Karnataka Times
Trending Stories, Viral News, Gossips & Everything in Kannada

LIC Jeevan Akshay Policy: ಎಲ್ಐಸಿ ಜೀವನ್ ಅಕ್ಷಯ್ ಪಾಲಿಸಿಯಲ್ಲಿ ಒಮ್ಮೆ ಹೂಡಿಕೆ ಮಾಡಿದರೆ 20000 ಪಿಂಚಣಿ ಪಡೆಯಬಹುದು!

advertisement

ಭಾರತೀಯ ಜೀವ ವಿಮಾ ಕಂಪನಿ ಲಿಮಿಟೆಡ್ (Indian Life Insurance Company Limited) ಇದುವರೆಗೆ ಸಾಕಷ್ಟು ಉತ್ತಮವಾಗಿರುವ ವಿಮಾ ಪಾಲಿಸಿಗಳನ್ನು ಜನರಿಗೆ ನೀಡಿದೆ. ಎಲ್ಲಾ ವರ್ಗದ ಜನರಿಗೂ ಸಹಾಯಕವಾಗುವಂತಹ ಪಾಲಿಸಿಗಳು ಎಲ್ಐಸಿ (LIC) ಎಲ್ಲಿ ಲಭ್ಯ ಇವೆ. ಅಂತಹ ಒಂದು ಉತ್ತಮ ಹೂಡಿಕೆಗಾಗಿ ನೀವು ಯೋಚನೆ ಮಾಡಿದರೆ ಎಲ್ಐಸಿ ಯ ಜೀವನ ಅಕ್ಷಯ ಪಾಲಿಸಿ ಅತ್ಯುತ್ತಮ ಆಯ್ಕೆ ಆಗಲಿದೆ!

LIC Jeevan Akshay Policy:

 

 

ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಪಿಂಚಣಿ (Pension) ಇರುವುದಿಲ್ಲ. ಆದರೆ ಪಿಂಚಣಿ ಹಣ ಸಿಕ್ಕರೆ 60 ವರ್ಷಗಳ ನಂತರ ತಮ್ಮ ವೃದ್ಧಾಪ್ಯ ಜೀವನವನ್ನು ಹಿರಿಯ ನಾಗರಿಕರು ಸುಲಭವಾಗಿ ಆರ್ಥಿಕ ಸಮಸ್ಯೆ ಇಲ್ಲದೆ ಕಳೆಯಬಹುದು. ಈ ಕಾರಣಕ್ಕಾಗಿ ಎಲ್ಐಸಿ ಜೀವನ್ ಅಕ್ಷಯ್ ಪಾಲಿಸಿ (LIC Jeevan Akshay Policy) ಆರಂಭಿಸಿದೆ. ಇದರಲ್ಲಿ ಒಮ್ಮೆ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 20 ಸಾವಿರ ರೂಪಾಯಿಗಳವರೆಗೆ ಪಿಂಚಣಿ ಪಡೆದುಕೊಳ್ಳಲು ಸಾಧ್ಯವಿದೆ.

advertisement

ಎಲ್ಐಸಿಯು ಜೀವನ್ ಅಕ್ಷಯ್ ಪಾಲಿಸಿ ಜೀವಿತಾವಧಿಯ ಪಿಂಚಣಿಗೆ ಸಂಬಂಧಿಸಿದ ಅತ್ಯಂತ ಉತ್ತಮವಾಗಿರುವ ಯೋಜನೆಗಳಲ್ಲಿ ಒಂದು. ಇಲ್ಲಿ ಹೂಡಿಕೆ ಮಾಡಿದ್ರೆ ನಮ್ಮ ಭವಿಷ್ಯವನ್ನು ಸುರಕ್ಷಿತವಾಗಿಸಿಕೊಳ್ಳಬಹುದು. ಒಮ್ಮೆ ಹೂಡಿಕೆ ಮಾಡಿದ್ರೆ ಜೀವಮಾನ ಪರ್ಯಂತ ಪಿಂಚಣಿ ಪಡೆದು ಆರ್ಥಿಕ ಸಮಸ್ಯೆ ಇಲ್ಲದೆ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿದೆ.

ಎಲ್ಐಸಿಯ ಜೀವನ ಅಕ್ಷಯ ಪಾಲಿಸಿಯಲ್ಲಿ 30 ರಿಂದ 85 ವರ್ಷದವರೆಗಿನವರು ಹೂಡಿಕೆ ಮಾಡಬಹುದು. ಈ ಪಾಲಿಸಿಯ ವೈಶಿಷ್ಟ್ಯತೆ ಅಂದ್ರೆ ಇಲ್ಲಿ ಮಾಸಿಕ ಪ್ರೀಮಿಯಂ ಪಾವತಿಸುವ ಅಗತ್ಯವಿಲ್ಲ. ನೀವು ಒಂದೇ ಸಲಕ್ಕೆ ಹೂಡಿಕೆ ಮಾಡಬೇಕು. ಈ ಪಾಲಿಸಿಯಲ್ಲಿ 40,72,000ಗಳನ್ನು ಒಂದು ಬಾರಿಗೆ ಠೇವಣಿ ಮಾಡಿದರೆ, 60 ವರ್ಷದ ಬಳಿಕ 20,000 ಮಾಸಿಕ ಪಿಂಚಣಿಯಾಗಿ ಪಡೆಯಬಹುದು. ಈ ಯೋಜನೆಯಲ್ಲಿ ಕನಿಷ್ಠ ಹೂಡಿಕೆ ಮೊತ್ತ ಒಂದು ಲಕ್ಷ ರೂಪಾಯಿ ಹಾಗೂ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ.

How to Start LIC Jeevan Akshay Policy?

 

 

ಎಲ್ಐಸಿ ಯ ಜೀವನ ಅಕ್ಷಯ ಪಾಲಿಸಿ (LIC Jeevan Akshay Policy) ಆರಂಭಿಸಲು ಒಬ್ಬ ವ್ಯಕ್ತಿ ಅಥವಾ ಜಂಟಿಯಾಗಿ ಖಾತೆ ತೆರೆದು ಪಾಲಿಸಿ ಶುರು ಮಾಡಬಹುದು. ಈ ಪಾಲಿಸಿಯಲ್ಲಿ ಹೂಡಿಕೆ ಮಾಡಿ ಮೂರು ತಿಂಗಳ ಬಳಿಕ ಸಾಲ ಸೌಲಭ್ಯ ಪಡೆಯಬಹುದು. ಎಲ್ಐಸಿ ಯ ಜೀವನ ಅಕ್ಷಯ್ ಪಾಲಿಸಿ ಒಂದೇ ಸಮಯದ ಹೂಡಿಕೆ ಆಗಿದ್ದು ನೀವು ಮತ್ತೆ ಮತ್ತೆ ಪ್ರೀಮಿಯಂ ಪಾವತಿಸುವ ಅಗತ್ಯ ಇಲ್ಲ. ಎಲ್ಐಸಿ ಯ ಜೀವನ ಅಕ್ಷಯ್ ಪಾಲಿಸಿ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಎಲ್ಐಸಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ಎಲ್ಐಸಿ ಏಜೆಂಟ್ ರನ್ನು ಸಂಪರ್ಕಿಸಬಹುದು.

advertisement

Leave A Reply

Your email address will not be published.