Karnataka Times
Trending Stories, Viral News, Gossips & Everything in Kannada

Fuel Price: ದೇಶಾದ್ಯಂತ ಪೆಟ್ರೋಲ್ ಡೀಸೆಲ್ ಹಾಕಿಸುವವರಿಗೆ ಬೆಳ್ಳಂಬೆಳಿಗ್ಗೆ ಗುಡ್ ನ್ಯೂಸ್!

advertisement

GST on Petrol and Diesel: Government Plan: ಸತತ ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರ ಕೇಂದ್ರ ಸರ್ಕಾರ ರಚನೆಗೊಂಡ ಬಳಿಕ, ಜನರಿಗೆ ಉಪಯೋಗವಾಗುವಂತಹ ಸಾಕಷ್ಟು ನಿರ್ಧಾರಗಳನ್ನು ಕೈ ತೆಗೆದುಕೊಳ್ಳಲಾಗಿದೆ. ಅದರಂತೆ ಕೇಂದ್ರ ಸರ್ಕಾರವು ಇಂಧನದ ಮೇಲಿನ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿದ್ದು, ಸರಾಸರಿ 20 ರೂಪಾಯಿಗಳ ಇಳಿಕೆ ಮಾಡಿ ಅದನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ಚರ್ಚೆ ನಡೆಸುತ್ತಿದ್ದಾರೆ. ಈ ನಿರ್ಧಾರವು ಅಧಿಕೃತವಾಗಿ ಜಾರಿಗೊಂಡರೆ ಪೆಟ್ರೋಲ್ ಹಾಗೂ ಡೀಸೆಲ್(petrol and diesel) ನಂತಹ ಇಂಧನದ ಮೇಲೆ ₹2೦ರವರೆಗೂ ಗಣನೆಯ ಇಳಿಕೆ ಕಾಣಲಿದೆ. ಸದ್ಯದ ಪೆಟ್ರೋಲ್ ಮತ್ತು ಡೀಸೆಲ್ ಬಹುತೇಕ ಸಮಾನವಾಗಿರುವ ಕಾರಣ, ಭಾರತದದ್ಯಂತ ಇಂಧನದ ಮೇಲಿರುವಂತಹ ತೆರಿಗೆಯನ್ನು(Tax on oils) ಸಮಾನಗೊಳಿಸುವ ಸಲುವಾಗಿ ಸರ್ಕಾರ ಈ ನಿರ್ಧಾರವನ್ನು ಕೈ ತೆಗೆದುಕೊಳ್ಳಲು ಮುಂದಾಗಿದೆ.

WhatsApp Join Now
Telegram Join Now

ಸದ್ಯದಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ₹20‌‌ ಕಡಿಮೆ!!

ಹಣಕಾಸು ಮಂತ್ರಿಯಾದ ನಿರ್ಮಲಾ ಸೀತಾರಾಮನ್ ಅವರು ಈ ಕುರಿತಾದ ಮಾಹಿತಿಯನ್ನು ಅಧಿಕೃತವಾಗಿ ಹಂಚಿಕೊಂಡಿದ್ದು ಮುಂಬರಲಿರುವ 53ನೇ ಜಿಎಸ್ಟಿ ಕೌನ್ಸಿಲ್ ಮೀಟಿಂಗ್(Council’s Meeting) ನಲ್ಲಿ ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲನ್ನು ಒಂದೇ ವ್ಯಾಪ್ತಿಯ ಜಿಎಸ್ಟಿಗೆ ತರಲಿದ್ದಾರಂತೆ. ಹೀಗೆ ಇಂಧನದ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದರೆ, ರಾಜ್ಯ ಸರ್ಕಾರಗಳು ತಮ್ಮ ತಮ್ಮ ಆರ್ಥಿಕತೆಗೆ ಅನುಗುಣವಾಗುವ ಹಾಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ನಿರ್ಧರಿಸಬೇಕಾಗುತ್ತದೆ.

GST on Petrol and Diesel: Government Plan
Image Source: Hindustan Times

advertisement

ಜನರ ಅನುಕೂಲಕ್ಕಾಗಿ ಈ ನಿರ್ಧಾರ!

ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಜಿ ಎಸ್ ಟಿ 28% ಗೆ ನಿಗದಿಪಡಿಸಿದರೆ ಜನಸಾಮಾನ್ಯರಿಗೆ ಪೆಟ್ರೋಲ್ ಇಂಧನದ ಬೆಲೆಯಲ್ಲಿ ಪ್ರತಿ ಲೀಟರ್ಗೆ ₹19.71, ಡೀಸೆಲ್ ಮೇಲೆ ₹12.83 ರೂಗಳ ಪರಿಹಾರ ದೊರಕಲಿದೆ. ಇದರಿಂದಾಗಿ ಸರ್ಕಾರಕ್ಕೆ ಇಂಧನದ ಮೇಲಿನ ಆದಾಯ ತೀರಾ ಕಡಿಮೆಯಾದರೂ ಕೂಡ ಜನಸಾಮಾನ್ಯರ ಅನುಕೂಲಕ್ಕಾಗಿ ಮೋದಿಜಿಯ ಈ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದರೆ ತಪ್ಪಾಗಲಾರದು.

ಬೆಲೆ ಏರಿಕೆಯಿಂದ ಜನರಿಗೆ ಸಿಕ್ತು ಬಿಗ್ ರಿಲೀಫ್!

ಸದ್ಯ ದೆಹಲಿಯಲ್ಲಿ ಪೆಟ್ರೋಲ್ ₹94.72/L ಬೆಲೆಗೆ ಹಾಗೂ ಡೀಸೆಲ್ ಅನ್ನು 87.68/L ಬೆಲೆಗೆ ಮಾರಾಟ ಮಾಡಲಾಗುತ್ತಿದೆ. 53ನೇ ಮೀಟಿಂಗ್ ನಡೆಸಿದ ಬಳಿಕ ಸರ್ಕಾರವು ತಮ್ಮ ನಿರ್ಧಾರವನ್ನು ಅನುಷ್ಠಾನಗೊಳಿಸಿದರೆ, ದೆಹಲಿಯ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ₹75.0, ಡೀಸೆಲ್ ಬೆಲೆಯೂ 74.79ಕ್ಕೇ ಸೀಮಿತವಾಗಲಿದೆ. ದಿನಬಳಕೆ ಉತ್ಪನ್ನಗಳ ಮೇಲಿನ ಬೆಲೆ ಏರಿಕೆಯಿಂದಾಗಿ ತತ್ತರಿಸಿ ಹೋಗಿದ್ದಂತ ಜನರಿಗೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಬೆಲೆ ಇಳಿಕೆಯು ತಕ್ಕಮಟ್ಟದ ರಿಲೀಫ್ ನೀಡಲಿದೆ.GST on Petrol and Diesel: Government Plan

advertisement

Leave A Reply

Your email address will not be published.