್ ನಲ್ಲಿ ಗಾಡಿಯನ್ನು ಚಲಾವಣೆ ಮಾಡಿದರೆ ಗಾಳಿಯಲ್ಲಿ ಹಾರುತ್ತಿರುವ ಅನುಭವವನ್ನು ಒದಗಿಸುತ್ತದೆ. 312.2 ಸಿಸಿ ಇಂಜಿನ್ ವ್ಯವಸ್ಥೆಯಲ್ಲಿ ತಯಾರು ಮಾಡಲಾಗಿರುವ ಈ ಬೈಕ್ 35.08 bhp ಶಕ್ತಿ ಹಾಗೂ 28.7 Nm ಟಾರ್ಕ್ ಅನ್ನು ಉತ್ಪಾದಿಸುವ ಮೂಲಕ ಪ್ರತಿ ಲೀಟರ್ ಪೆಟ್ರೋಲ್ ಗೆ 35 ಕಿಲೋಮೀಟರ್ ಮೈಲೇಜ್ ನೀಡುತ್ತದೆ.

advertisement

ಸುರಕ್ಷತೆಯತ್ತ ಮೊದಲ ಆದ್ಯತೆ:

 

Image Source: The Financial Express

 

ಸ್ಪೋರ್ಟ್ಸ್ ಬೈಕ್ ಸೆಗ್ಮೆಂಟ್ ನಲ್ಲಿ ಬಿಡುಗಡೆ ಮಾಡಲಾಗಿರುವ ಟಿವಿಎಸ್ ಅಪಾಚಿ ಆರ್ ಟಿ ಆರ್ 310 ಬೈಕ್ ನಲ್ಲಿ ಸುರಕ್ಷತೆಗೆ ಮೊದಲ ಆದ್ಯತೆಯನ್ನು ನೀಡಲಾಗಿದ್ದು, ಇದರಲ್ಲಿ ಎರಡು ಚಕ್ರಗಳಿಗೆ ಆಂಟಿ ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್ (ABS) ಹಾಗೂ ಗಾಡಿ ಚಲಾವಣೆ ಮಾಡುತ್ತಿರುವ ಸಮಯದಲ್ಲಿ ಶಕ್ತಿಯುತ ಗ್ರಿಪ್ಪನ್ನು (Stronger Grip) ಒದಗಿಸುವ ಅಲಾಯ್ ಚಕ್ರಗಳನ್ನು ಅಳವಡಿಸಿದ್ದಾರೆ. ಅಷ್ಟೇ ಅಲ್ಲಿದೆ ರೈಡ್ ಮೋಡ್, ಸ್ಲಿಪ್ಪರ್ ಕ್ಲಚ್ (Slipper Clutch) ಹಾಗೂ ಅತ್ಯುತ್ತಮ ಮುಂಭಾಗದ ಫೋರ್ಕ್ಗಳನ್ನು ಅಳವಡಿಕೆ ಮಾಡಿದ್ದಾರೆ. ಇದರಿಂದ ವಾಹನ ಚಲಾವಣೆ ಮಾಡುವವರಿಗೆ ಆರಾಮದಾಯಕ ಅನುಭವ ದೊರಕುತ್ತದೆ.

ಕೈಗೆಟಕುವ ಬೆಲೆಯಲ್ಲಿ ಅಪಾಚೆ ಆರ್ ಟಿ ಆರ್ ಲಭ್ಯ:

ಟಿವಿಎಸ್ ಕಂಪನಿಯೂ ಈಗಾಗಲೇ ಅಪಾಚಿ ಆರ್ ಟಿ ಆರ್ ಸೆಗ್ಮೆಂಟ್ನಲ್ಲಿ ಸಾಕಷ್ಟು ಬೈಕ್ ಗಳನ್ನು ಬಿಡುಗಡೆ ಮಾಡಿದ್ದು, ಎಲ್ಲಾ ಬೈಕ್ಗಳನ್ನು ಗ್ರಾಹಕರ ಕೈಗೆಟಕುವ ಬೆಲೆಗೆ ನೀಡಿದ್ದಾರೆ. ಅದರಂತೆ ಹೊಸ ಮಾಡೆಲ್ ನ ಅಪಾಚೆ ಆರ್ ಟಿ ಆರ್ 310 (TVS Apache RTR 310), 2024 ಬೈಕನ್ನು 2.43 ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದ್ದು, ಇದರ ಟಾಪ್ ಎಂಡ್ ರೂಪಾಂತರಗಳಾದ (Top end Variants) ಸ್ಟ್ಯಾಂಡರ್ಡ್, ಕ್ವಿಕ್ ಶಿಫ್ಟರ್ ಇರುವ ಆರ್ಸೆನಲ್ ಬ್ಲಾಕ್ & ಫ್ಯೂರಿ ಎಲ್ಲೋ ಬೈಕ್ಗಳಿಗೆ 2.64 ಲಕ್ಷ ಎಕ್ಸ್ ಶೋರೂಮ್ ಬೆಲೆಯನ್ನು ನಿಗದಿಪಡಿಸಲಾಗಿದೆ.

advertisement

Leave A Reply

Your email address will not be published.